ಭದ್ರಾವತಿ-ಲೋಕಾಯುಕ್ತ ರಿಂದ ಸಾರ್ವಜನಿಕರ ಅಹವಾಲು ಸ್ವೀಕಾರ

ವಿಜಯ ಸಂಘರ್ಷ ನ್ಯೂಸ್ 

ಭದ್ರಾವತಿ: ನಾವು ಕಾಟಾಚಾರಕ್ಕೆ ಸಭೆ ನಡೆಸಲು ಬರಲ್ಲ. ಅಧಿಕಾರಿಗಳ ಹೊಟ್ಟೆ ಮೇಲೆ ಹೊಡೆಯಬಾರದೆಂದು ನಾವಿದ್ದೇವೆ. ಲೋಕಾಯುಕ್ತ ಸಭೆಯ ವಿಚಾರ ಮಾಧ್ಯಮಗಳಿಗೆ ತಿಳಿಸದಿದ್ದಲ್ಲಿ ನಿಮ್ಮ ಇಲಾಖೆಗೆ ಬ್ಯಾಟರಿ ಹಾಕಿ ಸರಿಯಾದ ಕ್ರಮ ಕೈಗೊಳ್ಳಬೇಕಾಗು ತ್ತದೆ ಎಂದು ಲೋಕಾಯುಕ್ತ ಇನ್ಸ್‌ಪೆಕ್ಟರ್ ವೀರಬಸಪ್ಪ ಎಲ್. ಕುಸಲಾಪುರ ಮಾರ್ಮಿಕ ವಾಗಿ ಹೇಳಿದರು. 

ತಾಲೂಕು ಪಂಚಾಯಿತಿ ಸಭಾಂಗಣ ದಲ್ಲಿ ಲೋಕಾಯುಕ್ತ ಇಲಾಖೆಯಿಂದ ಅರ್ಜಿ ಸ್ವೀಕಾರ ಮಾಡುವ ಸಭೆಯಲ್ಲಿ ಪತ್ರಿಕೆಗಳು ಗಮನ ಸೆಳೆದ ವಿಚಾರ ವಾಗಿ ಅವರು ಜನರಿಗೆ ಮಾಧ್ಯಮ ಗಳಿಂದ ಮಾಹಿತಿ ದೊರೆತರೆ ನಾಲ್ಕಾರು ಮಂದಿ ತಮ್ಮ ನೋವನ್ನು ಹೇಳಿಕೊಳ್ಳು ತ್ತಾರೆ. ಅವರಲ್ಲಿ ಒಬ್ಬರಿಗಾದರೂ ನ್ಯಾಯ ಸಿಕ್ಕರೆ ಸಾರ್ಥಕವಾಗುತ್ತದೆ. ಆದ್ದರಿಂದ ಮಾಧ್ಯಮಗಳಿಗೆ ಸರಿಯಾಗಿ ಮಾಹಿತಿ ನೀಡದಿದ್ದಲ್ಲಿ ನಿರ್ಧಾಕ್ಷಿಣ್ಯ ಕ್ರಮ ಅನುಸರಿಸಬೇಕಾಗುತ್ತದೆ. ಇಲ್ಲದಿದ್ದಲ್ಲಿ ನಿಮ್ಮ ಇಲಾಖೆಗೆ ಕ್ರಮ ಅಗತ್ಯ ಆಗುತ್ತದೆ. ಸಾರ್ವಜನಿಕರಿಗೆ ಸರಿಯಾದ ವೇಳೆಗೆ ಅವರ ಕೆಲಸ ಮಾಡಿಕೊಟ್ಟರೆ ಅದೇ ಪುಣ್ಯದ ಕೆಲಸವಾಗುತ್ತದೆ ಎಂದರು.

ಸಾರ್ವಜನಿಕರಿಗೆ ಸರಿಯಾದ ವೇಳೆಗೆ ಅವರ ಕೆಲಸ ಮಾಡಿ ಕೊಟ್ಟರೆ ಅದೇ ಪುಣ್ಯದ ಕೆಲಸವಾಗುತ್ತದೆ ಅಲೆದಾಡಿ ಸುವುದು ಬಿಡಬೇಕು. ಇದನ್ನು ಎಲ್ಲಾ ಇಲಾಖೆಗಳ ಅಧಿಕಾರಿಗಳು ತಿಳಿದು ಕೊಳ್ಳಿ ಎಂದ ಅವರು, ತಾಲೂಕು ಕಚೇರಿ, ನಗರಸಭೆ, ನಾಲ್ಕಾರು ಪಿಡಿಓ ಗಳ ವಿರುದ್ಧ ಬಹಳ ದೂರುಗಳು ಕೇಳಿ ಬಂದಿದೆ ಎಂದು ಎಚ್ಚರಿಸಿದರು.

ವೇದಿಕೆಯಲ್ಲಿ ಉಪ ತಹಸೀಲ್ದಾ‌ರ್ ಉಮೇಶ್, ತಾಪಂ ಸಹಾಯಕ ನಿರ್ದೇಶಕ ಉಪೇಂದ್ರ ಇದ್ದರು ಸಭೆಯಲ್ಲಿ ಆರ್‌ಎಫ್‌ಓ ದುಗ್ಗಪ್ಪ, ಬಿಇಓ ಎ.ಕೆ. ನಾಗೇಂದ್ರಪ್ಪ ವಿವಿಧ ಇಲಾಖಾಧಿಕಾರಿ ಗಳು, ಲೋಕಾಯುಕ್ತ ಕಚೇರಿ ಸಿಬ್ಬಂದಿ ಗಳಾದ ಪ್ರಕಾಶ್ ಮತ್ತು ಟೀಕಪ್ಪ ಇದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು