ಫೆ-16ಕ್ಕೆ: ರೋಟರಿ ನಾಯಕತ್ವ ಪ್ರಶಸ್ತಿ ಪ್ರದಾನ

ವಿಜಯ ಸಂಘರ್ಷ ನ್ಯೂಸ್ 
ಶಿವಮೊಗ್ಗ: ನಗರದ ಕಾಸ್ಮೋ ಕ್ಲಬ್‌ನಲ್ಲಿ ರೋಟರಿ ಕ್ಲಬ್ ಸೆಂಟ್ರಲ್ ವತಿಯಿಂದ ಫೆ. 16 ರಂದು ರೋಟರಿ ಅಕಾಡೆಮಿ ಫಾರ್ ಹೈಯರ್ ಲೀಡರ್‌ಶಿಪ್ ಅವಾರ್ಡ್ಸ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ನಾಯಕತ್ವ ಪ್ರಶಸ್ತಿ ಪ್ರದಾನ ಫೆ. 16ರಂದು ಬೆಳಗ್ಗೆ 9.30ಕ್ಕೆ ವಿಧಾನ ಪರಿಷತ್ ಸದಸ್ಯ ಡಿ.ಎಸ್.ಅರುಣ್ ಕಾರ್ಯಕ್ರಮ ಉದ್ಘಾಟಿಸುವರು. ರೋಟರಿ ಜಿಲ್ಲಾ ಗವರ್ನರ್ ಸಿ.ಎ.ದೇವ್ ಆನಂದ್ ಅಧ್ಯಕ್ಷತೆ ವಹಿಸುವರು. ಜಿಲ್ಲಾ ಮಾಜಿ ಗವರ್ನರ್ ಅಭಿನಂದನ್ ಶೆಟ್ಟಿ, ರಾಜರಾಮ್ ಭಟ್, ಜ್ಞಾನ ವಸಂತ ಶೆಟ್ಟಿ, ಪಾಲಾಕ್ಷ.ಕೆ, ಬಿ.ಎಂ.ಭಟ್, ವಸಂತ್ ಹೋಬಳಿದಾರ್, ರಹ್ಲಾ ಜಿಲ್ಲಾ ಚೇರ್ಮನ್ ಚಂದ್ರಶೇಖರ ಮೆಂಡನ್, ಸಿ.ಸಿ.ಸವಿನ್, ಸುರೇಶ್. ಎಚ್.ಎಂ., ಸೆಂಟ್ರಲ್ ಅಧ್ಯಕ್ಷ ಕಿರಣ್‌ ಕುಮಾರ್.ಜಿ. ಭಾಗವಹಿಸುವರು ಎಂದು ಇವೆಂಟ್ ಚೇರ್ಮನ್ ರವಿ ಕೋಟೋಜಿ ತಿಳಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು