ನದಿ ಸೇತುವೆ ಬಳಿ ಚಿರತೆ ಮೃತದೇಹ ಪತ್ತೆ: ಕೊಂದು ಬಿಸಾಕಿರುವ ಶಂಕೆ

ವಿಜಯ ಸಂಘರ್ಷ ನ್ಯೂಸ್ 
ಭದ್ರಾವತಿ:ತಾಲ್ಲೂಕಿನ ಬಾರಂದೂರು ಸಮೀಪ ನದಿ ಸೇತುವೆ ಬಳಿ ಚಿರತೆಯ ಮೃತದೇಹ ಸೋಮವಾರ ಪತ್ತೆಯಾಗಿದ್ದು, ಕೊಂದು ಬಿಸಾಕಿರುವ ಶಂಕೆ ವ್ಯಕ್ತವಾಗಿದೆ. ವಿಚಾರ ತಿಳಿಯುತ್ತಲೇ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ತೆರಳಿ ಮೃತದೇಹ ವಶಕ್ಕೆ ಪಡೆದಿದ್ದಾರೆ.

ಚಿರತೆಯನ್ನು ಸಾಯಿಸಿ ಇಲ್ಲಿ ತಂದು ಹಾಕಿರುವ ಶಂಕೆ ವ್ಯಕ್ತವಾಗಿದೆ. ಅಧಿಕಾರಿಗಳು ತನಿಖೆ ಆರಂಭಿಸಿದ್ದಾರೆ.

ಈ ಭಾಗದಲ್ಲಿ ಚಿರತೆ ಓಡಾಟವಿಲ್ಲ. ಆದರೆ ಬೇರಡೆ ಇದನ್ನು ಕೊಂದು ಇಲ್ಲಿಗೆ ತಂದು ಹಾಕಿರುವ ಸಾಧ್ಯತೆಯಿದೆ. 

ಘಟನೆ ಕುರಿತು ತನಿಖೆ ನಡೆಯುತ್ತಿದೆ ಎಂದು ಡಿಎಫ್‌ಒ ಆಶೀಶ್‌ ರೆಡ್ಡಿ ತಿಳಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು