ವಿಜಯ ಸಂಘರ್ಷ ನ್ಯೂಸ್
ಭದ್ರಾವತಿ: ಸೈಲ್ -ವಿಐಎಸ್ ಎಲ್ ಕಾರ್ಖಾನೆ ವತಿಯಿಂದ ನಗರದ ವಿಐಎಸ್ಎಲ್ ಸಿಲ್ವರ್ ಜ್ಯೂಬಿಲಿ ಸ್ಟೇಡಿಯಂ ನಲ್ಲಿ 76ನೇ ಗಣ ರಾಜ್ಯೋತ್ಸವ ಆಚರಿಸಲಾಯಿತು. ಕಾರ್ಖಾನೆಯ ಕಾರ್ಯಪಾಲಕ ನಿರ್ದೇಶಕ ಬಿ.ಎಲ್.ಚಂದ್ವಾನಿ ರಾಷ್ಟ್ರಧ್ವಜ ಅನಾವರಣಗೊಳಿಸಿ ಧ್ವಜಾವಂದನೆ ಸ್ವೀಕರಿಸಿದರು.
ಲಿಟ್ಲ್ ಫ್ಲವರ್ ಹಿರಿಯ ಪ್ರಾಥಮಿಕ ಶಾಲೆ ಮತ್ತು ಸೈಂಟ್ ಚಾರ್ಲ್ಸ್ ಆಂಗ್ಲ ಪ್ರೌಢಶಾಲೆಯ ವಿದ್ಯಾರ್ಥಿಗಳು ರಾಷ್ಟ್ರೀಯ ಐಕ್ಯತೆ ಮತ್ತು ದೇಶಪ್ರೇಮ ವಿಷಯಗಳ ಕುರಿತ ವರ್ಣರಂಜಿತ ಸಾಂಸ್ಕೃತಿಕ ಕಾರ್ಯಕ್ರಮ ಪ್ರದರ್ಶಿಸಿ, ಸಮೂಹಗಾನ ಹಾಡಿದರು.
ಉದ್ಯೋಗಿಗಳು ಕಳೆದ ವರ್ಷದಲ್ಲಿ ಮಾಡಿದ ವಿಶೇಷ ಸಾಧನೆಗಾಗಿ ಜವಹಾರಲಾಲ್ ನೆಹರು ಮತ್ತು ಡಾ:ಬಿ.ಆರ್. ಅಂಬೇಡ್ಕರ್ ವಿಶೇಷ ಪ್ರಶಸ್ತಿಗಳನ್ನು ವಿತರಿಸಲಾಯಿತು.
ಸಹಾಯಕ ಮಹಾಪ್ರಬಂಧಕ (ಸಿ ಆಂಡ್ ಐಟಿ) ನಿತಿನ್ ಜೋಸ್ ರವರು ಕೇರಳದಲ್ಲಿ ನಡೆದ 7ನೇ ಕೇರಳ ರಾಜ್ಯ ಪ್ಯಾರಾ ಬ್ಯಾಡ್ಮಿಂಟನ್ ಚಾಂಪಿಯನ್ ಶಿಪ್ ನಲ್ಲಿ ಸಿಂಗಲ್ಸ್ ವಿಭಾಗದಲ್ಲಿ ಕಂಚಿನ ಪದಕ ಮತ್ತು ಡಬಲ್ಸ್ ವಿಭಾಗದಲ್ಲಿ ಬೆಳ್ಳಿ ಪದಕ (SU-5) ವಿಭಾಗದಲ್ಲಿ ಪಡೆದಿದ್ದು ಹಾಗೂ ರಾಷ್ಟ್ರಮಟ್ಟದಲ್ಲಿ ಕೇರಳವನ್ನು ಪ್ರತಿನಿಧಿಸಲು ಆಯ್ಕೆಯಾಗಿದ್ದಕ್ಕಾಗಿ ಅಭಿನಂದಿಸಲಾಯಿತು.
ಸಾಂಸ್ಕೃತಿಕ ಕಾರ್ಯಕ್ರಮ ತಂಡಗಳಿಗೆ ಹಾಗೂ ಪಥಸಂಚಲನ ತಂಡಗಳಿಗೆ ಆಕರ್ಷಕ ಟ್ರೋಫಿಗಳನ್ನು ನೀಡಲಾಯಿತು.
ವಿಐಎಸ್ಎಲ್ ಕಾರ್ಮಿಕರ ಸಂಘ ಮತ್ತು ಅಧಿಕಾರಿಗಳ ಸಂಘದ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿ ಸದಸ್ಯರು, ಇಸ್ಲಾತ್ ಮಹಿಳಾ ಸಮಾಜದ ಸದಸ್ಯರು, ಕಾರ್ಮಿಕರು, ಗುತ್ತಿಗೆ ಕಾರ್ಮಿಕರು, ಶಾಲಾ ಮಕ್ಕಳು, ಪೋಷಕರು, ಅಧ್ಯಾಪಕ ವೃಂದ ದವರು, ನಾಗರೀಕರು ಕಾಯಕ್ರಮದಲ್ಲಿ ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ 500 ಪಪ್ಪಾಯ, ನುಗ್ಗೆ, ಹಲಸು ಮತ್ತು ಅಡಿಕೆ ಸಸಿ ಗಳನ್ನು ವಿಐಎಸ್ಎಲ್‌ನ ಉದ್ಯೋಗಿ ಗಳು, ಗುತ್ತಿಗೆ ಕಾರ್ಮಿಕರು ಮತ್ತು ಸಾರ್ವಜನಿಕರಿಗೆ ಉಚಿತವಾಗಿ ವಿತರಿಸಲಾಯಿತು.
ನಂತರ ಕ್ರೀಡಾಂಗಣದಲ್ಲಿನ ಪ್ಲಾಟಿನಮ್ ಜ್ಯುಬಿಲಿ ವೇದಿಕೆಯ ವಸ್ತುಪ್ರದರ್ಶನ ಮಳಿಗೆಯನ್ನು ಬಿ.ಎಲ್. ಚಂದ್ವಾನಿ ಉದ್ಘಾಟಿಸಿದರು. ಮುಖ್ಯ ಮಹಾ ಪ್ರಬಂಧಕ (ಸ್ಥಾವರ) ಕೆ.ಎಸ್.ಸುರೇಶ್, ನಗರಾಡಳಿತ ಮಹಾಪ್ರಬಂಧಕ ಮೋಹನ್ ರಾಜ್ ಶೆಟ್ಟಿ, ಹಣಕಾಸು ಮತ್ತು ಲೆಕ್ಕ ಮಹಾಪ್ರಬಂಧಕ ರಾದ ಶೋಭ ಶಿವಶಂಕರನ್, ಹೆಚ್.ಆರ್ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಎಲ್. ಪ್ರವೀಣ್ ಕುಮಾರ್, ಕಾರ್ಮಿಕರ ಸಂಘದ ಅಧ್ಯಕ್ಷ ಜಿ.ಜಗದೀಶ,ಅಧಿಕಾರಿಗಳ ಸಂಘದ ಅಧ್ಯಕ್ಷ ಪಾರ್ಥಸಾರದಿ ಮಿಶ್ರಾ ಉಪಸ್ಥಿತರಿದ್ದರು.
ಸಾರ್ವಜನಿಕ ಸಂಪರ್ಕ, ನಗರಾಡಳಿತ ಮತ್ತು ರಕ್ಷಣಾ ವಿಭಾಗದವರಿಂದ ಕಾರ್ಯಕ್ರಮದ ಸಂಯೋಜನೆ ಮಾಡಲಾಗಿತ್ತು.ಭದ್ರತಾ ಸಿಬ್ಬಂದಿಗಳು, ನಗರದ ಪ್ರೌಢ ಮತ್ತು ಹಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳು ಪಥಸಂಚಲನದಲ್ಲಿ ಭಾಗವಹಿಸಿದ್ದರು.