ಫೆ:12 ರಂದು ಕೃಷ್ಣ ಪ್ರತಿಷ್ಠಾನ ವತಿಯಿಂದ ವಿಚಾರ ಸಂಕಿರಣ

ವಿಜಯ ಸಂಘರ್ಷ ನ್ಯೂಸ್ 
ಕೆ ಆರ್ ಪೇಟೆ: ತಾಲ್ಲೂಕಿನ ಕೃಷ್ಣ ಪ್ರತಿಷ್ಠಾನ ವತಿಯಿಂದ ಆಯೋಜಿಸಿ ರುವ ಪ್ರಸ್ತುತ ಕೃಷಿ ಬಿಕ್ಕಟ್ಟುಗಳು ಹಾಗೂ ಪರಿಹಾರಗಳು ವಿಚಾರ ಸಂಕಿರಣ ಕಾರ್ಯಕ್ರಮವನ್ನು ಪಟ್ಟಣದ ರಾಮದಾಸ್ ಸುಲೋಚನ ಸಭಾಂಗಣದಲ್ಲಿ ಫೆ:12 ರ ಬುಧವಾರ ಹಮ್ಮಿಕೊಳ್ಳಲಾಗಿದೆ.

 ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠ ಕೆಂಗೇರಿ ಬೆಂಗಳೂರು ಪೀಠಾಧಿಪತಿ ಡಾ.ನಿಶ್ಚಲಾನಂದ ನಾಥ ಸ್ವಾಮೀಜಿ ಅವರು ವಹಿಸುವರು.

 ಗೌರವ ಉಪಸ್ಥಿತಿ ಕೆ ಆರ್ ಪೇಟೆ ಕೃಷ್ಣ ಪ್ರತಿಷ್ಠಾನ ಗೌರವಾಧ್ಯಕ್ಷ ಸ್ಪೀಕರ್ ಕೃಷ್ಣ ಅವರ ಧರ್ಮಪತ್ನಿ ಇಂದಿರಮ್ಮಕೃಷ್ಣ ಉಪಸ್ಥಿತ ವಿರುವ ವಿಚಾರ ಸಂಕಿರಣ ದಲ್ಲಿ ಉಪನ್ಯಾಸ ನೀಡಲು ಮುಖ್ಯ ಅತಿಥಿಗಳಾಗಿ ನಿವೃತ್ತ ಪ್ರಾಂಶುಪಾಲ ಬಾಳೆಕಾಯಿ ಶಿವನಂಜಯ್ಯ, ಸಾವಯವ ಕೃಷಿಕ ಸಿ ಪಿ ಕೃಷ್ಣ, ಕೃಷಿ ಇಲಾಖೆ ಜಂಟಿ ನಿರ್ದೇಶಕ ಅಶೋಕ್, ನಿವೃತ್ತ ವ್ಯವಸ್ಥಾಪಕ ಎಂ ನಾಗರಾಜೇಗೌಡ, ಆಕಾಶವಾಣಿ ಕಾರ್ಯಕ್ರಮ ನಿರ್ವಹಣಾಧಿಕಾರಿ ಎನ್ ಕೇಶವಮೂರ್ತಿ ಭಾಗವಹಿಸು ವರು. ಅದ್ದರಿಂದ ತಾಲ್ಲೂಕಿನ ಪ್ರಗತಿ ಪರ ರೈತರು,ಕೃಷ್ಣ ಅಭಿಮಾನಿಗಳು ಕಾರ್ಯಕ್ರಮಕ್ಕೆ ಅತಿ ಹೆಚ್ಚಿನ ಸಂಖ್ಯೆ ಯಲ್ಲಿ ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿ ಗೊಳಿಸಬೇಕೆಂದು ಕೆ ಆರ್ ಪೇಟೆ ಕೃಷ್ಣ ಪ್ರತಿಷ್ಟಾನ ಅಧ್ಯಕ್ಷ ಗೂಡೆಹೊಸಹಳ್ಳಿ ಜವರಾಯಿಗೌಡ ತಿಳಿಸಿದರು.

ಅವರು ಪಟ್ಟಣದಲ್ಲಿರುವ ಪ್ರವಾಸಿ ಮಂದಿರದಲ್ಲಿ ಕಾರ್ಯಕ್ರಮದ ಆಹ್ವಾನ ಪತ್ರಿಕೆ ಬಿಡುಗಡೆ ಮಾಡಿ ಕಾರ್ಯ ಕ್ರಮದ ಬಗ್ಗೆ ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ಕೆ ಆರ್ ಪೇಟೆ ‌ಪ್ರತಿಷ್ಟಾನ ಪ್ರಧಾನ ಕಾರ್ಯದರ್ಶಿ ಉಪನ್ಯಾಸಕ ಕತ್ತರಘಟ್ಟ ವಾಸು, ನ್ಯಾಯಬೆಲೆ ಅಂಗಡಿ ಮಾಲಿಕರು ಹಾಗೂ ಜಿ.ಪಂ.ಮಾಜಿ‌ ಸದಸ್ಯ ಅಂಚನಹಳ್ಳಿ ಸುಬ್ಬಣ್ಣ, ಪತ್ರಿಕಾ ಹಿರಿಯ ವರದಿಗಾರ ಎಂ.ಕೆ.ಹರಿ ಚರಣ್ ತಿಲಕ್,ಹಿರಿಯ ಸಾಹಿತಿ ಬಲ್ಲೇನಹಳ್ಳಿ ಮಂಜುನಾಥ್,ಡಾ.ಕೆ‌ ಆರ್ ನೀಲಕಂಠ, ಅಗ್ರಹಾರಬಾಚಹಳ್ಳಿ ಗ್ರಾ.ಪಂ.ಸದಸ್ಯ ‌ಶ್ರೀನಿವಾಸ್ ಸಜ್ಜನ್ ಉಪಸ್ಥಿತರಿದ್ದರು.

(✍️ಸುದ್ದಿಯೊಂದಿಗೆ ಮನು ಮಾಕವಳ್ಳಿ ಕೆ ಆರ್ ಪೇಟೆ)

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು