ಕತ್ತು ಹಿಸುಕಿ ಯುವಕನ ಕೊಲೆ - ತಂಗಿಯ ಗಂಡನಿಂದಲೇ ಕೊಲೆಗೆ ಸುಫಾರಿ

ವಿಜಯ ಸಂಘರ್ಷ ನ್ಯೂಸ್ 
ಭದ್ರಾವತಿ: ತಾಲ್ಲೂಕಿನ ಕಾರೇಹಳ್ಳಿ ಗ್ರಾಮದ ಬಳಿಯ ಯುವಕನೋರ್ವ ನನ್ನು ಕೊಲೆ ಮಾಡಿ ಖಾಲಿ ಜಾಗದಲ್ಲಿ ಎಸೆದುಹೋಗಿರುವ ಘಟನೆ ತಾಳೆಎಣ್ಣೆ ಪ್ಯಾಕ್ಟರಿ ಬಳಿ ಘಟನೆ ನಡೆದಿದೆ.

ಮೃತದೇಹವನ್ನು ಮೈದೊಳಲು ಮಲ್ಲಾಪುರದ ನಿವಾಸಿ ಪರುಶು ರಾಮ್‌(36) ಎಂದು ಗುರುತಿಸಲಾಗಿದೆ.

ಈತನ ತಂಗಿ ಗಂಡನೇ ಪ್ರಕರಣದ ಪ್ರಮುಖ ಆರೋಪಿ ಎನ್ನುವುದು ಬೆಳಕಿಗೆ ಬಂದಿದೆ. ಪ್ರಕರಣದಲ್ಲಿ ತರೀಕೆರೆ ತಾಲೂಕಿನ ಓರ್ವ ಸೇರಿದಂತೆ ಮೂವರನ್ನು ಪ್ರಕರಣದಲ್ಲಿ ಬಂಧಿಸಲಾಗಿದೆ.

ತಂಗಿ ಗಂಡ ನೀಡಿದ ಸುಪಾರಿ ಅನ್ವಯ ಆರೋಪಿಗಳು ಪರಶುರಾಮನ ಕುತ್ತಿಗೆ ಬಿಗಿದು ಕೊಲೆ ಮಾಡಿ ನಿರ್ಜನ ಪ್ರದೇಶದಲ್ಲಿ ಶವ ಎಸೆದುಹೋಗಿದ್ದರು.

ವ್ಯಕ್ತಿಯೊಬ್ಬನನ್ನು ಕೊಲೆ ಮಾಡಿ ಎಸೆದಿರುವುದನ್ನು ಗಮನಿಸಿದ ಸ್ಥಳೀಯ ರೈತರಿಗೆ ಮೃತದೇಹ ಕಾಣಿಸಿದೆ. ಜೊತೆಗೆ ಕೊಳೆತ ವಾಸನೆಯ ಬರುತ್ತಿತ್ತು. ತಕ್ಷಣ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು