ವಿಜಯ ಸಂಘರ್ಷ ನ್ಯೂಸ್
ಭದ್ರಾವತಿ: ನಮ್ಮ ದೇಶ ಕೃಷಿ ಪ್ರಧಾನ ದೇಶವಾಗಿದ್ದು ಬಹಳಷ್ಟು ಜನ ಕೃಷಿಯನ್ನು ಅವಲಂಬಿಸಿದ್ದಾರೆ. ರೈತರು ಬೆಳೆಗಳನ್ನ ಬೆಳೆಯುವುದರಿಂದಲೇ ಮನುಜ ಕುಲ ಶಾಂತಿಯುತವಾಗಿ ಜೀವನ ನಡೆಸಲು ಸಾಧ್ಯವಾಗಿದೆ ಎಂದು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಆಶ್ರಿತ ನಗರದ ವಿಶ್ವೇಶ್ವರಾಯ ವಿದ್ಯಾ ಸಂಸ್ಥೆಯ ಅಧ್ಯಕ್ಷ ಸಿದ್ದಬಸಪ್ಪ ಹೇಳಿದರು.ಹೊಸ ಸೇತುವೆ ಸರ್ಕಾರಿ ನೌಕರರ ಸಂಘದ ಆಶ್ರಿತ ನಗರದ ವಿಶ್ವೇಶ್ವರಾಯ ವಿದ್ಯಾ ಸಂಸ್ಥೆ ಹಮ್ಮಿಕೊಳ್ಳ ಲಾಗಿದ್ದ ರೈತ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಪ್ರಗತಿಪರ ರೈತ ಎ.ಪ್ರಕಾಶ್ ಅರಳಿಹಳ್ಳಿ
ಸನ್ಮಾನ ಸ್ವೀಕರಿಸಿ ಮಾತನಾಡಿ, ಕೃಷಿಯ ಐತಿಹಾಸಿಕ ಹಿನ್ನೆಲೆ ಕೃಷಿ ಚಟುವಟಿಕೆಯ ಅದ್ಭುತಾವಕಾಶಗಳನ್ನು ಹೊಂದಿದ್ದು ಕೃಷಿ ಕೇವಲ ಮನುಜ ಕುಲಕ್ಕೆ ಮಾತ್ರವಲ್ಲ ಪಶು ಪಕ್ಷಿ ಮನುಜ ಕುಲಕ್ಕೆ ಎಂದರು.
ಮತ್ತೊರ್ವ ಸನ್ಮಾನಿತ ಗೋಪಾಲ್ ಮಾತನಾಡಿ ಕೃಷಿ ಚಟುವಟಿಕೆಯ ನೈಜ ಚಿತ್ರಣವನ್ನು ಕಟ್ಟಿಕೊಟ್ಟು ಕೃಷಿಯಲ್ಲಿನ ಶ್ರಮ, ಕಷ್ಟ ಸಾಧ್ಯತೆಗಳ ಕುರಿತು ತಿಳಿಸಿದರು. ಬಿ. ಸಂಸ್ಥೆಯ ಎಲ್.ರಂಗಸ್ವಾಮಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಸಂಸ್ಥೆಯ ಕಾರ್ಯದರ್ಶಿಎಸ್.ಕೆ.ಮೋಹನ್, ನಿರ್ದೇಶಕರುಗಳಾದ ಚೆನ್ನಯ್ಯ, ಪುಟ್ಟಲಿಂಗ ಮೂರ್ತಿ ಮಾತನಾಡಿದರು. ರಮೇಶ್, ಜನಾರ್ದನ್, ಶ್ರೀನಿವಾಸ ಬಾಗೋಡಿ, ರಮೇಶ್, ಆಡಳಿತ ಅಧಿಕಾರಿ ಡಾ.ರಾಕೇಶ್. ಎಸ್. ಪಿ., ದೈಹಿಕ ಶಿಕ್ಷಣ ನಿರ್ದೇಶಕ ಶಿವಲಿಂಗೇಗೌಡ ಮುಖ್ಯೋಪಾಧ್ಯಾಯರಾದ ಹೇಮಾವತಿ,ರೇಣುಕಪ್ಪ, ಚೈತ್ರ, ಕಿರಣ್ ಕುಮಾರ್, ಶಿಕ್ಷಕ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
ನೇತ್ರಾವತಿ ಸ್ವಾಗತಿಸಿ, ರೇವತಿ ಅತಿಥಿ ಗಳನ್ನು ಪರಿಚಯಿಸಿದರು, ರೇಣುಕಪ್ಪ ನಿರೂಪಿಸಿದರೆ, ಅಲಿಮಿಯ ವಂದಿಸಿದರು.