ವಿಜಯ ಸಂಘರ್ಷ ನ್ಯೂಸ್
ಕೆ.ಆರ್. ಪೇಟೆ: ಮೂರು ಜೀವನದಿ ಗಳು ನೇರವಾಗಿವ ಸೇರುವ ಏಕೈಕ ಪುಣ್ಯಕ್ಷೇತ್ರ ದಲ್ಲಿ ಸರ್ಕಾರ ಮಹಾ ಕುಂಭಮೇಳವನ್ನು ಆಯೋಜನೆ ಮಾಡುವ ಮೂಲಕ ಭಕ್ತಾಧಿಗಳ ಪೂಜಾ ಸೇವೆಗೆ ಅವಕಾಶ ಮಾಡಿ ಕೊಡಬೇಕು ಎಂದು ಹಿಂದೂ ಸಂಘಟನೆಯ ಮುಖಂಡ ಎಚ್.ಬಿ. ಮಂಜುನಾಥ ಮನವಿ ಮಾಡಿದ್ದಾರೆ.
ದೇಶದ ವಿವಿಧ ಭಾಗಗಳಲ್ಲಿ ಪುರಾತನ ಕಾಲದಿಂದಲೂ ಕುಂಭ ಮೇಳೆ ನಡೆದು ಬಂದಿರುವುದು ನಮಗೆಲ್ಲಾ ತಿಳಿದಿದೆ ಈಗ ಪ್ರಯಾಗ್ ರಾಜ್ ನಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳ ವಿಶ್ವದ ಬಹುದೊಡ್ಡ ಧಾರ್ಮಿಕ ಕಾರ್ಯಕ್ರಮವಾಗಿ ನಡೆಯುತ್ತಿದ್ದು ಬಹುತೇಕರು ಅಲ್ಲಿ ಪುಣ್ಯಸ್ನಾನ ಮಾಡುತ್ತಿ ದ್ದಾರೆ ಹಾಗೇ ಈಗ ಮೂರುದಿನಗಳ ಕಾಲ ಟಿ.ನರಸಿಪುರ ದಲ್ಲಿ ಕೂಡಾ ಕುಂಭ ಮೇಳ ನಡೆಯುತ್ತಿದ್ದು ಅಲ್ಲಿಯೂ ಲಕ್ಷಾಂತರ ಭಕ್ತರು ಪುಣ್ಯಸ್ನಾನ ಮಾಡಿದ್ದಾರೆ. ಆದರೆ ಒಂದು ಮುಖ್ಯವಾದ ವಿಷಯ ಎಂದರೆ ಪ್ರಯಾಗ್ ರಾಜ್ನ ನಲ್ಲಿ ಗಂಗಾ ಯಮುನಾ ನದಿಗಳು ಸೇರುವುದನ್ನು ನಾವು ಕಾಣಬಹುದು ಆದರೆ ಸರಸ್ವತಿ ನದಿ ಗುಪ್ತಗಾಮಿನಿಯಾಗಿ ಸೇರುತ್ತದೆ.
ಟಿ ನರಸಿಪಯರದಲ್ಲಿ ಕೂಡಾ ಕಪಿಲಾ ಕಾವೇರಿ ನೇರ ಸೇರಿದರೆ ಸ್ಪಟಿಕಾ ನದಿ ಗುಪ್ತ ಗಾಮಿನಿಯಾಗಿ ಸೇರುತ್ತದೆ. ಆದರೂ ಇವುಗಳನ್ನು ಮಹಾ ಸಂಗಮ ಎಂದು ಶ್ರದ್ದಾ ಭಕ್ತಿಯಿಂದ ವಿಶೇಷ ವಾಗಿ ಕುಂಭ ಮೇಳ ಮಾಡಲಾಗುತ್ತದೆ. ಆದರೆ ದೇಶದಲ್ಲಿ ಮೂರೂ ಜೀವಂತ ನದಿಗಳು ನೇರವಾಗಿಯೇ ಏಕೈಕ ಸ್ಥಳ ಇರುವುದು ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ತಾಲೂಕಿನಲ್ಲಿ ಮಾತ್ರ ಈ ಪುಣ್ಯ ಸ್ಥಳದಲ್ಲಿ ಮಹದೇಶ್ವರರು ನೆಲೆಸಿದ್ದರು. ಇದೇ ಸ್ಥಳದಲ್ಲಿ ಕಾವೇರಿ, ಲಕ್ಷ್ಮಣ ತೀರ್ಥ, ಹೇಮಾವತಿ ನದಿಗಳು ಒಟ್ಟಿಗೆ ಸೇರುತ್ತವೆ. ಆದುದ್ದರಿಂದ ಈ ಕ್ಷೇತ್ರವು ವಿಶ್ವದಲ್ಲಿಯೇ ಅತ್ಯೆಂತ ಸರ್ವಶ್ರೇಷ್ಠ ವಾಗಿ ಧಾರ್ಮಿಕ ಕ್ಷೇತ್ರ ವಾಗಿದ್ದು ನಮ್ಮ ಪೂರ್ವಿಕರು ಈ ಸ್ಥಳದಲ್ಲಿ ದಾರ್ಮಿಕ ಕಾರ್ಯಕ್ರಮ ನಡೆಸಿಕೊಂಡು ಬಂದಿದ್ದರು.
ಇದೇ ಕಾರಣದಿಂದಾಗಿ ಈ ಹಿಂದೆ ಮಾಜಿ ಸಚಿವರಾದ ನಾರಾಯಣ ಗೌಡರ ನೇತೃತ್ವದಲ್ಲಿ ಅತ್ಯೆಂತ ಯಶಸ್ವಿಯಾಗಿ ಕುಂಭಮೇಳವನ್ನು ಮಾಡಲಾಗಿತ್ತು.
ಈಗ ಶಾಸಕ ಎಚ್.ಟಿ.ಮಂಜು, ಜಿಲ್ಲಾ ಉಸ್ತುವಾರಿ ಸಚಿವ ಎನ್.ಚೆಲುವ ರಾಯಸ್ವಾಮಿ ಅವರು ಮತ್ತೆ ಕುಂಭ ಮೇಳವನ್ನು ತಾಲೂಕಿನಲ್ಲಿ ಆಚರಿಸುವ ಮೂಲಕ. ತಾಲೂಕಿನ ಹಾಗೂ ರಾಜ್ಯದ ಮೂಲೆ ಮೂಲೆಗಳಲ್ಲಿ ಇರುವ ಭಕ್ತಾಧಿ ಗಳ ಧಾರ್ಮಿಕ ಸೇವೆಗೆ ಅವಕಾಶ ಮಾಡಿಕೊಡಬೇಕು ಎಂದು ಎಚ್.ಬಿ. ಮಂಜುನಾಥ್ ಮನವಿ ಮಾಡಿದ್ದಾರೆ.
*✍️ಸುದ್ದಿಯೊಂದಿಗೆ ಮನು ಮಾಕವಳ್ಳಿ ಕೆ ಆರ್ ಪೇಟೆ*
Tags
ಕೆ ಆರ್ ಪೇಟೆ ವರದಿ