ವಿಜಯ ಸಂಘರ್ಷ ನ್ಯೂಸ್
ಶಿವಮೊಗ್ಗ: ನಗರದ ರಾಯಲ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಆರೋಗ್ಯ ದಿನಾಚರಣೆ ಅಂಗವಾಗಿ ತರಕಾರಿಗಳ ಮೇಳ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
ಸೊಪ್ಪುತರಕಾರಿಗಳ ಮಹತ್ವ ಅರಿತು ಹೆಚ್ಚು ಸೇವಿಸುವ ಮೂಲಕ ನಮ್ಮ ಆರೋಗ್ಯವನ್ನು ಉತ್ತಮಪಡಿಸಿ ಕೊಳ್ಳಬೇಕು.ತರಕಾರಿಗಳ ಸೇವನೆ ಯಿಂದ ಜೀರ್ಣಕ್ರಿಯೆ ಚೆನ್ನಾಗಿ ಆಗಿ ಉತ್ತಮ ಆರೋಗ್ಯಕ್ಕೆ ಬೇಕಾದ ಎಲ್ಲ ಜೀವಸತ್ವಗಳನ್ನು ನೀಡಿ ಆರೋಗ್ಯ ವನ್ನು ಸುಧಾರಿಸುತ್ತದೆ. ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿ ಶರೀರದ ಎಲ್ಲಾ ಭಾಗಗಳಿಗೆ ವಿಶೇಷ ವಾದ ಚೈತನ್ಯ ಶಕ್ತಿ ನೀಡುತ್ತದೆ ಎಂದು ಶಾಲೆಯ ಸಲಹಾ ಸಮಿತಿ ಸದಸ್ಯ ಡಾ. ನಾಗರಾಜ ಪರಿಸರ ತಿಳಿಸಿದರು.
ಪಠ್ಯದಲ್ಲಿ ತರಕಾರಿಗಳ ಸೊಪ್ಪುಗಳ ಮಹತ್ವ ಕುರಿತು ಪಾಠ ಇದೆ ಅದನ್ನು ಪ್ರಾಯೋಗಿಕ ವಾಗಿ ಮಕ್ಕಳಿಂದ ಸೊಪ್ಪು ತರಕಾರಿಗಳ ಮತ್ತು ಅವುಗಳ ಪ್ರಾಮುಖ್ಯತೆಯ ಕುರಿತು ಮಾತನಾಡಿ ಸಲಾಯಿತು ಎಂದು ಕನ್ನಡ ಭಾಷಾ ಶಿಕ್ಷಕ ಅರುಣ್ ಕುಮಾರ್ ಹೆಚ್. ಎಂ ರವರು ತಿಳಿಸಿದರು.
ವಿದ್ಯಾರ್ಥಿಗಳಾದ ಐಶ್ವರ್ಯ , ಬೃಂದಾ ದೃತಿ, ಪ್ರೀತಮ್, ಸಿಂಚನ, ಸೂರಜ್, ತೇಜಲ್, ಯಶಸ್, ಈ ವಿದ್ಯಾರ್ಥಿಗಳು ಸೊಪ್ಪು ತರಕಾರಿಗಳ ಉಪಯೋಗ ಗಳನ್ನು ತಿಳಿಸಿಕೊಟ್ಟರು.
ಕಾರ್ಯಕ್ರಮದಲ್ಲಿ ಶಾಲೆಯ ಕಾರ್ಯದರ್ಶಿ ಪೂಜಾ ನಾಗರಾಜ್ ಪರಿಸರ ಮಾತನಾಡಿ ವಿದ್ಯಾರ್ಥಿಗಳು ಪ್ರತಿನಿತ್ಯದ ಆಹಾರ ಸೇವನೆಯಲ್ಲಿ ತರಕಾರಿಗಳ ಸೊಪ್ಪುಗಳ ಮಹತ್ವದ ಜೊತೆಗೆ ಸೊಪ್ಪು ತರಕಾರಿಗಳನ್ನು ಹೆಚ್ಚುವ ಮೊದಲು ಚೆನ್ನಾಗಿ ಉಪ್ಪು ನೀರಿನಲ್ಲಿ ತೊಳೆದು ಹೆಚ್ಚಲು ಮಕ್ಕಳಿಗೆ ತಾಯಂದಿರಿಗೆ ತಿಳಿಸಲು ಹೇಳಿದರು.
ವಿದ್ಯಾರ್ಥಿಗಳು ಸದೃಢವಾಗಿ ಇರಬೇಕಾದರೆ ಆರೋಗ್ಯಕರವಾದ ಆಹಾರ ಸೇವನೆ ಅವಶ್ಯಕ , ಹಾಗೆ ಪ್ರತಿ ತರಕಾರಿಗಳನ್ನು ಯಾವ ರೀತಿಯಲ್ಲಿ ಬೆಳೆಯುತ್ತಾರೆ, ತರಕಾರಿಗಳನ್ನು ಬಳಸುವುದರಿಂದ ಆಗುವಂತಹ ಉಪಯೋಗಗಳನ್ನು ವೈಜ್ಞಾನಿಕವಾಗಿ ತಿಳಿಸಿಕೊಟ್ಟರು.
ಶಾಲೆಯ ಮುಖ್ಯ ಶಿಕ್ಷಕ ವಿನಯ್, ಶಿಕ್ಷಕಿ ವಿಂಧ್ಯಾ, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
Tags
ಶಿವಮೊಗ್ಗ ವರದಿ