ಬಗ‌ರ್ ಹುಕುಂ ಸಾಗುವಳಿ ದಾರರಿಗೆ ಹಕ್ಕು ಮಾನ್ಯ ಮಾಡಲು:ಮೈಕ್ರೋ ಫೈನಾನ್ಸ್ ಕಿರುಕುಳದ ವಿರುದ್ಧ ಸೂಕ್ತ ಕ್ರಮಕ್ಕೆ ರೈತಸಂಘ ಆಗ್ರಹ

ವಿಜಯ ಸಂಘರ್ಷ ನ್ಯೂಸ್ 
ಭದ್ರಾವತಿ: ಬಗ‌ರ್ ಹುಕುಂ ಸಾಗುವಳಿ ದಾರ ರಿಗೆ ಹಕ್ಕು ಮಾನ್ಯ ಮಾಡುವಂತೆ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಮೈಕ್ರೋ ಫೈನಾನ್ಸ್ ನವರ ಕಿರುಕುಳದ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಸಾಮೂಹಿಕ ನಾಯಕತ್ವ ದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಕೆ.ಟಿ. ಗಂಗಾಧರ್ ರವರ ನೇತೃತ್ವದಲ್ಲಿ ತಹಶೀಲ್ದಾರ್ ಕಚೇರಿ ಮುಂಭಾಗ ನೂರಾರು ರೈತರು ಬೃಹತ್ ಪ್ರತಿಭಟನೆ ನಡೆಸಿದರು. ಸರ್ಕಾರವು ತತಕ್ಷಣವೇ ರೈತರ ಹಾಗೂ ಗ್ರಾಮೀಣ ಜನರ ನೆರವಿಗೆ ಬರಬೇಕೆಂದು ಒತ್ತಾಯಿಸಿ ತಹಶೀಲ್ದಾರ್ ಮೂಲಕ ಸರ್ಕಾರಕ್ಕೆ ಆಗ್ರಹಿಸಿ ಮನವಿ ಸಲ್ಲಿಸಿದರು.

ತಾಲೂಕದಾದ್ಯಂತ ರೈತರು ಸರ್ಕಾರಿ ಭೂಮಿಯನ್ನು ಅನಾಧಿಕೃತವಾಗಿ ಸಾಗುವಳಿ ಬಂದಿರುತ್ತಾರೆ. ರೈತರು ಭೂಮಿಯ ಹಕ್ಕು ಮಂಜೂರು ಮಾಡು ವಂತೆ ನಮೂನೆ 50,53 ಹಾಗೂ 57 ರಲ್ಲಿ ಸರ್ಕಾರಕ್ಕೆ ಅರ್ಜಿಸಲ್ಲಿಸಿರುತ್ತಾರೆ. 

ಸದರಿ ಅರ್ಜಿಗಳನ್ನು ಪರಿಶೀಲಿಸಿ ಹಕ್ಕು ನೀಡಬೇಕಾದ ಸರ್ಕಾರಗಳು ಇಂದಿಗೂ ರೈತರಿಗೆ ಭೂಮಿ ಹಕ್ಕನ್ನು ನೀಡದೆ ರೈತರನ್ನು ಪ್ರತಿನಿತ್ಯ ತಾಲೂಕು ಕಚೇರಿಗೆ ಅಲೆದಾಡುವಂತೆ ಕಂದಾಯ ಇಲಾಖೆ ಸಿಬ್ಬಂದಿಗಳು ಅಲೆದಾಡಿಸುತ್ತಿ ರುವುದು ಖಂಡನಿಯ ಎಂದರು.

ಸರ್ಕಾರದ ಕಂದಾಯ ಮಂತ್ರಿಗಳೇ ಹಲವು ಬಾರಿ ತಾಕೀತು ಮಾಡಿದರು, ಇಲಾಖೆಯ ಸಿಬ್ಬಂದಿಗಳು ಇದುವರೆಗೂ ಯಾವುದೇ ಕ್ರಮಗಳನ್ನು ಕೈಗೊಂಡಿರುವುದಿಲ್ಲ. ಇದರ ದುರ್ಲಭ ಪಡೆದ ಅರಣ್ಯ ಇಲಾಖೆಯ ರೈತರು ಹಿಂದಿನಿಂದಲೂ ಸಾಗುವಳಿ ಮಾಡಿ ಕೊಂಡು ಬಂದಿರುವ ಭೂಮಿಯನ್ನು ಕಾನೂನುಬಾಹಿರ ವಾಗಿ ಕಿತ್ತುಕೊಳ್ಳಲು ಯತ್ನಿಸುತ್ತಿದ್ದು ರೈತರ ಮತ್ತು ಅರಣ್ಯ ಇಲಾಖೆಯ ಮಧ್ಯೆ ಪ್ರತಿದಿನವೂ ಸಂಘರ್ಷಕ್ಕೆ ದಾರಿಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರೈತರು ಬಡವರು ಕೂಲಿ ಕಾರ್ಮಿಕರು ಗ್ರಾಮೀಣ ಪ್ರದೇಶವಾಸಿಗಳು ವ್ಯವಸಾಯ ಹಾಗೂ ವ್ಯವಸಾಯೇತರ ಕಾರಣಕ್ಕಾಗಿ ಖಾಸಗಿ ಫೈನಾನ್ಸ್ ಗಳಿಂದ ಸಾಲ ಪಡೆದಿರು ತ್ತಾರೆ. ಸಾಲದ ಕಂತುಗಳ ವಸಲಿಗಾಗಿ ಖಾಸಗಿ ಫೈನಾನ್ಸ್ ಗಳು ಗ್ರಾಮೀಣ ಪ್ರದೇಶದ ಜನರಿಗೆ ಕಾನೂನುಬಾಹಿರುವಾಗಿ ಇಲ್ಲಸಲ್ಲದ ಕಿರುಕುಳ ನೀಡುತ್ತಿವೆ. ಹಲಗಲಿ ರೈತರ ಕೃಷಿ ಉಪಕರಣಗಳ ಜ್ಯಪ್ತಿ ಮೋಟಾರ್ ಸೈಕಲ್ ಗಳ ಜತ್ತಿ ರೈತರ ಮನೆ ಜತ್ತಿ ಸೇರಿದಂತೆ ರೈತರ ಮನೆ ಬಾಗಿಲಿಗೆ ಸಾಲಗಾರರು ಎಂದು ಫಲಕ ತೂಗು ಹಾಕುವುದು ಮನೆಯ ಬಾಗಿಲು ಹಾಗೂ ಗೋಡೆಯ ಮೇಲೆ ಸಾಲಗಾರರು ಎಂದು ಬರೆದು ಸಾಮಾಜಿಕವಾಗಿ ಗ್ರಾಮೀಣ ಜನರ ಮರ್ಯಾದೆಯನ್ನು ಹರಾಜು ಮಾಡುವುದರ ಜೊತೆಗೆ ಕಾನೂನು ಬಾಹಿರ ವಾಗಿ ಸಾಲ ವಸೂಲಿ ಕ್ರಮ ಗಳನ್ನು ಅನುಸರಿಸಿ ಗೂಂಡಾಗಿರಿ ನಡೆಸುತ್ತಿರುವುದನ್ನು ರೈತ ಸಂಘ ತೀವ್ರವಾಗಿ ಖಂಡಿಸುತ್ತದೆ ಎಂದರು. 

ಈ ಸಂಬಂಧ ತಾಲೂಕ ಆಡಳಿತ ಸೂಕ್ತ ಕ್ರಮಗಳನ್ನು ಕೈಗೊಂಡು ಫೈನಾನ್ಸಿಗಳು ಗ್ರಾಮೀಣ ಪ್ರದೇಶದ ಜನರಿಗೆ ನೀಡುತ್ತಿರುವ ಕಿರುಕುಳವನ್ನು ತಪ್ಪಿಸ ಬೇಕೆಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ಯಶವಂತ್ ರಾವ್ ಪೋರ್ಪಡೆ ಜಿಲ್ಲಾ ಕಾರ್ಯಾಧ್ಯಕ್ಷರು, ರಾಮ ಚಂದ್ರರಾವ್ ಪವರ್ ಪಡೆ, ಮಂಜುನಾಥೇಶ್ವರ ಹೆಚ್ ಎಸ್, ಹಾಲೇಶಪ್ಪ ಗೌಡ್ರು, ಈರಪ್ಪ ಪ್ಯಾಟಿ, ಹಿರಣ್ಣಯ್ಯ, ಡಿ.ವಿ ವಿರೇಶ್, ಮೋಹನ್ ಕೂಡ್ಲಿಗೆರೆ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು