ವಿಜಯ ಸಂಘರ್ಷ ನ್ಯೂಸ್
ಭದ್ರಾವತಿ: ಹಳೇನಗರದ ಶ್ರೀರಾಘವೇಂದ್ರ ಸ್ವಾಮಿ ಮಠದಲ್ಲಿ ಶ್ರೀ ವಿಶ್ವೇಶ್ವರ ತೀರ್ಥ ಶ್ರೀ ಪಾದಂಗಳವರ 5 ನೇ ಆರಾಧನಾ ಮಹೋತ್ಸವವು ವಿಜೃಂಭಣೆಯಿಂದ ನಡೆಯಿತು.
ಅರ್ಚಕ ಗೋಪಾಲಾಚಾರ್ ಅವರಿಂದ ಬೆಳಗ್ಗೆ ಪಂಚಾಮೃತ ಅಭಿಷೇಕ ಹಾಗೂ ಪವಮಾನ ಹೋಮ ನಡೆಯಿತು. ಪೇಜಾವರ ಶ್ರೀಗಳ ಭಾವಚಿತ್ರ ದೊಂದಿಗೆ ಮಠದ ಪ್ರಾಕಾರದಲ್ಲಿ ಪ್ರದಕ್ಷಿಣೆ ಮಾಡಿದರು. ನಂತರ ಮಹಾಮಂಗ ಳಾರತಿ ನಡೆದು ತೀರ್ಥಪ್ರಸಾದ ವಿನಿಯೋಗ ಮಾಡಲಾಯಿತು.ಗುರುರಾಜ ಸೇವಾ ಸಮಿತಿಯ ಅಧ್ಯಕ್ಷ ಮುರುಳಿಧರ ತಂತ್ರಿ, ಸುಮಾ ರಾಘವೇಂದ್ರ ತಂತ್ರಿ ಜಿ.ರಮಾಕಾಂತ್, ನಿರಂಜನಾಚಾರ್, ಸತ್ಯ ನಾರಾಯಣಾಚಾರ್, ಮಾಧು ರಾವ್, ಶುಭ ಗುರುರಾಜ್, ಮಧ್ವ ಮಂಡಳಿಯ ಅಧ್ಯಕ್ಷ ಜೈತೀರ್ಥ, ಸುದೀಂದ್ರ, ವಿದ್ಯಾನಂದ ನಾಯಕ, ಪ್ರಶಾಂತ್, ಪ್ರಮೋದ್ಕುಮಾರ್, ಪವನ್ ಕುಮಾರ್ ಉಡುಪ ಹಾಗೂ ಭಜನಾ ಮಂಡಳಿಯ ಪದಾಧಿಕಾರಿ ಗಳು, ಅಪಾರ ಸಂಖ್ಯೆಯ ಭಕ್ತರು ಭಾಗವಹಿಸಿದ್ದರು.