ಎಲ್ಲಾ ಕಾಲಕ್ಕೂ ಸಲ್ಲುವ ಕವಿ ದ.ರಾ.ಬೇಂದ್ರೆ: ಜೆ.ಎನ್. ಬಸವರಾಜಪ್ಪ

ವಿಜಯ ಸಂಘರ್ಷ ನ್ಯೂಸ್ 
ಭದ್ರಾವತಿ: ಸಾಹಿತ್ಯದಲ್ಲಿಯೂ ಸಹ ಬೇಂದ್ರೆ ಎಂಬುವ ಸಂದೇಶವನ್ನು ಸಾರಿದ ಉತ್ತರ ಕರ್ನಾಟಕದ ಭಾಷಾ ಶೈಲಿಯ, ಜಗದ ಕವಿ ಜನಮನದ ಕವಿ ಅಂಬಿಕಾತನ ಯದತ್ತ ಎಂಬ ಕಾವ್ಯನಾಮದಿಂದ, ಕಾವ್ಯ ಲೋಕದ ಭೀಷ್ಮ ಎನಿಸಿದ,ಎಲ್ಲಾ ಕಾಲಕ್ಕೂ ಸಲ್ಲುವ ಕವಿ ಯಾಗಿದ್ದರು ಎಂದು ಸಾಹಿತಿ ಜೆ ಎನ್ ಬಸವರಾಜಪ್ಪ ಹೇಳಿದರು.

ತಾಲೂಕು ಎರೆಹಳ್ಳಿ ಗ್ರಾ ಪಂ ಗ್ರಂಥಾಲಯ ಮತ್ತು ಸರ್ಕಾರದ ಹಿರಿಯ ಪ್ರಾಥಮಿಕ ಶಾಲೆ ಆಶ್ರಯದಲ್ಲಿ ನಡೆದ ದ.ರಾ.ಬೇಂದ್ರೆ ಯವರ ಜಯಂತಿಯ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ನೋಡುವುದಾದರೆ ಸರಿಯಾಗಿಯೇ ನೋಡು ನೀ ಹಿಂಗ ನೋಡಬೇಡ ನನ್ನ ಎಂದು ನುಡಿದ, ಇನ್ನೂ ಯಾಕ ಬರಲಿಲ್ಲವ ಹುಬ್ಬಳ್ಳಿಯವಾ ಅಂತ ಕರೆದ, ಇಳಿದು ಬಾ ತಾಯಿ ಇಳಿದು ಬಾ ಎಂದು, ಸಾಹಿತ್ಯ ಗಂಗೆಯನ್ನು ಧರೆಗೆ ತಂದ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರಾದ, ದ.ರಾ.ಬೇಂದ್ರೆ ಯವರಿಗೆ, ಹುಟ್ಟು ಹಬ್ಬದ ಶುಭಾಶಯ ಗಳನ್ನು ಕೋರಿದರು.

ಬೇಂದ್ರೆಯವರ ತಂದೆ ರಾಮಚಂದ್ರಪ್ಪ ತಾಯಿ ಅಂಬವ್ವ ಇವರಿಗೆ 1896ರಲ್ಲಿ ಜನಿಸಿದರು. ಇವರು ರಚಿಸಿದ "ಅರಳು-ಮರಳು" ಎಂಬ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರೆತಿದೆ. ಅಲ್ಲದೆ, 1973 ರಲ್ಲಿ ರಚಿಸಿದ, ಇವರ ಅಭೂತ ಪೂರ್ವ ಕೃತಿಯಾದ ", ನಾಕುತಂತಿ " ಎಂಬ ಕೃತಿಗೆ ಜ್ಞಾನಪೀಠ ಪ್ರಶಸ್ತಿ ದೊರೆತಿದೆ ಸಾಹಿತ್ಯ ಕ್ಷೇತ್ರಕ್ಕೆ ಇವರ ಕೊಡಿಗೆ ಅಪಾರ ವಾದದ್ದು ಎಂದರು. 

ಕಥೆ ಕವಿತೆ ನಾಟಕ ವಿಮರ್ಶೆ ಇವುಗಳನ್ನು ರಚಿಸಿದ್ದಾರೆ ಎಂದರು 1981 ರಲ್ಲಿ ನಮ್ಮನ್ನಗಲಿದ ಇವರು ಇಂದಿಗೂ ಕಾವ್ಯಗಾರುಡಿಗರಾಗಿ ನೆನಪಿನಲ್ಲಿ ಉಳಿದಿದ್ದಾರೆ. ಇವರ ಸಾಕಷ್ಟು ಕವಿತೆಗಳು, ಭಾವಗೀತೆ ಗಳಾಗಿಯೂ ಸಿನಿಮಾಗೀತೆ ಗಳಾಗಿಯೂ ಹೆಸರು ಮಾಡಿವೆ ಎಂದರು. 
ಮಕ್ಕಳು ದ ರಾ ಬೇಂದ್ರೆಯವರ ಕವಿತೆಗಳನ್ನು ಹಾಡಿದರು.

1 ಕಾಮೆಂಟ್‌ಗಳು

  1. ನಮಸ್ತೆ ಕೃಷ್ಣ ಅವರೇ ದಾರ ಬೇಂದ್ರೆಯವರ ಜಯಂತಿಯ ಕುರಿತು ತುಂಬಾ ಚೆನ್ನಾಗಿ ಲೇಖನವನ್ನು ಪ್ರಕಟಿಸಿದ್ದೀರಿ ಇದು ದಾರಾ ಬೇಂದ್ರೆ ಅವರ ಮೇಲೆ ನೀವು ಇಟ್ಟಿರುವ ಅಭಿಮಾನವು ಹೌದು. ಪ್ರಕಟಿಸಿದ್ದಕ್ಕಾಗಿ ಧನ್ಯವಾದಗಳು 🙏
    Jnb

    ಪ್ರತ್ಯುತ್ತರಅಳಿಸಿ
ನವೀನ ಹಳೆಯದು