ವಿದ್ಯಾರ್ಥಿಗಳು ಗುರಿ ನಿಗದಿಕರಣ ಮಾಡಿ ಕೊಂಡಲ್ಲಿ ಯಶಸ್ಸು ಸಾಧ್ಯ: ರುದ್ರೇಶ್

ವಿಜಯ ಸಂಘರ್ಷ ನ್ಯೂಸ್ 
ಭದ್ರಾವತಿ: ತಾಲ್ಲೂಕಿನ ಹೊಳೆ ಹೊನ್ನೂರು ಲಯನ್ಸ್ ಸಹಯೋಗದಲ್ಲಿ ಅರಳಿಹಳ್ಳಿ ಸರ್ಕಾರಿ ಪ್ರೌಢ ಶಾಲೆಯಲ್ಲಿ 10 ನೇ ತರಗತಿ ವಿದ್ಯಾರ್ಥಿಗಳಿಗೆ ವೃತ್ತಿ ಮಾರ್ಗದರ್ಶನ ಮತ್ತು ಪರೀಕ್ಷಾ ಮಾರ್ಗದರ್ಶನ ಕಾರ್ಯಕ್ರಮ ಶುಕ್ರವಾರ ಏರ್ಪಡಿಸಲಾಗಿತ್ತು. 

ಲಯನ್ಸ್ ಅಧ್ಯಕ್ಷ ರುದ್ರೇಶ್ ಮಾತನಾಡಿ ವಿದ್ಯಾರ್ಥಿಗಳು ಗುರಿ ನಿಗದಿಕರಣ ಮಾಡಿಕೊಂಡರೆ ಮಾತ್ರ ನಿರೀಕ್ಷಿತ ಯಶಸ್ಸು ಗಳಿಸಲು ಸಾಧ್ಯ. ಪ್ರಯತ್ನ ಮತ್ತು ಶ್ರದ್ದೆ ಇದ್ದಲ್ಲಿ ಮಾತ್ರ ಯಶಸ್ಸು ಜ್ಞಾನ ದೊರಕಲು ಸಾಧ್ಯ ಎಂದು ನುಡಿದರು. 

ಪ್ರಭಾರಿ ಮುಖ್ಯ ಶಿಕ್ಷಕ ದಿವಾಕರ್ ಮಾತ ನಾಡಿ, ಪರೀಕ್ಷೆ ಎದುರಿಸಲು ಆತ್ಮವಿಶ್ವಾಸ ಮುಖ್ಯ, ಬರೆಯುವ ಉತ್ತರಗಳಲ್ಲಿ ಹೂರಣ ದಷ್ಟೇ ತೋರಣವೂ ಮುಖ್ಯ, ಕಾರ್ಯಾ ಗಾರದ ಯಶಸ್ಸು ಉತ್ತಮ ಫಲಿ ತಾಂಶದ ರೂಪದಲ್ಲಿ ಹೊರ ಹೊಮ್ಮಲಿ ಎಂದು ಶುಭ ಹಾರೈಸಿದರು.  

ಪ್ರಧಾನ ಸಂಪನ್ಮೂಲ ವ್ಯಕ್ತಿ ರಂಗನಾಥಯ್ಯ ವಿದ್ಯಾರ್ಥಿಗಳೊಂದಿಗೆ ಸುದೀರ್ಘ ಸಂವಾದ ನಡೆಸಿ, ಪರೀಕ್ಷೆ ಎದುರಿಸುವುದು ಹೇಗೆ? ಆತಂಕ ವಿಲ್ಲದೆ ಓದುವ ಬಗೆ, ನೆನಪಿನ ತಂತ್ರ ಗಳು, ಓದಿ ಬರೆಯುವ ವಿಧಾನ ಬಗ್ಗೆ ವಿವರಿಸಿದರು. 

ಪ್ರಧಾನ ಸಂಪನ್ಮೂಲ ವ್ಯಕ್ತಿ ಡಾ.ರಂಗನಾಥಯ್ಯ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಪ್ರಕಾಶ್ ಉದ್ಘಾಟಿಸಿದರು.

ಮಮತಾ ಸ್ವಾಗತಿಸಿ,ಶೋಭಾ ವಂದಿಸಿದರು. ತರಗತಿ ಶಿಕ್ಷಕರಾದ ಮಮತಾ, ವಾಣಿ, ಇಮ್ರಾನ್ ಖಾನ್, ಜಾನಕಿ ಉಪಸ್ಥಿತರಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು