ವಿಜಯ ಸಂಘರ್ಷ ನ್ಯೂಸ್
ತೀರ್ಥಹಳ್ಳಿ: ಶಾಸಕ ಆರಗ ಜ್ಞಾನೇಂದ್ರ ರವರ ಶಿಪಾರಸ್ಸಿನ ಮೇರೆಗೆ ಜಿ ಪಂ ವತಿಯಿಂದ ಮೀಸಲಿರಿಸಿದ ಅನುದಾನ ದಲ್ಲಿ ಅಂದಾಜು ಪಟ್ಟಿ ತಯಾರಿಸಿ ಕಾಮಗಾರಿಗಳ ಸ್ಥಳಪರಿಶೀಲನೆ ಮಾಡಿ ಪ್ರಾರಂಭಿಸಲು ತೀರ್ಮಾನಿಸ ಲಾಯಿತು.
ತಾಲ್ಲೂಕಿನ ಹುಣಸವಳ್ಳಿ ಗ್ರಾಮದ ಕೋಮನೆ ಸರಕಾರಿ ಕಿರಿಯ ಪ್ರಾಥಮಿಕ ಶಾಲಾ ಮೇಲ್ಚಾವಣಿ ಅಂದಾಜು ಮೊತ್ತ ಎರಡು ಲಕ್ಷ ರಿಪೇರಿ ಕಾಮಗಾರಿ, ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ(ಮುನ್ನೂರು) ಮೇಲ್ಚಾವಣಿ ರಿಪೇರಿ ಕಾಮಗಾರಿ ಅಂದಾಜು ಮೊತ್ತ 1.96 ಲಕ್ಷ, ಮೇಲಿನಕುರುವಳ್ಳಿ ಗ್ರಾಮದ ಹಿರಿಯ ಪ್ರಾಥಮಿಕ ಶಾಲೆ ಮೇಲ್ಚಾವಣಿ ರಿಪೇರಿ ಕಾಮಗಾರಿ ಅಂದಾಜು ಮೊತ್ತ 4 ಲಕ್ಷ ವೆಚ್ಚದ ಅನುದಾನದಲ್ಲಿ ಅಂದಾಜು ಪಟ್ಟಿ ತಯಾರಿಸಿ ಕಾಮಗಾರಿಗಳ ಸ್ಥಳಪರಿಶೀಲಿಸಲಾಯಿತು.
ಕಾಮಗಾರಿ ಪರಿಶೀಲನೆಯ ಸಂದರ್ಭ ದಲ್ಲಿ ಗ್ರಾಮ ಪಂಚಾಯಿತಿ ಅದ್ಯಕ್ಷ ಬಂಡೆ ವೆಂಕಟೇಶ, ಸದಸ್ಯರಾದ ಸಿ.ಅಣ್ಣಪ್ಪ ಆನಂದ ಇಂಜಿನಿಯರ್ ರವೀಂದ್ರ,ಪಿಡಿಒ ಎಲ್ ಟಿ ಉಮೇಶ್, ಸುರೇಶ್ ಶೇಟ್ ಮೇಲಿನ ಕುರುವಳ್ಳಿ ಕೋಮನೆ ಪ್ರಶಾಂತ್ ಮತ್ತು ಶಾಲಾ ಮುಖ್ಯೋಪಾದ್ಯಯರು ಹಾಜರಿದ್ದರು.
Tags:
ತೀರ್ಥಹಳ್ಳಿ ವರದಿ