ವಿಜಯ ಸಂಘರ್ಷ ನ್ಯೂಸ್
ಶಿವಮೊಗ್ಗ : ಆರೋಗ್ಯವೆ ಭಾಗ್ಯ. ಪ್ರತಿನಿತ್ಯದ ಜಂಜಾಟದಿಂದ, ಆಹಾರದ ವ್ಯತ್ಯಾಸದಿಂದಾಗಿ ಮಧ್ಯವಯಸ್ಕರಿಗೆ ಹಲವಾರು ಇಂದು ತೊಂದರೆ ಉಂಟಾಗುತ್ತಿದ್ದು, ಅದರ ನಿವಾರಣೆಗೆ ಆಗಿಂದಾಗೆ ವೈದ್ಯರಲ್ಲಿ ತಪಾಸಣೆ ಮಾಡಿಸಿಕೊಳ್ಳುವ ಮೂಲಕ ರೋಗ ಉಲ್ಬಣ ಆಗುವ ಮುಂಚಿತವಾಗಿ ಪರಿಹಾರ ಕಂಡು ಕೊಳ್ಳಬೇಕು ಎಂದು ರೋಟರಿ ಕ್ಲಬ್ ಜ್ಯೂಬಿಲಿ ಅಧ್ಯಕ್ಷರಾದ ರೊ. ರೂಪ ಪುಣ್ಯಕೋಟೆ ಹೇಳಿದರು.
ಕೃತ್ವಿ ಆಯುರ್ವೇದ ಮೊದಲನೇ ವರ್ಷದ ವಾರ್ಷಿಕೋತ್ಸವದ ಪ್ರಯುಕ್ತ ಉಚಿತ ಸಂಧಿ ಮತ್ತು ಮೂಳೆ ನೋವುಗಳ ತಪಾಸಣೆ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕಾಯಿಲೆ ಬರುವುದನ್ನು ತಡೆಗಟ್ಟಲು ಅನುಕೂಲವಾಗುವಂತೆ ರೋಟರಿ ಹಲವಾರು ಕಾರ್ಯಕ್ರಮ ಹಮ್ಮಿಕೊಳ್ಳು ತ್ತಿದ್ದು, ಈ ಬಾರಿ ಮೂಳೆ ಸಾಂಧ್ರತೆ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ನಿಟ್ಟಿ ನಲ್ಲಿ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಎಲ್ಲರಿಂದ ಉತ್ತಮ ಪ್ರತಿಕ್ರಿಯೆ ಬರುತ್ತಿದೆ ಎಂದರು.
ಡಾ. ಪ್ರಕೃತಿ ಮಂಚಾಲೆ ಮಾತನಾಡಿ, ನಮ್ಮ ಕೃತ್ವಿ ಆಯುರ್ವೇದ ಪ್ರಾರಂಭ ವಾಗಿ ಒಂದು ವರ್ಷವಾಯಿತು. ಈ ಸಂದರ್ಭದಲ್ಲಿ ನಾಗರೀಕರಿಗೆ ಅನುಕೂಲವಾಗುವಂತಹ ಕಾರ್ಯ ಕ್ರಮ ಹಮ್ಮಿಕೊಳ್ಳಲು ತೀರ್ಮಾನಿಸಿ, ಗುಫಿಕ್ ಬಯೋ ಸೈನ್ಸ್ ರವರ ಪ್ರಯೋಜಕತ್ವ ದಲ್ಲಿ ಉಚಿತವಾಗಿ ಬಿ.ಎಂ.ಡಿ.ಪರೀಕ್ಷೆ ಮೂಲಕ ಮಂಡಿ, ಭುಜ, ಕೈ-ಕಾಲು,ಕುತ್ತಿಗೆ,ಕೀಲು, ನೋವುಗಳ ತಪಾಸಣೆ ಮಾಡಲಾಗುತ್ತಿ ದೆ ಎಂದರು.
ತಾಂತ್ರಿಕ ಯುಗದಲ್ಲಿ ಮನುಷ್ಯ ಚಟುವಟಿಕೆಯಿಂದ ದೂರವಾಗು ತ್ತಿದ್ದು, ಪೌಷ್ಟಿಕ ಆಹಾರ ಉಪಯೋಗಿ ಸದಿರುವುದು, ಎಲ್ಲಾ ಕೆಲಸ ಗಳಿಗೂ ಯಂತ್ರಗಳನ್ನು ಉಪಯೋಗಿಸುತ್ತಿರು ವುದರಿಂದ ದೇಹ ದಂಡಿಸುವುದು ಕಡಿಮೆ ಯಾಗಿ, ಹಲವಾರು ಕೀಲು ನೋವುಗಳು ಚಿಕ್ಕ ವಯಸ್ಸಿನಲ್ಲೆ ಬರುತ್ತಿದೆ. ಅದನ್ನು ತಡೆಗಟ್ಟಲು ಆಗಿಂದಾಗೆ ವೈದ್ಯರಿಂದ ತಪಾಸಣೆ ಮಾಡಿಸಿ ಕೊಳ್ಳಬೇಕು. ಮೂಳೆ ಸವಕಳಿ ತಡೆಗಟ್ಟಲು ಸೊಪ್ಪು, ತರಕಾರಿ, ಮೊಟ್ಟೆ ಯಥೇಚ್ಛವಾಗಿ ಬಳಸಬೇಕು. ಜಂಕ್ ಫುಡ್ ಕಡಿಮೆ ಬಳಸುವುದರೊಂದಿಗೆ, ದೇಹ ದಂಡಿಸಲು ವ್ಯಾಯಾಮ, ಕನಿಷ್ಟ ವಾಯು ವಿಹಾರ ಪ್ರತಿ ನಿತ್ಯ ಒಂದು ಗಂಟೆ ನಡಿಗೆಯನ್ನು ಅಭ್ಯಾಸ ಮಾಡಿಕೊಳ್ಳುವ ಮೂಲಕ ಉತ್ತಮ ಜೀವನ ಶೈಲಿಯಿಂದ ರೋಗ ಮುಕ್ತರಾಗಿ ಬಾಳಬಹುದು ಎಂದು ಸಲಹೆ ನೀಡಿದರು.
ರೋಟರಿ ಮಾಜಿ ಸಹಾಯಕ ಗವರ್ನರ ಜಿ.ವಿಜಯಕುಮಾರ್, ಆರೋಗ್ಯ ಎಲ್ಲರಿಗೂ ಅತಿಮುಖ್ಯ. ಪ್ರಸ್ತುತ ದಿನದಲ್ಲಿ ಯಾರ ಬಳಿಯೂ ಸಮಯ ಇಲ್ಲದಂತಾಗಿದೆ. ಸಣ್ಣಪುಟ್ಟ ಸಮಸ್ಯೆ ಗಳಿಗೆ ಆಗಿಂದಾಗ್ಗೆ ವೈದ್ಯರ ಬಳಿ ಹೋಗಿ ಸಲಹೆ ಪಡೆದುಕೊಳ್ಳದೇ, ಆರೋಗ್ಯದ ಮೇಲೆ ನಿರ್ಲಕ್ಷ್ಯ ವಹಿಸು ತ್ತಿದ್ದಾರೆ. ಪೌಷ್ಟಿಕಾಂಶಯುಕ್ತ ಆಹಾರದ ಸೇವನೆ ಜೊತೆಗೆ ದೈಹಿಕ ವ್ಯಾಯಾಮ ಗಳನ್ನು ಪ್ರತಿನಿತ್ಯ ಮಾಡುವುದರಿಂದ ಉತ್ತಮ ಜೀವನ ಶೈಲಿ ರೂಪಿಸಿಕೊಳ್ಳ ಬಹುದು ಎಂದು ನುಡಿದರು.
ಶ್ರೀಕಾಂತ್ ಪ್ರಾಸ್ತಾವಿಕ ನುಡಿಗಳನ್ನಾ ಡಿದರು. ಸುಶ್ಮಿತ ಪ್ರಾರ್ಥಿಸಿ, ಸವಿತ ಸ್ವಾಗತಿಸಿದರೆ, ಸುರೇಶ್ ನಿರೂಪಿಸಿ ದರು. ಭಾರದ್ವಾಜ್, ಸತ್ಯನಾರಾಯಣ, ರೇಣುಕಾರಾದ್ಯ, ವಾಗೇಶ್, ವೆಂಕಟೇಶ್ ನಾಯಕ್, ಪದ್ಮಾವತಿ ಇದ್ದರು. ಸುಮಾರು ಇನ್ನೂರೈವತ್ತು ಮಂದಿ ಈ ಶಿಬಿರದ ಸದುಪಯೋಗ ಪಡೆದುಕೊಂಡರು.
Tags
ಶಿವಮೊಗ್ಗ ವರದಿ