ವಿಜಯ ಸಂಘರ್ಷ ನ್ಯೂಸ್
ಹೊಸನಗರ : ತಾಲ್ಲೂಕಿನ ಅರಸಾಳು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಹಾರೋಹಿತ್ತಲು ಬಳಿಯ ಅಡ್ಡೇರಿ ಗ್ರಾಮದ ಬಳಿ ರಸ್ತೆ ಬದಿಯ ಹಳ್ಳಕ್ಕೆ ಬೈಕ್ ಸಹಿತ ಬಿದ್ದು ಸಾವನ್ನಪ್ಪಿರುವ ದಾರುಣ ಘಟನೆ ನಿನ್ನೆ ಸಂಜೆ ನಡೆದಿದೆ.
ಹಾರೋಹಿತ್ತಲು ನಿವಾಸಿ ದೇವೇಂದ್ರಪ್ಪ (55) ಎಂದಿನಂತೆ ಡೈರಿಗೆ ಹಾಲು ಹಾಕಿ ಬೈಕಿನಲ್ಲಿ ಮನೆಗೆ ಮರಳುತ್ತಿದ್ದಾಗ ರಸ್ತೆ ಪಕ್ಕದಲ್ಲಿರುವ ಇಪ್ಪತ್ತು ಅಡಿಗೂ ಹೆಚ್ಚು ಆಳದ ಹಳ್ಳಕ್ಕೆ ಬಿದ್ದು ಸಾವನ್ನಪ್ಪಿದ್ದಾರೆ.
ರಸ್ತೆಯಲ್ಲಿ ಬರುವಾಗ ಆಯತಪ್ಪಿ ಹಳ್ಳಕ್ಕೆ ಬಿದ್ದು ಸಾವನ್ನಪ್ಪಿದ್ದಾರೆ ಎಂದು ಹೇಳಲಾಗಿದೆ. ಮಳೆ ನೀರು ಹರಿದು ಹೋಗಿ ಈ ಹಳ್ಳ ನಿರ್ಮಾಣವಾಗಿದ್ದು, ಹಳ್ಳದಲ್ಲಿ ಮಳೆ ನೀರು ನಿಂತಿತ್ತು. ನಿನ್ನೆ ರಾತ್ರಿಯೇ ಸ್ಥಳೀಯರ ನೆರವಿನಿಂದ ಪೊಲೀಸರು ಮೃತದೇಹ ಮತ್ತು ಬೈಕ್‌ನ್ನು ಹಳ್ಳದಿಂದ ಹೊರಗೆ ತೆಗೆದಿದ್ದು, ಮೃತದೇಹವನ್ನು ರಿಪ್ಪನ್‌ಪೇಟೆ ಸರ್ಕಾರಿ ಆಸ್ಪತ್ರೆಯ ಶವಾಗಾರದಲ್ಲಿರಿಸಲಾಗಿದೆ.
Tags:
ಹೊಸನಗರ ವರದಿ