ವಿಜಯ ಸಂಘರ್ಷ ನ್ಯೂಸ್
ಕೆ.ಆರ್.ಪೇಟೆ: ತಾಲ್ಲೂಕಿನ ಬೂಕನ ಕೆರೆ ಕಾಶಿ ಮುರಕನಹಳ್ಳಿ ಗ್ರಾಮದ ಕಾಂಗ್ರೆಸ್ ಮುಖಂಡ ಎಂ.ಪಿ.ಪ್ರೀತಮ್ ಗೌಡ ಹಾಗೂ ಅಶೋಕ್ ನೇತೃತ್ವದಲ್ಲಿ ಕಾಂಗ್ರೆಸ್ ಮುಖಂಡ ಮತ್ತು ಪುರಸಭಾ ಮಾಜಿ ಅಧ್ಯಕ್ಷ ಹಾಲಿ ಹಿರಿಯ ಸದಸ್ಯ ಕೆ.ಬಿ ಮಹೇಶ್ ಹುಟ್ಟು ಹಬ್ಬದ ಪ್ರಯುಕ್ತ ಹಾಗೂ ಮನ್ಮುಲ್ ಚುನಾವಣೆಯಲ್ಲಿ ಹ್ಯಾಟ್ರಿಕ್ ಗೆಲುವು ಸಾಧಿಸಿದ ನೂತನ ನಿರ್ದೇಶಕರಾದ ಡಾಲು ರವಿ ಹಾಗೂ ಎಂ.ಬಿ ಹರೀಶ್ ಅವರಿಗೂ ತಮ್ಮ ಗ್ರಾಮದಲ್ಲಿ ಅದ್ದೂರಿ ಯಾಗಿ ಕೇಕ್ ಕತ್ತರಿಸುವ ಮೂಲಕ ಬೃಹತ್ ಅಭಿನಂದನ ಕಾರ್ಯಕ್ರಮ ಅರ್ಥಪೂರ್ಣವಾಗಿ ಜರುಗಿತು.
ಬಳಿಕ ಮಾತನಾಡಿದ ಎಂ.ಪಿ ಪ್ರೀತಮ್ ಗೌಡ ನಮ್ಮ ನಾಯಕರಾದ ಪುರಸಭಾ ಹಿರಿಯ ಸದಸ್ಯ ಕೆ.ಬಿ.ಮಹೇಶ್ ಅವರ 60ನೇ ವರ್ಷದ ಹುಟ್ಟುಹಬ್ಬದ ಅಂಗ ವಾಗಿ ಅವರು ನಮ್ಮ ಗ್ರಾಮಕ್ಕೆ ಒಂದು ಲಕ್ಷಕ್ಕೂ ಹೆಚ್ಚು ಬೆಲೆ ಬಾಳುವ ಐ ಮಾಕ್ಸ್ ಲೈಟ್ ನೀಡುವ ಮುಖಾಂತರ ತಮ್ಮ ಹುಟ್ಟು ಹಬ್ಬದ ದಿನವೇ ಸಾಮಾಜಿಕ ಕಳಕಳಿ ಮನಸ್ಸು ಮಾಡಿದ್ದಾರೆ. ಇಂತಹ ಸೇವಾ ಮನೋಭಾವನೆ ಇರುವ ನಮ್ಮ ನಾಯಕನಿಗೆ ತಾಲೂಕಿನ ಸಾರ್ವಜನಿಕ ಆಸ್ಪತ್ರೆಯ ಒಳ ರೋಗಿಗಳಿಗೆ ಹಣ್ಣು ಹಂಪಲು ವಿತರಣೆ, ದೇವಾಲಯಗಳಲ್ಲಿ ವಿಶೇಷ ಪೂಜೆ ಸಲ್ಲಿಸಿ.ನಮ್ಮ ಗ್ರಾಮ ದಲ್ಲಿ ಕೇಕ್ ಕತ್ತರಿಸಿ ಸಂಭ್ರಮಿಸಿದೇವೆ.
ಇಂದಿನ ನಾಗರಿಕ ಸಮಾಜಕ್ಕೆ ಕೆ. ಬಿ. ಮಹೇಶ್ ಅವರಂತಹ ಹೃದಯವಂತ ನಾಯಕರು ಬೇಕಾಗಿದ್ದಾರೆ. ಮಹೇಶ್ ಅವರಿಗೆ ನಾಡದೇವತೆ ತಾಯಿ ಶ್ರೀ ಚಾಮುಂಡೇಶ್ವರಿ ದೇವಿಯುಆರೋಗ್ಯ, ಸಮೃದ್ಧಿ ನೀಡಿ ಕಾಪಾಡಿ ಜನಪರ ಹೋರಾಟಕ್ಕೆ ಹೆಚ್ಚಿನ ಶಕ್ತಿ ನೀಡಲಿ ಹಾಗೂ ಹಾಗೂ ಮಂಡ್ಯ ಜಿಲ್ಲಾ ಹಾಲು ಒಕ್ಕೂಟದ ಚುನಾವಣೆಯಲ್ಲಿ ಹ್ಯಾಟ್ರಿಕ್ ಗೆಲುವು ಸಾಧಿಸಿರುವ ಡಾಲು ರವಿ ಮತ್ತು ಎಂ.ಬಿ ಹರೀಶ್ ಅವರ ಆಡಳಿತ ಅವಧಿಯಲ್ಲಿ ಹಾಲು ಉತ್ಪಾದಕರ ಅಭಿವೃದ್ಧಿಗೆ ಶ್ರಮ ವಹಿಸಲಿ ಎಂದು ಶುಭಕೋರಿದರು.
ಬಳಿಕ ಮಾತನಾಡಿ ಮುಖಂಡ ಕಾಶಿ ಮುರುಕನಹಳ್ಳಿ ಅಶೋಕ್ ಹತ್ತು ಹಲವು ಜನಪರವಾದ ಕಾರ್ಯಕ್ರಮ ಗಳನ್ನು ಅನುಷ್ಠಾನಗೊಳಿಸಿ, ನೊಂದ ಜನರ ಗಟ್ಟಿ ಧ್ವನಿಯಾಗಿ ಕೆಲಸ ಮಾಡಿ ಪ್ರಸ್ತುತ ಪುರಸಭೆ ಸದಸ್ಯರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಕೆ.ಬಿ. ಮಹೇಶ್ ಬಡ ಜನರು ಹಾಗೂ ಧೀನ ದಲಿತರಿಗೆ ಸಾಮಾಜಿಕ ನ್ಯಾಯ ನೀಡಲು ಹೋರಾಟ ನಡೆಸುತ್ತಿದ್ದಾರೆ. ನಾಡದೇವತೆ ತಾಯಿ ಶ್ರೀಚಾಮುಂಡೇ ಶ್ವರಿಯು ಮಹೇಶ್ ಅವರಿಗೆ ಶಕ್ತಿ ತುಂಬುವ ಮೂಲಕ ಇನ್ನಷ್ಟು ಹೋರಾಟ ಮಾಡುವ ಧೈರ್ಯ ತುಂಬಲಿ ಎಂದು ಅಶೋಕ್ ಪ್ರಾರ್ಥಿಸಿದರು.
ಕಾರ್ಯಕ್ರಮದಲ್ಲಿ ಪುರಸಭಾ ಸದಸ್ಯ ಕೆ. ಬಿ ಮಹೇಶ್, ಮನ್ ಮುಲ್ ನಿರ್ದೇಶಕರಾದ ಡಾಲು ರವಿ, ಎಂ.ಬಿ ಹರೀಶ್,ತಾ. ಪಂ ಮಾಜಿ ಸದಸ್ಯ ಬಿ.ಟಿ ವೆಂಕಟೇಶ್,ಕಾಂಗ್ರೆಸ್ ಮುಖಂಡ ಈಶ್ವರ್ ಪ್ರಸಾದ್,ಗಂಜಿಗೆರೆ ಶಶಿಧರ್, ಕಬ್ಲುಗೆರೆಪುರ ಪುಟ್ಟಸ್ವಾಮಿಗೌಡ, ಬೂಕನಕೆರೆ ಅಡಿಕೆ ಮಹೇಶ್, ಬಲ್ಲೇನಹಳ್ಳಿ ರಮೇಶ್, ಬೂಕನಕೆರೆ ಮಹೇಶ್,ಗ್ರಾಮದ ಮುಖಂಡರಾದ ಗೋಪಾಲ್,ನಿಂಗೇಗೌಡ, ನವೀನ್, ಬಸವರಾಜು, ಪುಟ್ಟೇಗೌಡ, ಹರೀಶ್ ಸೇರದಂತೆ ಗ್ರಾಮದ ಮುಖಂಡರಿದ್ದರು.
*✍️ಸುದ್ದಿಯೊಂದಿಗೆ ಮನು ಮಾಕವಳ್ಳಿ ಕೆ ಆರ್ ಪೇಟೆ*
Tags
ಕೆ ಆರ್ ಪೇಟೆ ವರದಿ