ಭದ್ರಾವತಿ-ಮಹಿಳೆಯ ಮಾಂಗಲ್ಯ ಸರ ಕಿತ್ತು ಕಳ್ಳರು ಪರಾರಿ

ವಿಜಯ ಸಂಘರ್ಷ ನ್ಯೂಸ್ 
ಭದ್ರಾವತಿ: ದೇವಸ್ಥಾನದ ರಸ್ತೆಯ ಮೂಲಕ ವೀರಾಪುರಕ್ಕೆ ಬೈಕ್ ನಲ್ಲಿ ಹೊರಟಿದ್ದ ವೃದ್ಧ ದಂಪತಿಗಳ ಮಾಂಗಲ್ಯ ಸರ ಕಳುವು ಮಾಡಲಾಗಿದೆ. 

ಸಂಬಂಧಿಕರ ಮನೆಯ ಕಾರ್ಯಕ್ರಮಕ್ಕೆ ಹಿರಿಯೂರು ವೀರಾಪುರದ ಹನುಮಂತೇಗೌಡ ಎನ್ನುವವರು ಬೈಕ್ ನಲ್ಲಿ ಪತ್ನಿ ಜೊತೆ ತೆರಳಿದ್ದರು. ಕಾರ್ಯಕ್ರಮ ಮುಗಿಸಿ ವಾಪಾಸ್ ಮನೆಗೆ ತೆರಳುವಾಗ ಹನುಮಂತೆಗೌಡ ವಾಹನವನ್ನು ನಿಧಾನ ಗೊಳಿಸು ತ್ತಿದ್ದಂತೆ ಬೈಕ್ ನ ಹಿಂಬದಿ ಯಿಂದ ಇನ್ನೊಂದು ಬೈಕಿನಲ್ಲಿ ಬಂದ ಯುವಕರಿಬ್ಬರು ಗೌಡರ ಪತ್ನಿಯ ಕುತ್ತಿಗೆ ಯಲ್ಲಿದ್ದ 35 ಗ್ರಾಂ ಚಿನ್ನಾ ಭರಣವನ್ನು ಎಳೆದೊಯ್ದಿದ್ದಾರೆ.ತಾಳಿ ಸರದ ಬೆಲೆ 1.75.000/-ರೂ. ಗಳಾಗಿರಬಹುದು ಎಂದು ಅಂದಾಜಿಸಲಾಗಿದೆ. 

ನ್ಯೂಟೌನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು