ವಿಜಯ ಸಂಘರ್ಷ ನ್ಯೂಸ್
ವಿಜಯಪುರ : ಇಟ್ಟಂಗಿಭಟ್ಟಿ ಮಾಲೀಕನಿಂದ ಅಮಾನುಷ ರೀತಿಯಲ್ಲಿ ಹಲ್ಲೆಗೊಳಗಾಗಿ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕಾರ್ಮಿಕರನ್ನು ಭೇಟಿ ಮಾಡಿದ ವಿಧಾನ ಪರಿಷತ್ ಸದಸ್ಯ ಎನ್. ರವಿಕುಮಾರ್, ಕೇಶವ ಪ್ರಸಾದ್ ಮೊದಲಾದವರು ಭೇಟಿ ಮಾಡಿ ಆರೋಗ್ಯ ವಿಚಾರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ವಿಧಾನ ಪರಿಷತ್ ಸದಸ್ಯ ಎನ್. ರವಿಕುಮಾರ, ಒಬ್ಬ ರಾಕ್ಷಸನು ಕೂಡಾ ಈ ರೀತಿ ಅಮಾನುಷವಾಗಿ ವರ್ತಿಸುವುದಿಲ್ಲ ಅಷ್ಟೊಂದು ಅಮಾನುಷ ವಾಗಿ ಭಟ್ಟಿ ಮಾಲೀಕ ಈ ಕಾರ್ಮಿಕರ ಮೇಲೆ ಹಲ್ಲೆ ನಡೆಸಿದ್ದಾನೆ, ಬಂಧಿತ ಆರೋಪಿಗಳಿಗೆ ಉಗ್ರವಾದ ಶಿಕ್ಷೆ ನೀಡಬೇಕು ಎಂದು ಒತ್ತಾಯಿಸಿದರು.
ನೊಂದ ಕಾರ್ಮಿಕರಿಗೆ ಕೂಡಲೇ ಸರ್ಕಾರ ಉಪಜೀವನ ನಡೆಸಲು ಜಮೀನು, ಮನೆ ಹಾಗೂ ಪರಿಹಾರವನ್ನು ಕೂಡಲೇ ಮಂಜೂರು ಮಾಡಬೇಕು ಎಂದು ಒತ್ತಾಯಿಸಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಆರ್.ಎಸ್. ಪಾಟೀಲ ಕುಚಬಾಳ, ಲಿಂಬೆ ಅಭಿವೃದ್ದಿ ಮಂಡಳಿ ಮಾಜಿ ಅಧ್ಯಕ್ಷ ಚಂದ್ರಶೇಖರ ಕವಟಗಿ, ಮಾಜಿ ಉಪಮೇಯರ್ ಗೋಪಾಲ ಘಟಕಾಂಬಳೆ, ಡಾ.ಸುರೇಶ ಬಿರಾದಾರ, ವಿಜಯ ಜೋಶಿ ಉಪಸ್ಥಿತರಿದ್ದರು.
Tags
ವಿಜಯ ಪುರ ನ್ಯೂಸ್