ಶಾಸಕ ಬಿ.ಕೆ.ಸಂಗಮೇಶ್ವರ್‌ಗೆ ಸಚಿವ ಸ್ಥಾನ-ಆಂಜನೇಯರನ್ನು ಎಂಎಲ್‌ಸಿ ಮಾಡಿ: ಡಿಎಸ್‌ಎಸ್ ಮನವಿ

ವಿಜಯ ಸಂಘರ್ಷ ನ್ಯೂಸ್ 
ಭದ್ರಾವತಿ: ವಿಧಾನ ಸಭಾ ಕ್ಷೇತ್ರದ ಶಾಸಕ ಬಿ.ಕೆ.ಸಂಗಮೇಶ್ವರ್ ರವರಿಗೆ ಸಚಿವ ಸ್ಥಾನ ಹಾಗೂ ಮಾಜಿ ಸಚಿವ ಎಚ್.ಆಂಜನೇಯ ರವರಿಗೆ ವಿಧಾನ ಪರಿಷತ್ ಸದಸ್ಯ ಸ್ಥಾನ ನೀಡುವುದು ಸೇರಿದಂತೆ ನಾನಾ ಬೇಡಿಕೆ ಗಳನ್ನು ಈಡೇರಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯ ಮಂತ್ರಿ ಡಿ.ಕೆ. ಶಿವಕುಮಾರ್‌ ರವರಿಗೆ ಕರ್ನಾಟಕ ದಲಿತ ಸಂಘರ್ಷ ಸಮಿತಿ ತಾಲೂಕು ಘಟಕ ಮನವಿ ಮಾಡಿದೆ.

ಈ ಸಂಬಂಧ ಪತ್ರಿಕಾಗೋಷ್ಠಿಯಲ್ಲಿ ಸಮಿತಿ ತಾಲೂಕು ಘಟಕದ ಅಧ್ಯಕ್ಷ ಎಸ್. ಪುಟ್ಟರಾಜು ಮಾತನಾಡಿ, ಸಂಗಮೇಶ್ವರ್‌ ರವರು ಕ್ಷೇತ್ರದಲ್ಲಿ 4 ಬಾರಿ ಶಾಸಕರಾಗಿದ್ದಾರೆ. ಜಿಲ್ಲೆಯ ಹಿರಿಯ ನಾಯಕರಾಗಿರುವ ಇವರಿಗೆ ಸಚಿವ ಸಂಪುಟದಲ್ಲಿ ಸ್ಥಾನ ಹಾಗು ಶೋಷಿತ ಸಮುದಾಯಗಳ ಧ್ವನಿ ಯಾಗಿರುವ ಸಾಮಾಜಿಕ ನ್ಯಾಯಕ್ಕಾಗಿ ತಮ್ಮ ಇಡೀ ಜೀವನ ಮುಡುಪಾಗಿಟ್ಟಿ ರುವ ರಾಜ್ಯದಲ್ಲಿ ಅತಿ ಹೆಚ್ಚು ವಸತಿ ಶಾಲೆಗಳನ್ನು ನಿರ್ಮಾಣ ಮಾಡಿ ದಂತಹ ಹೆಗ್ಗಳಿಕೆ ಹೊಂದಿರುವ ಮಾಜಿ ಸಚಿವ ಎಚ್.ಆಂಜನೇಯ ರವರಿಗೆ ಈ ಬಾರಿ ವಿಧಾನ ಪರಿಷತ್ ಸದಸ್ಯ ಸ್ಥಾನ ನೀಡಬೇಕೆಂದು ಮನವಿ ಮಾಡುವ ಮೂಲಕ ಒತ್ತಾಯಿಸಿದರು.

ಮುಂದಿನ 2025-26ನೇ ಸಾಲಿನ ಎಸ್.ಸಿ.ಪಿ/ಟಿ.ಎಸ್.ಪಿ ಅನುದಾನ ಎಲ್ಲಾ ಇಲಾಖೆಗಳು ಪರಿಣಾಮಕಾರಿ ಯಾಗಿ ಸದ್ಬಳಕೆ ಮಾಡಿ ಕೊಳ್ಳುವಂತೆ ಅಧಿಕಾರಿಗಳಿಗೆ ಎಚ್ಚರಿಸಬೇಕು. ಅಲ್ಲದೆ ಶೋಷಿತ ಸಮಾಜದ ನಿಗಮಗಳಿಗೆ ಅತಿ ಹೆಚ್ಚಿನ ಅನುದಾನ ನೀಡಬೇಕು ಪಿ.ಟಿ.ಸಿ.ಎಲ್ ಕಾಯ್ದೆ ಸರಕಾರ ಯಥಾವತ್ತಾಗಿ ಅನುಷ್ಠಾನ ಗೊಳಿಸಿ ಜಾರಿಗೆ ತಂದರೂ ತಾಲೂಕಿನ ಆಧಿಕಾರಿಗಳು ದಲಿತರಿಗೆ ಭೂಮಿ ಯನ್ನು ಬಿಡಿಸಿಕೊಡಲು ವಿಳಂಬ ಧೋರಣೆ ಅನುಸರಿಸುತ್ತಿರುವುದು ವಿಪರ್ಯಾಸದ ಸಂಗತಿಯಾಗಿದ್ದು, ಈ ಸಂಬಂಧ ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಅಧಿಕಾರಿಗಳಿಗೆ ನಿರ್ದೇಶನ ನೀಡುವಂತೆ ಆಗ್ರಹಿಸಿದರು.

ರಾಜೀವ್ ಗಾಂಧಿ ವಸತಿ ನಿಗಮದಿಂದ ವಸತಿ ರಹಿತ ಎಸ್.ಸಿ/ಎಸ್.ಟಿ ಜನಾಂಗದವರಿಗೆ ಮನೆಯನ್ನು ನಿರ್ಮಿಸಲು ಸರಕಾರ ಗ್ರಾಮೀಣ ಪ್ರದೇಶದ ಫಲಾನುಭವಿಗಳಿಗೆ 1.80 ಲಕ್ಷ ರು. ನಗರ ಪ್ರದೇಶದ ಫಲಾನು ಭವಿಗಳಿಗೆ 2.70 ಲಕ್ಷ ರೂ, ನಿಗದಿ ಪಡಿಸಿದ್ದು, ಬದಲಾಗಿ ಪ್ರಸಕ್ತ ಸಾಲಿನಲ್ಲಿ ಗ್ರಾಮೀಣ ಪ್ರದೇಶದವರೆಗೆ 10 ಲಕ್ಷ ರು. ಮತ್ತು ನಗರ ಪ್ರದೇಶದವರಿಗೆ 15 ಲಕ್ಷ ರು. ಅನುದಾನ ನೀಡಬೇಕು. ಸುಪ್ರೀಂ ಕೋರ್ಟ್ ಆದೇಶದಂತೆ ಒಳ ಮೀಸಲಾತಿ ಅನುಷ್ಠಾನಕ್ಕೆ ತರಲು ಆಯಾ ರಾಜ್ಯಗಳಿಗೆ ಸೂಕ್ತ ನಿರ್ದೇಶನ ನೀಡಿದೆ. ಸರಕಾರ ಸಾಮಾಜಿಕ ನ್ಯಾಯದ ಜನ ಸಂಖ್ಯಾನು ಗುಣವಾಗಿ ಒಳ ಮೀಸಲಾತಿಯನ್ನು ಜಾರಿಗೊಳಿ ಸಲು ನಿವೃತ್ತ ನ್ಯಾಯ ಮೂರ್ತಿಗಳು ಎಚ್.ಎನ್ ನಾಗಮೋಹನ್ ದಾಸ್‌ ರವರ ನೇತೃತ್ವದಲ್ಲಿ ಸಮಿತಿ ರಚಿಸಿ 3 ತಿಂಗಳೊಳಗೆ ವರದಿನೀಡುವಂತೆ ಆದೇಶಿಸಿದೆ. ವರದಿ ನೀಡಿದ ನಂತರ ಸರಕಾರ ಅದನ್ನು ತಕ್ಷಣ ಜಾರಿಗೊಳಿಸ ಬೇಕೆಂದು ಆಗ್ರಹಿಸಿದರು.

ಸಾಮಾಜಿಕ ನ್ಯಾಯಕ್ಕಾಗಿ ಸರಕಾರ ಕಾಂತರಾಜ್ ಆಯೋಗದ ವರದಿ ತಕ್ಷಣ ಜಾರಿಗೊಳಿಸಬೇಕು. ಸರಕಾರದ ವಿವಿಧ ಇಲಾಖೆಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ಗ್ರೂಪ್ "ಡಿ" ನೌಕರರುಗಳಿಗೆ ಏಜನ್ಸಿ ಬದಲಾಗಿ ಸರಕಾರವೇ ನೇರವಾಗಿ ವೇತನ ಪಾವತಿಮಾಡಬೇಕೆಂದು ಒತ್ತಾಯಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಸಮಿತಿ ಹಿರಿಯ ಮುಖಂಡರಾದ ಮಾರುತಿ, ಪ್ರಭಾಕರ್ ಹೆಬ್ಬಂಡಿ, ರಾಮಣ್ಣ, ವಿದ್ಯಾರ್ಥಿ ಜಿಲ್ಲಾ ಒಕ್ಕೂಟದ ಅಧ್ಯಕ್ಷ ಎಸ್.ಗೋವಿಂದ ರಾಜು, ಹಿರಿಯೂರು ಹೋಬಳಿ ಸಂಚಾಲಕ ಎಚ್.ಎಲ್ ಅಣ್ಣಪ್ಪ ತಾಲೂಕು ಸಂಘಟನಾ ಸಂಚಾಲಕ ಟಿ. ರುದ್ರೇಶ್ ಅತ್ತಿಗುಂದ ಮತ್ತು ತಾಲೂಕು ವಿದ್ಯಾರ್ಥಿ ಒಕ್ಕೂಟದ ಮಹೇಶ್ ಅತ್ತಿಗುಂದ ಉಪಸ್ಥಿತರಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು