ಭದ್ರಾವತಿ-ವಿದ್ಯಾರ್ಥಿಗಳು ಪತ್ರಿಕೆ ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು: ಸಾಹಿತಿ ಬಸವರಾಜಪ್ಪ

ವಿಜಯ ಸಂಘರ್ಷ ನ್ಯೂಸ್ 

ಭದ್ರಾವತಿ: ತಾವು ಓದುವ ಪಠ್ಯ ಪುಸ್ತಕದ ಜೊತೆಗೆ, ಸಮಾಜದ ಆಗು ಹೋಗುಗಳನ್ನು ತಿಳಿಯಲು, ವಿದ್ಯಾರ್ಥಿ ಗಳು ಚಿಕ್ಕ ವಯಸ್ಸಿ ನಲ್ಲಿಯೇ ದಿನಪತ್ರಿಕೆಗಳನ್ನು ಓದುವ ಹವ್ಯಾಸ  ಬೆಳೆಸಿಕೊಳ್ಳಬೇಕು ಎಂದು ಹಿರಿಯ ಸಾಹಿತಿ ಜೆ ಎನ್ ಬಸವರಾಜಪ್ಪ ಇವರು ಮಕ್ಕಳಿಗೆ ಕಿವಿಮಾತು ಹೇಳಿದರು.

 ನಗರದ ಬೋವಿ ಕಾಲೋನಿಯ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಶಾಲಾ ವಾರ್ಷಿಕೋತ್ಸವ ಸಮಾರಂಭದಲ್ಲಿ ಅವರು ಮಾತನಾಡಿದರು. 

ವಿದ್ಯಾರ್ಥಿಗಳು ನಯ ವಿನಯವನ್ನು ಮೈಗೂಡಿಸಿಕೊಳ್ಳಬೇಕು ಶ್ರಮ ಪಟ್ಟು ಚೆನ್ನಾಗಿ ಓದಬೇಕು, ಸಮಯಕ್ಕೆ ಸರಿಯಾಗಿ ಶಾಲೆಗೆ ಬರಬೇಕು, ಪದೇ ಪದೇ ಶಾಲೆಗೆ ತಪ್ಪಿಸಿಕೊಳ್ಳ ಬಾರದು, ಓದುವ ವಯಸ್ಸಿನಲ್ಲಿ ಓದಬೇಕು ಎಂದು ಮಕ್ಕಳಿಗೆ ಮನವರಿಕೆ ಮಾಡಿದರು. 

 ಶಿಕ್ಷಕರಿಗೆ ಶಿಸ್ತುಭೂಷಣ ವಿದ್ಯಾರ್ಥಿ ಗಳಿಗೆ ವಿದ್ಯೆಯೇ ಭೂಷಣ.ಯಾರ ಮುಖದಲ್ಲಿ ಸೌಂದರ್ಯ ಇರುತ್ತ ದೆಯೋ ತೇಜಸ್ಸು ಚುಮ್ಮುತ್ತಿರುತ್ತ ದೆಯೋ, ಆ ವ್ಯಕ್ತಿಯ ಹೃದಯದಲ್ಲಿ, ಜ್ಞಾನ ತಿಳುವಳಿಕೆ ಬುದ್ಧಿ ಇರುತ್ತದೆ. ನೀವೆಲ್ಲರೂ ಜಾಣ ವಿದ್ಯಾರ್ಥಿಗಳು ಎನಿಸಿಕೊಳ್ಳಬೇಕು, ಶಾಲೆಗೂ ಮನೆಗೂ ಕೀರ್ತಿ ತರಬೇಕು ಎಂದರಲ್ಲದೆ, ಅತ್ಯಂತ ಸರಳ ವಾಗಿಯೂ ಸುಂದರವಾಗಿಯೂ ಕಾರ್ಯಕ್ರಮವನ್ನು ಆ ಯೋಜನೆ ಮಾಡಿದ್ದ, ಶಾಲಾ ಮುಖ್ಯ ಶಿಕ್ಷಕರನ್ನು ಹಾಗೂ ಸಿಬ್ಬಂದಿ ವರ್ಗವನ್ನು ಅಭಿನಂದಿಸಿದರು.

ಎಚ್ ಎಮ್ ಸಿ ಶೇಖರಪ್ಪ ಉದ್ಘಾಟಿಸಿದರು. ಶಾಲಾ ಮುಖ್ಯ ಶಿಕ್ಷಕ ಈ ಶಿವರುದ್ರಯ್ಯ ಅಧ್ಯಕ್ಷತೆ ವಹಿಸಿದ್ದರು. ಶಾಲಾ ಶಿಕ್ಷಕ ವೃಂದದವರ ಪ್ರಾರ್ಥನೆ ಯೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಶಿಕ್ಷಕಿ ಹೇಮಲತಾ ಸ್ವಾಗತಿಸಿದರೆ, ಶಿಕ್ಷಕಿ ದೀಪ ನಿರೂಪಿಸಿದರು, ಶಿಕ್ಷಕಿ ಪಾರ್ವತಮ್ಮ ವಂದಿಸಿದರು. ಹಿರಿಯ ಶಿಕ್ಷಕಿ ಸುವರ್ಣಮ್ಮ,ಎಸ್ ಡಿ ಎಂ ಸಿ ಸದಸ್ಯರು, ಅಡುಗೆ ಸಿಬ್ಬಂದಿಯವರು, ವಿದ್ಯಾರ್ಥಿಗಳ ಪಾಲಕರು ಪಾಲ್ಗೊಂಡಿದ್ದರು. 

1 ಕಾಮೆಂಟ್‌ಗಳು

  1. ಕೃಷ್ಣ ಸರ್ ನಮಸ್ತೆ ನಿಮ್ಮ ವಿಜಯ ಸಂಘರ್ಷ ವೆಬ್ ನಲ್ಲಿ, ಸಾಮಾಜಿಕ ಪ್ರಜ್ಞೆಯ ಹಾಗೂ ಜನ ಜಾಗೃತಿಯ, ವಿಷಯಗಳನ್ನು ಚೆನ್ನಾಗಿ ಕವರ್ ಮಾಡುತ್ತೀರಿ . ನಿಮ್ಮಿಂದ ಇನ್ನೂ ಹೆಚ್ಚಿನ ಪತ್ರಿಕಾ ಸೇವೆ ಓದುಗರಿಗೆ ಸಾರ್ವಜನಿಕರಿಗೆ ದೊರೆಯಲೆಂದು ಈ ಮೂಲಕ ಆಶಿಸುತ್ತೇನೆ.
    ಆತ್ಮೀಯರಾದ
    Jnb

    ಪ್ರತ್ಯುತ್ತರಅಳಿಸಿ
ನವೀನ ಹಳೆಯದು