ವಿಜಯ ಸಂಘರ್ಷ ನ್ಯೂಸ್
ಶಿವಮೊಗ್ಗ: ಕಸಬಾ ಹೋಬಳಿ ಗ್ರಾಮಲೆಕ್ಕಿಗ ಸಂಜಯ್ ಮೋಹಿತೆ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ಪೌತಿ ಖಾತೆ ಮಾಡಿಕೊಡಲು ಕಿರಣ್ ಎಂಬುವರಿಂದ 25 ಸಾವಿರ ರೂಪಾಯಿ ಲಂಚ ಪಡೆಯುವಾಗ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದಾರೆ.
ಕಿರಣ್ ಅವರ ಅಜ್ಜ ಮರಣ ಹೊಂದಿದ್ದು, ಅವರ ಹೆಸರಿನಲ್ಲಿರುವ 2 ಎಕರೆ ಜಮೀನನ್ನು ಅಜ್ಜಿಯ ಹೆಸರಿಗೆ ಪೌತಿ ಖಾತೆ ಮಾಡಿ ಕೊಡಲು ತಾಲೂಕು ಕಚೇರಿಗೆ ಅರ್ಜಿ ಸಲ್ಲಿಸಿದ್ದು, ಇದರ ಬಗ್ಗೆ ವಿಚಾರಿಸಲು ಸಂಜಯ್ ಮೋಹಿತೆ ಅವರನ್ನು ಭೇಟಿಯಾಗಿದ್ದಾರೆ.
ಅವರು ಪೌತಿ ಖಾತೆ ಮಾಡಿಕೊಡಲು 25 ಸಾವಿರ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದಾರೆ. ಈ ಬಗ್ಗೆ ಕಿರಣ್ ದೂರು ನೀಡಿದ್ದು, ಸಂಜೆ ಕಚೇರಿಯಲ್ಲಿ ಲಂಚ ಸ್ವೀಕರಿಸುವಾಗ ದಾಳಿ ಮಾಡಿ ಹಣದ ಸಹಿತ ವಶಕ್ಕೆ ಪಡೆಯಲಾಗಿದೆ.
Tags:
ಶಿವಮೊಗ್ಗ ಸುದ್ದಿ
ದುರಾಸೆ ನಗರಸಭೆ ಮತ್ತು ತಾಲ್ಲೂಕು ಆಫೀಸ್ ನೋರಿಗೆ
ಪ್ರತ್ಯುತ್ತರಅಳಿಸಿ