ರೈತರಿಗೆ ಗುಡ್ ನ್ಯೂಸ್: ಇಂದಿನಿಂದಲೇ ಭದ್ರಾ ನಾಲೆಗೆ ನೀರು ಬಿಡುಗಡೆ

ವಿಜಯ ಸಂಘರ್ಷ ನ್ಯೂಸ್ 
ಭದ್ರಾವತಿ: ಭದ್ರಾ ಅಚ್ಚುಕಟ್ಟು ಪ್ರದೇಶ ಅಭಿವೃದ್ಧಿ ವ್ಯಾಪ್ತಿ ಒಳಪಡುವ ಭದ್ರಾ ಎಡದಂಡೆ ನಾಲೆಯ ಅನುಕೂಲಕ್ಕಾಗಿ ಇಂದಿನಿಂದಲೇ ಅನ್ವಯಗಳುವಂತೆ ಮುಂದಿನ 120 ದಿನಗಳ ಕಾಲ ನೀರು ಹರಿಸಲು ನಿರ್ಣಯ ಕೈಗೊಳ್ಳಲಾಗಿದೆ ಎಂದು ಕಾಡಾ ಅಧ್ಯಕ್ಷ ಡಾ.ಅಂಶುಮಂತ್ ತಿಳಿಸಿದರು.

ರೈತರು ಹಿಂಗಾರು ಬೆಳೆ ಬೆಳೆಯಲು ತಯಾರು ಮಾಡಿಕೊಳ್ಳಬಹುದು, ರೈತರು ಆತಂಕ ಪಡುವುದು ಬೇಡ. ನೀರು ಬಿಡುವ ತಿರ್ಮಾಣವನ್ನು ಸರಕಾರ ಮಾಡಿದೆ.ಭದ್ರಾ ಅಚ್ಚುಕಟ್ಟಿನ ರೈತರು ಯಾವ ವದಂತಿಗಳಿಗೂ ಕಿವಿಕೊಡಬಾರದು. 120 ದಿನದಲ್ಲಿ 32 ಟಿಎಂಸಿ ನೀರು ಬಿಡುಗಡೆ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ.

ಎಡನಾಲೆಗೆ ಪ್ರತಿದಿನ 380 ಕ್ಯೂಸೆಕ್ ನೀರು ಬಿಡುಗಡೆ ಮಾಡುತ್ತೇವೆ. ಬಲದಂಡೆ ನಾಲೆಗೆ ಜ. 8 ರಿಂದ 2650 ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗುತ್ತದೆ. ಪ್ರಸ್ತುತ ಭದ್ರಾ ಜಲಾಶಯದಲ್ಲಿ 66.964 ಟಿಎಂಸಿ ನೀರು ಇದೆ ಎಂದು ವಿವರ ನೀಡಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು