ವಿಜಯ ಸಂಘರ್ಷ ನ್ಯೂಸ್
ಬೆಂಗಳೂರು: ಜನಸಿರಿ ಫೌಂಡೇಶನ್ ವತಿಯಿಂದ ಹಮ್ಮಿಕೊಂಡಿದ್ದ 21 ನಿಮಿಷ ಗಳಲ್ಲಿ ರೈತರ ಕುರಿತು ಕವನ ರಚಿಸುವ ಬೃಹತ್ ಕಾರ್ಯ ಕ್ರಮವನ್ನು ಸಾರಿಗೆ ಸಚಿವ ರಾಮಲಿಂಗರೆಡ್ಡಿ ಉದ್ಘಾಟಿಸಿದರು.
ರಾಜ್ಯದ ನಾನಾ ಭಾಗಗಳಿಂದ ಸುಮಾರು 650 ಕ್ಕಿಂತ ಹೆಚ್ಚು ಕವಿಗಳು ಆಗಮಿಸಿ 21 ನಿಮಿಷಗಳಲ್ಲಿ ರೈತರ ಕುರಿತು ಕವನ ರಚಿಸಿದರು,
ಇದೇ ಸಂಧರ್ಭದಲ್ಲಿ ಅನೇಕ ರೈತರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ನಟ ನಿರ್ಮಾಪಕ ಗಂಡಸಿ ಸದಾನಂದ ಸ್ವಾಮಿ, ಮಾವಳ್ಳಿ ಶಂಕರ್,ಮಿಮಿಕ್ರಿ ಗೋಪಿ, ಜನಸಿರಿ ಫೌಂಡೇಶನ್ ಮುಖ್ಯಸ್ಥ ನಾಗಲೇಖ ಸೇರಿದಂತೆ ಅನೇಕ ಗಣ್ಯರು ಭಾಗವಹಿಸಿದ್ದರು.
Tags
ಬೆಂಗಳೂರು ವರದಿ