ಭದ್ರಾವತಿಯಲ್ಲಿ ಮತ್ತೆ ಗುಂಡಿನ ಸದ್ದು

ವಿಜಯ ಸಂಘರ್ಷ ನ್ಯೂಸ್ 
ಭದ್ರಾವತಿ : ಭದ್ರಾವತಿಯ ರೌಡಿಶೀಟರ್ ಶಾಹಿದ್ ಖುರೇಶಿ ಮೇಲೆ ಮತ್ತೆ ಗುಂಡಿನ ಸದ್ದು ಮೊಳಗಿದೆ.

ರೌಡಿಶೀಟರ್ ಶಾಹಿದ್ ಖುರೇಶಿ ಕಾಲಿಗೆ ಪೊಲೀಸರು ಗುಂಡೇಟು ಹಾಕಿದ್ದಾರೆ. ಪೇಪರ್ ಟೌನ್ ಠಾಣೆಯ ಇನ್ಸ್‌ಪೆಕ್ಟರ್‌ ನಾಗಮ್ಮ, ಶಾಹಿದ್‌ ಖುರೇಷಿ ಕಾಲಿಗೆ ಗುಂಡು ಹೊಕ್ಕಿಸಿದ್ದಾರೆ. ರೌಡಿಶೀಟರ್ ಸಾತು ಆಲಿಯಾಸ್ ಸಿದ್ದಿಕ್ ಕೊಲೆ ಯತ್ನದ ಪ್ರಕರಣದಲ್ಲಿ ಶಾಹಿದ್ ಖುರೇಶಿ ಭಾಗಿಯಾಗಿದ್ದ. ತಲೆಮರೆಸಿಕೊಂಡಿದ್ದ ಶಾಹಿದ್ ಖುರೇಶಿಯನ್ನು ಬಂಧಿಸಲು ತೆರಳಿದಾಗ ಪೊಲೀಸ್ ಪೇದೆ ನಾಗರಾಜ್ ಮೇಲೆ ಶಾಹಿದ್‌ ಖುರೇಶಿ ಹಲ್ಲೆಗೆ ಯತ್ನಿಸಿದ್ದಾರೆ. 

ರಕ್ಷಣೆಗಾಗಿ ರೌಡಿಶೀಟರ್ ಶಾಹಿದ್ ಖುರೇಶಿಯ ಮೇಲೆ ಇನ್ಸ್ಪೆಕ್ಟರ್ ನಾಗಮ್ಮ ಫೈರಿಂಗ್‌ ಮಾಡಿದ್ದಾರೆ. ಪೇಪರ್ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು