ಏಕಾಗ್ರತೆ ಅಭ್ಯಾಸ ಪರಿಶ್ರಮ ಇವುಗಳೇ ಪರೀಕ್ಷೆಯಲ್ಲಿ ಗೆಲುವಿನ ಸೋಪಾನಗಳು: ಡಾ:ಎಸ್.ಟಿ.ಅರವಿಂದ್

ವಿಜಯ ಸಂಘರ್ಷ ನ್ಯೂಸ್ 
ಶಿವಮೊಗ್ಗ: ಪ್ರೌಢ ಶಾಲಾ ಹಂತದಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿನಿ ಯರಲ್ಲಿ ಅವರ ವಯೋಮಾನ ಕ್ಕನುಗುಣ ವಾಗಿ ಏಕಾಗ್ರತೆಯ ಕೊರತೆ ಯಿಂದ, ಒಂದೇ ವಿಷಯದ ಮೇಲೆ ತಮ್ಮ ಗಮನವನ್ನು ಕೇಂದ್ರೀಕರಿಸುವ ಸಾಮರ್ಥ್ಯ ಕಡಿಮೆಯಿದ್ದು, ನಿವಾರಿಸಿ ಕೊಂಡು ವಿವಿಧ ವಿಷಯಗಳನ್ನು ಅಭ್ಯಾಸ ಮಾಡಲು ತಯಾರಿಸಿಕೊಂಡ ವೇಳಾಪಟ್ಟಿಗನುಗುಣವಾಗಿ ವರ್ಷದ ಪ್ರಾರಂಭದಿoದಲೂ ನಿರಂತರ ಪರಿಶ್ರಮ ಪಟ್ಟು ಓದಿ ವಿವಿಧ ಪರಿಕಲ್ಪನೆಗಳನ್ನು ಮೈಗೂಡಿಸಿ ಕೊಂಡಲ್ಲಿ ಎಂತಹ ಪರೀಕ್ಷೆಯನ್ನಾ ದರೂ ಎದುರಿಸಿ, ಅದರಲ್ಲಿ ಯಶಸ್ಸನ್ನು ಸಾಧಿಸಬಹುದು ಎಂದು ಮನೋವೈದ್ಯ ಹಾಗೂ ಪಾಸಿಟಿವ್ ಮೈಂಡ್ಆಸ್ಪತ್ರೆ ಯ ವೈದ್ಯಕೀಯ ನಿರ್ದೇಶಕ ಡಾ: ಅರವಿಂದ್ ಅಭಿಪ್ರಾಯ ಪಟ್ಟರು.

ಅವರು ರೋಟರಿ ಆಂಗ್ಲ ಪ್ರೌಢ ಶಾಲೆ ಹಾಗೂ ಭಾರತೀಯ ವೈದ್ಯಕೀಯ ಸಂಘ ಶಿವಮೊಗ್ಗ ಶಾಖೆ ಇವುಗಳ ಸಂಯುಕ್ತಾ ಶ್ರಯದಲ್ಲಿ ಭಾರತೀಯ ವೈದ್ಯಕೀಯ ಸಂಘದ ಅಮೃತ ಮಹೋತ್ಸವದ ಅಂಗವಾಗಿ ಪ್ರೌಢ ಶಾಲಾ ಮಕ್ಕಳಿಗೆ ಏರ್ಪಡಿಸಿದ ಪರೀಕ್ಷೆ ಯನ್ನು ನಿರ್ಭಯ ದಿಂದ ಎದುರಿಸು ವುದು ಹೇಗೆೆ ಎಂಬ ವಿಷಯದ ಮೇಲೆ ಏರ್ಪಡಿಸಿದ ಕಾರ್ಯಕ್ರಮ ಉದ್ಘಾಟಿಸಿ ಉಪನ್ಯಾಸ ನೀಡಿದರು.

ಇತ್ತೀಚಿನ ದಿನಗಳಲ್ಲಿ ವಿದ್ಯಾರ್ಥಿಗಳಲ್ಲಿ ಪರೀಕ್ಷಾ ಭಯ ಹೆಚ್ಚುತ್ತಿದ್ದು, ಆತಂಕ ಗೊಳಗಾಗುತ್ತಿದ್ದಾರೆ. ಇದಕ್ಕೆ ಮೂಲ ಕಾರಣ ವಿದ್ಯಾರ್ಥಿಗಳು ಮೊಬೈಲ್‌ನ ಗೀಳಿಗೆ ಅಂಟಿಕೊoಡು ಪರೀಕ್ಷಾ ವಿಷಯಗಳನ್ನು ಸತತವಾಗಿ ಅಭ್ಯಾಸ ಮಾಡದೆ ಪರೀಕ್ಷೆ ಹತ್ತಿರ ಬರುವಾಗ ರಾತ್ರಿ ಇಡೀ ನಿದ್ದೆ ಬಿಟ್ಟು ಓದುವುದ ರಿಂದ ಈ ಸಮಸ್ಯೆ ಉದ್ಭವಿಸು ತ್ತದೆ. ಹಾಗಾಗಿ, ಮಕ್ಕಳು ಪೌಷ್ಠಿಕವಾದ ಆಹಾರ ವನ್ನು ಸೇವಿಸುವುದರ ಜೊತೆಗೆ ಓದಿನಲ್ಲಿ ಸಮಯ ಪಾಲನೆ ಮಾಡಿಕೊಂಡು ವಿಶ್ರಾಂತಿಯ ಜೊತೆಗೆ ನಿರ್ದಿಷ್ಟ ಸಮಯದಲ್ಲಿ ನಿದ್ದೆ ಮಾಡಿ ತಮ್ಮ ಮನಸ್ಸನ್ನು ಉಲ್ಲಾಸಕರವಾಗಿ ಇಟ್ಟುಕೊಳ್ಳುವುದು ಅತ್ಯಗತ್ಯ ಎಂದರು.

ಭಾರತೀಯ ವೈದ್ಯಕೀಯ ಸಂಘದ ಶಿವಮೊಗ್ಗ ಶಾಖೆಯ ಅಧ್ಯಕ್ಷರು ಹಾಗೂ ಸಿಮ್ಸ್ನ ಇ.ಎನ್.ಟಿ. ವಿಭಾಗದ ಮುಖ್ಯಸ್ಥ ಡಾ: ಶ್ರೀಧರ್ ಹಾಗೂ ಐ.ಎಂ.ಎ. ಶಿವಮೊಗ್ಗ ಘಟಕದ ಕಾರ್ಯದರ್ಶಿ & ಸುಬ್ಬಯ್ಯ ಆಸ್ಪತ್ರೆ ನಿರ್ದೇಶಕ ಡಾ|| ವಿನಯ ಶ್ರೀನಿವಾಸ್ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಸಮಗ್ರ ಮಾಹಿತಿ ನೀಡಿದರು. 

ಇದೇ ಸಂದರ್ಭದಲ್ಲಿ ಈ ಶಾಲೆಯ ವಿದ್ಯಾರ್ಥಿ ಗಳ ರಕ್ತದ ಗುಂಪನ್ನು ಗುರುತಿಸುವ ಕಾರ್ಯವನ್ನು ಸುಬ್ಬಯ್ಯ ಆಸ್ಪತ್ರೆಯ ವೈದ್ಯಕೀಯ ಸಿಬ್ಬಂಧಿ ವರ್ಗದವರಿಂದ ಮಾಡಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಟ್ರಸ್ಟ್ ಅಧ್ಯಕ್ಷರು ಹಾಗೂ ನಿವೃತ್ತ ಡಿ.ಪಿ.ಐ. ರೊ. ಚಂದ್ರಶೇಖರಯ್ಯ ಎಂ. ಮಾತನಾಡಿ ಪರೀಕ್ಷೆಯಲ್ಲಿ ಶೇ.50 ಪ್ರಶ್ನೆಗಳು ಸಾಧಾರಣ ಬುದ್ಧಿಮತ್ತೆ ಮಕ್ಕಳಿಗೂ, ಶೇ.25 ಪ್ರಶ್ನೆಗಳು ಕಡಿಮೆ ಬುದ್ಧಿಮತ್ತೆ ಮಕ್ಕಳಿಗೂ ಹಾಗೂ ಶೇ.25 ಪ್ರಶ್ನೆಗಳು ಮಾತ್ರ ಹೆಚ್ಚು ಬುದ್ಧಿಮತ್ತೆ ಮಕ್ಕಳಿಗಾಗಿ ರೂಪಿಸುವುದರಿಂದ ಯಾರೂ ಪರೀಕ್ಷಾ ಭಯ ಹೊಂದದೆ, ಲೀಲಾಜಾಲವಾಗಿ ಎದುರಿಸಬಹುದು ಎಂದು ತಿಳಿಸಿದರು.

ಟ್ರಸ್ಟ್ನ ಉಪಾಧ್ಯಕ್ಷ ರೊ. ಡಾ|| ಪರಮೇಶ್ವರ್ ಡಿ. ಶಿಗ್ಗಾಂವ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಇಂರ‍್ಯಾಕ್ಟ್ ಕ್ಲಬ್‌ನ ಸಂಚಾಲಕರಾದ ಹರ್ಷಿತಾ ಕೆ.ಎಂ.,ಅತಿಥಿಗಳನ್ನು ಪರಿಚಯಿಸಿದರು. ಶಾಲೆ ಉಪ ಪ್ರಾಂಶುಪಾಲ ಸೂರ್ಯನಾರಾಯಣ್, ಇಂರ‍್ಯಾಕ್ಟ್ ಕ್ಲಬ್‌ನ ಅಧ್ಯಕ್ಷ ಕುಮಾರ್ ಎನ್., ಕಾರ್ಯದರ್ಶಿ ಗೌತಮಿ ಎಂ. ಉಪಸ್ಥಿತರಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು