ವಿಜಯ ಸಂಘರ್ಷ ನ್ಯೂಸ್
ಯಾದಗಿರಿ: 2024 -25 ನೇ ಸಾಲಿನಲ್ಲಿ ಮಕ್ಕಳ ಭವಿಷ್ಯ ಉನ್ನತ ವಿದ್ಯೆ ಹಾಗೆ ಉನ್ನತ ಸ್ಥಾನದಲ್ಲಿ ಪ್ರಜ್ವಲಿಸಲಿ ಎಂದು ಸುರಪುರ ಶಾಸಕ ರಾಜಾ ವೇಣು ಗೋಪಾಲ ನಾಯಕ ಹೇಳಿದರು.
ಬೆಂಗಳೂರಿನ ಇಂಡಿಯಾ ಲಿಟರೇಶಿ ಫೌಂಡೇಶನ್ ಸಹಕಾರದಲ್ಲಿ ತಾಂಡಾ ಶಾಲೆಯ ಸ್ಮಾರ್ಟ್ ಕ್ಲಾಸ್ ಗಾಗಿ ಅಗತ್ಯ ಇರುವ ಸುಮಾರು ಒಂದು ಲಕ್ಷ ಮೌಲ್ಯದ ಪ್ರಾಜೆಕ್ಟ್ ಸಾಮಗ್ರಿಗಳನ್ನು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಯಲ್ಲಿ ಸ್ಮಾರ್ಟ್ ಕ್ಲಾಸ್ ಹಾಗೂ ಸಂತ ಸೇವಾಲಾಲ್ ಭವನ ಉದ್ಘಾಟಿಸಿ ಮಾತನಾಡಿದರು.
ಚುನಾವಣೆ ಪೂರ್ವ ನೀಡಿದ ಭರವಸೆ ಯಂತೆ ರಾಜ್ಯ ಸರ್ಕಾರದ 5 ಗ್ಯಾರಂಟಿ ಗಳ ಅಡಿಯಲ್ಲಿ ಸರ್ಕಾರವನ್ನು ನಡೆಸುತ್ತಿದ್ದೇವೆ.ಜೊತೆಯಲ್ಲಿ ಸುರುಪುರು ಮತ್ತು ಹುಣಸಗಿ ತಾಲೂಕಿನ ಸಮಸ್ತರು ಪಂಚ ಗ್ಯಾರಂಟಿಗಳ ಸದುಪಯೋಗ ಪಡೆದುಕೊಳ್ಳಿ ಎಂದು ಕರೆನೀಡಿದರು.
ಇಂಡಿಯಾ ಲಿಟರೇಶಿ ಫೌಂಡೇಶನ್ ಸಂಸ್ಥೆಯ ಜಿಲ್ಲಾ ಸಂಚಾಲಕ ಪ್ರಾಣೇಶ್ ಶಾಲಾ ಮಕ್ಕಳ ಕಲಿಕೆಗಾಗಿ ಅಗತ್ಯ ಸಾಮಗ್ರಿಗಳು ಉಪಯುಕ್ತವೆಂದು ಹರ್ಷ ವ್ಯಕ್ತಪಡಿಸಿದರು. ಸುನಿಲ್ ಜಾದವ್ 51 ಸಾವಿರ ರೂ ಹಾಗೂ ಮಾರನಾಳ ತಾಂಡದ ಧಾನಿಗಳು ಕೊಡುಗೆ ರೂಪದಲ್ಲಿ ನೀಡಿದ್ದಾರೆ. ಜೊತೆಗೆ ಸರ್ಕಾರದ ಅನುದಾನದ ಹಣವನ್ನು ಬಳಕೆ ಮಾಡಲಾಗಿದೆ. ಈ ಸ್ಮಾರ್ಟ್ ಕ್ಲಾಸ್ ನಿಂದ ನಮ್ಮ ಊರಿನ ಮಕ್ಕಳಿಗೆ ಒಂದು ಉಜ್ವಲ ಭವಿಷ್ಯ ನೀಡಲಿ ಎಂದು ಧಾನಿಗಳು ಶುಭಹಾರೈಸಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಪ್ರಮುಖ ರಾದ ನಿಂಗರಾಜ್ ಚಂದ್ರಶೇಖರ್ ದಂಡಿನ ಮಲ್ಲಣ್ಣ ಸೌಕಾರ್,ಚೆನ್ನಯ್ಯ ಸ್ವಾಮಿ, ತಿಮ್ಮಣ್ಣ ಮಿಂಚೇರಿ, ಎಲ್ಲಪ್ಪ ಗೌಡ ಸರಕಾರಿ ಪ್ರಾಥಮಿಕ ಶಾಲೆ ಮಾರನಾಳ ತಾಂಡ, ಮುಖ್ಯ ಶಿಕ್ಷಕ ಮತ್ತಿತರರು ಉಪಸ್ಥಿತರಿದ್ದರು.
(ವರದಿ ✍️ ಶಿವು ರಾಠೋಡ ಹುಣಸಗಿ)
Tags:
ಯಾದಗಿರಿ ವರದಿ