ವಿಜಯ ಸಂಘರ್ಷ ನ್ಯೂಸ್
ಭದ್ರಾವತಿ: ನಗರದ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯಲ್ಲಿ ಸೇವೆ ಸಲ್ಲಿಸಿದ ಪತ್ರಾಂಕಿತ ವ್ಯವಸ್ಥಾಪಕಿ ಕೆ.ಸುಮತಿ ವಯೋ ನಿವೃತ್ತಿ ಯಾದ ಪ್ರಯುಕ್ತ ಶಿಕ್ಷಣ ಇಲಾಖೆಯಿಂದ ಆತ್ಮೀಯವಾಗಿ ಬೀಳ್ಕೊಡಲಾಯಿತು.
ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ. ನಾಗೇಂದ್ರಪ್ಪರವರು ಸುಮತಿ ಮತ್ತು ಅವರ ಪತಿ ಕ್ರೀಡಾಪಟು ಉಮೇಶ್ ದಂಪತಿಗಳನ್ನು ಸನ್ಮಾನಿಸಿ ಮಾತ ನಾಡಿ, ಶಿಕ್ಷಣ ಇಲಾಖೆಯಲ್ಲಿ ವಿವಿಧ ಸ್ಥರ ಗಳಲ್ಲಿ ಸೇವೆ ಸಲ್ಲಿಸುತ್ತಾ 32 ವರ್ಷ ಗಳ ಸಮಸ್ತ ಶಿಕ್ಷಕರನ್ನು ಸ್ಪಂಧಿಸಿದ್ದಾರೆ. ಕಚೇರಿ ವ್ಯವಸ್ಥಾಪಕರಾಗಿ ಬಂದ ಮೇಲೆ ಎಲ್ಲೂ ಯಾವುದೇ ರೀತಿಯ ಗೊಂದಲವಿಲ್ಲದೆ ಕಪ್ಪು ಚುಕ್ಕೆಯಿಲ್ಲದೆ ನಡೆದುಕೊಂಡು ಕರ್ತವ್ಯ ಮಾಡಿ ಎಲ್ಲರೊಂದಿಗೆ ಸ್ನೇಹಮಯಿಯಾಗಿ ನಡೆದುಕೊಂಡಿದ್ದಾರೆ. ಅಂತಹವರು ವಯೋ ಸಹಜವಾಗಿ ನಿವೃತ್ತರಾಗುತ್ತಿರು ವುದು ನೋವು ತಂದಿದೆಯಾದರೂ ಅನಿವಾರ್ಯವಾಗಿದೆ. ಭಗವಂತ ಮುಂದಿನ ದಿನಗಳಲ್ಲಿ ಅವರಿಗೆ ಆರೋಗ್ಯ ಭಾಗ್ಯ ನೆಮ್ಮದಿ ನೀಡಲಿ ಎಂದು ಹಾರೈಸಿದರು.
ರಾಜ್ಯ ಸರಕಾರಿ ನೌಕರರ ಸಂಘದ ಅಧ್ಯಕ್ಷ ಬಿ.ಸಿದ್ದಬಸಪ್ಪ ಅವರ ಸೇವೆಯನ್ನು ಕೊಂಡಾಡಿದರು. ಶಿಕ್ಷಣ ಸಂಯೋಜಕ ಪಂಚಾಕ್ಷರಯ್ಯ, ತಾಲೂಕು ಸರಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಪೃಥ್ವಿ, ಸರಕಾರಿ ನೌಕರ ಸಂಘದ ಪ್ರಧಾನ ಕಾರ್ಯದರ್ಶಿ ಎಸ್.ಕೆ. ಮೋಹನ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶ್ರೀಧರಗೌಡ, ಸುನೀಲ್ ಕುಮಾರ್ ವಿವಿಧ ಶಿಕ್ಷಕರ ಸಂಘಗಳ ಮುಖಂಡರು ಹಾಗೂ ಕಚೇರಿ ಸಿಬ್ಬಂದಿ ಉಪಸ್ಥಿತರಿದ್ದರು.