ವಿಜಯ ಸಂಘರ್ಷ ನ್ಯೂಸ್
ಶಿವಮೊಗ್ಗ: ಕೃತ್ವಿ ಆಯುರ್ವೇದ ಮೊದಲನೇ ವಾರ್ಷಿಕೋತ್ಸವದ ಅಂಗವಾಗಿ ನಗರದ ದುರ್ಗಿಗುಡಿ, ಮೊದಲ ಪ್ಯಾರಲಲ್ ರಸ್ತೆಯ ಆಸ್ವತ್ರೆ ಕಟ್ಟಡದಲ್ಲಿ ಡಾ.ಪ್ರಕೃತಿ ಮಂಚಾಲೆ ಯವರು ಫೆ: 22 ಶನಿವಾರ ಬೆಳಿಗ್ಗೆ 10 ರಿಂದ 2 ಗಂಟೆಯವರೆಗೆ ಗುಫಿಕ್ ಬಯೋ ಸೈನ್ಸ್ ಪ್ರಾಯೊಜಕತ್ವದಲ್ಲಿ ಉಚಿತ ಬಿ.ಎಂ.ಡಿ. ಪರೀಕ್ಷೆ ನಡೆಸಲಿದ್ದಾರೆ.
ಮಂಡಿನೋವು, ಭುಜನೋವು, ಕೈ, ಕಾಲು, ಕುತ್ತಿಗೆ, ಸೊಂಟ ಹಾಗೂ ಇತರೆ ಕೀಲು ನೋವುಗಳಿಗೆ ಉಚಿತ ತಪಾ ಸಣೆ ನಡೆಸಲಾಗುವುದು ಹಾಗುಮೂಳೆ ಸಾಂದ್ರತೆ ಪರೀಕ್ಷೆ ಮಾಡಲಾಗುವುದು.
ಅಂದಾಜು ಎರಡು ಸಾವಿರ ಮೌಲ್ಯದ ಸಾಂದ್ರತೆ ಪರೀಕ್ಷೆಯನ್ನು ಉಚಿತವಾಗಿ ನಡೆಸಲಾಗುವುದು. ರೋಟರಿ ಕ್ಲಬ್ ಶಿವಮೊಗ್ಗ ಜ್ಯುಬಿಲಿ ಸಹಕಾರದಲ್ಲಿ ಈ ಕಾರ್ಯ ಕ್ರಮಹಮ್ಮಿಕೊಂಡಿದ್ದು, ಎಲ್ಲರೂ ಇದರ ಸದುಪಯೋಗ ಪಡಿಸಿಕೊಳ್ಳಬೇಕೆಂದು ಅಧ್ಯಕ್ಷೆ ರೂಪಪುಣ್ಯಕೋಟಿ ಕೋರಿರುತ್ತಾರೆ. ನೋಂದಣಿ ಮತ್ತು ಹೆಚ್ಚಿನ ಮಾಹಿತಿಗೆ :9482255355 ಕರೆಮಾಡಿ.