ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘದ ಬಲವರ್ಧನೆಗೆ ಸದಸ್ಯರ ಸಹಕಾರ ಅಗತ್ಯ: ಡಿ.ಜಿ.ನಾಗರಾಜ್

ವಿಜಯ ಸಂಘರ್ಷ ನ್ಯೂಸ್ 
ಶಿವಮೊಗ್ಗ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘದ ಜಿಲ್ಲಾ ಘಟಕದ ಪದಾಧಿಕಾರಿಗಳು ಮತ್ತು ನಿರ್ದೆಶಕರ ಸಭೆ ಜಿಲ್ಲಾಧ್ಯಕ್ಷ ಡಿ.ಜಿ. ನಾಗರಾಜ್ ನೇತೃತ್ವದಲ್ಲಿ ಸೋಮವಾರ ಸಭೆ ನಡೆಯಿತು. 

ನಗರದ ಪತ್ರಿಕಾ ಕಾರ್ಯಾಲಯದಲ್ಲಿ ಏರ್ಪಡಿಸಲಾಗಿದ್ದ ಸಭೆಯಲ್ಲಿ ಪದಾಧಿ ಕಾರಿಗಳಿಗೆ ಗುರುತಿನ ಚೀಟಿ ವಿತರಿಸಿ ನಿರ್ದೆಶಕರುಗಳು ಅಂತಿಮ ಆಯ್ಕೆಪಟ್ಟಿ ಅನುಮೋದಿಸಲಾಯಿತು. 

ಸಭೆಯ ಒಪ್ಪಿಗೆಯ ಮೇರೆಗೆ 2025 ರ ನೂತನ ವರ್ಷದಲ್ಲಿ ಸಂಘದ ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿ ಮತ್ತು ಪತ್ರಿಕಾ ಹೇಳಿಕೆ ಸ್ವೀಕರಿಸಲು ಒಪ್ಪಿಗೆ ಪಡೆಯಲಾಯಿತು.

ಈ ಸಂದರ್ಭದಲ್ಲಿ ಸಂಘದ ಜಿಲ್ಲಾಧ್ಯಕ್ಷ ಡಿ.ಜಿ.ನಾಗರಾಜ್ ಮಾತನಾಡಿ, ಸಂಘದ ಬಲವರ್ಧನೆಗೆ ಮತ್ತು ಅಭಿವೃದ್ಧಿಗೆ ಹಾಗೂ ಮುಂದಿನ ಕಾರ್ಯ ಚಟುವಟಿಕೆ ಬಗ್ಗೆ ಸಹಕರಿಸು ವಂತೆ ಹಾಗೂ ಸಲಹೆಗಳನ್ನು ನೀಡುವಂತೆ ಕೋರಿದರು.

ಈಗಾಗಲೇ ಹಲವು ಸದಸ್ಯರಿಗೆ ಗುರುತಿನ ಚೀಟಿ ನೀಡಲಾಗಿದ್ದು, ಹೊಸದಾಗಿ 50 ಕ್ಕೂ ಹೆಚ್ಚು ಸದಸ್ಯರು ನೊಂದಣಿಗೆ ಅರ್ಜಿ ಸಲ್ಲಿಸಿದ್ದು ಪರಿಶೀಲಿಸಿ ಗುರುತಿನ ಚೀಟಿ ನೀಡಲು ಒಪ್ಪಿಗೆ ಪಡೆಯಲಾಯಿತು. 

ಸಭೆಯಲ್ಲಿ ಉಪಾಧ್ಯಕ್ಷ ಚಿತ್ರಪ್ಪ ಯರಬಾಳ, ಪ್ರಧಾನ ಕಾರ್ಯದರ್ಶಿ ಡಿ.ಪಿ.ಅರವಿಂದ್, ಸಹಕಾರ್ಯದರ್ಶಿ ಶಿವರಾಜ್ ಬಿ.ಸಿ, ಸಂಘಟನಾ ಕಾರ್ಯದರ್ಶಿ ಅಣ್ಣಪ್ಪ.ಎಂ, ಖಜಾಂಚಿ ಸತೀಶ್ ಗೌಡ ಕೆ.ಎಂ, ನಿರ್ದೇಶಕ ರಾದ ನಂದನ್ ಕುಮಾರ್ ಸಿಂಗ್, ಲಕ್ಷ್ಮಣ ಕುಮಾರ್ ಉದಾವತ್,ಭರದ್ವಾಜ್ ಯು.ಎಸ್,ಸುರೇಶ್ ಬಿ.ಎ,ಗಿರೀಶ್ ಬಿ.ಎಸ್.ಷಡಾಕ್ಷರಪ್ಪ ಜಿ.ಆರ್ ಉಪಸ್ಥಿತರಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು