ರಾಮನ ಕೊಪ್ಪಲು ಡೈರಿಗೆ ನೂತನ ಅಧ್ಯಕ್ಷರಾಗಿ ಮಂಜೇಗೌಡ ಅವಿರೋಧ ಆಯ್ಕೆ

ವಿಜಯ ಸಂಘರ್ಷ ನ್ಯೂಸ್ 
ಕೆ.ಆರ್.ಪೇಟೆ: ತಾಲೂಕಿನ ಸಂತೆಬಾಚಳ್ಳಿಯ ಹೋಬಳಿಯ ರಾಮನಕೊಪ್ಪಲು ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ನೂತನ ಅಧ್ಯಕ್ಷ ರಾಗಿ ಮಂಜೇಗೌಡ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಸಂಘದ ಹಿಂದಿನ ರುದ್ರೇಶ್ ಅವರ ರಾಜೀನಾಮೆಯಿಂದ ತೆರವಾಗಿದ್ದ ಅಧ್ಯಕ್ಷರ ಸ್ಥಾನಕ್ಕೆ ಇಂದು ಚುನಾವಣೆ ನಿಗದಿಯಾಗಿತ್ತು. ಅಧ್ಯಕ್ಷರ ಸ್ಥಾನಕ್ಕೆ ಮಂಜೇಗೌಡ ಹೊರತು ಪಡಿಸಿ ಉಳಿದ ಯಾವ ಸದಸ್ಯರು ನಾಮಪತ್ರ ಸಲ್ಲಿಕೆಯಾಗದ ಕಾರಣ ಅಂತಿಮವಾಗಿ ಮಂಜೇಗೌಡ ಅವರು ನೂತನ ಅಧ್ಯಕ್ಷರ ಸ್ಥಾನಕ್ಕೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಘೋಷಣೆ ಮಾಡಿದರು.

ಬೆಂಬಲಿಗರಿಂದ ಅಭಿನಂದನೆ ಸ್ವೀಕರಿಸಿ ಮಾತನಾಡಿದ ಅಧ್ಯಕ್ಷ ಮಂಜೇಗೌಡ ನನ್ನ ಆಡಳಿತ ಅವಧಿ ಯಲ್ಲಿ ಪ್ರಾಮಾಣಿಕವಾಗಿ ನೂತನ ಕಟ್ಟಡ ನಿರ್ಮಿಸಲು ಪ್ರಾಮಾಣಿಕ ವಾಗಿ ದುಡಿಯುತ್ತಾ ಹಾಲು ಉತ್ಪಾದಕ ಸಂಘವನ್ನು ಮಾದರಿ ಸಂಘವಾಗಿ ರೂಪಿಸಲು ಶ್ರಮವಹಿಸುತ್ತೇನೆ, ಗುಣಮಟ್ಟದ ಹಾಲು ಪೂರೈಕೆ ಮಾಡುವ ಮೂಲಕ ಸಂಘದ ಅಭಿವೃದ್ಧಿಗೆ ಎಲ್ಲರೂ ಸಹಕಾರ ನೀಡಬೇಕು. ನನ್ನ ಮೇಲೆ ವಿಶ್ವಾಸ ವಿಟ್ಟು ಸಂಘದ ಅಧ್ಯಕ್ಷನಾಗಲು ಸಹಕರಿಸಿದ ಕಾರ್ಯಕಾರಿ ಸಮಿತಿಯ ನಿರ್ದೇಶಕರು ಮತ್ತು ಸಂಘದ ಸದಸ್ಯರಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಹೇಳಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು