ವಿಜಯ ಸಂಘರ್ಷ ನ್ಯೂಸ್
ಭದ್ರಾವತಿ: ಆರ್ಥಿಕ, ಸಾಮಾಜಿಕ ಹಾಗೂ ಶೋಷಣೆ ರಹಿತ, ಸ್ವಾತಂತ್ರ, ಸಮಾನತೆ ಯನ್ನು ಜನವರಿ 26, 1950 ರಲ್ಲಿ ರಚಿತವಾದ ಭಾರತ ಸಂವಿಧಾನವು ಭಾರತೀಯರೆಲ್ಲರಿಗೂ ಕಲ್ಪಿಸಿ ಕೊಟ್ಟಿದೆ, ಅದನ್ನು ಉಳಿಸಿ ಬೆಳೆಸುವುದು ನಮ್ಮೆಲ್ಲರ ಹೊಣೆ ಯಾಗಿದೆ ಎಂದು ಲಯನ್ ಅಧ್ಯಕ್ಷ ಆರ್ ಉಮೇಶ್ ಹೇಳಿದರು.
ಕ್ಲಬ್ ಶುಗರ್ ಟೌನ್ ವತಿಯಿಂದ 76ನೇ ಗಣರಾಜ್ಯೋತ್ಸವ ದ್ವಜಾ ರೋಹಣ ನೆರವೇರಿಸಿ ಮಾತನಾಡಿ, ಲಯನ್ಸ್ ಸಂಸ್ಥೆಯು ಯಾವುದೇ ಜಾತಿ ಭೇಧವಿಲ್ಲದೆ ನಾವೆಲ್ಲರೂ ಲಯನ್ ಬಂಧುಗಳು ನಾವೆಲ್ಲರೂ ಒಂದೇ ಎಂಬ ವೇದ ವಾಕ್ಯದೊಂದಿಗೆ ಸಾರ್ವಜನಿಕ ಸೇವಾಕಾರ್ಯದಲ್ಲಿ ತೊಡಗಿಸಿಕೊಂಡಿದ್ದೇವೆ ಎಂದರು.
ಮಾಜಿ ಸೈನಿಕ ಶ್ರೀನಿವಾಸ್ ಸಂವಿಧಾನದ ಘೋಷವಾಕ್ಯವನ್ನು ಘೋಷಿಸಿದರು. ನಿಕಟ ಅಧ್ಯಕ್ಷರು ಗಳಾದ ಮದಿಯಾಳಗನ್, ನಾರಾಯಣ್ ಮೂರ್ತಿ, ನಿತ್ಯಾನಂದ ಪೈ, ಟಿ ಶ್ರೀನಿವಾಸ್,ಡಾ. ಗುರುರಾಜ್, ಮಂಜುನಾಥ್, ನಟರಾಜ್, ಜಯಮಾಲ ಪೈ, ರಾಧಾ, ಡಾರತಿ ಉಮೇಶ್, ಮಧುಸೂದನ್, ಯೋಗ ಶಿಕ್ಷಕಿ ಸಾತ್ರಮ್ಮ, ಮೀನಾಕ್ಷಮ್ಮ ಮತ್ತಿತರರಿದ್ದರು.
ಕಾರ್ಯದರ್ಶಿ ತಮ್ಮೆಗೌಡ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿ,ವಂದಿಸಿದರು,
Tags
ಭದ್ರಾವತಿ ಲಯನ್ಸ್ ವರದಿ