ಹಿರಿಯ ಕಲಾವಿದ ವೈ.ಕೆ. ಹನುಮಂತಯ್ಯಗೆ ಗೌರವ ಡಾಕ್ಟರೇಟ್

ವಿಜಯ ಸಂಘರ್ಷ ನ್ಯೂಸ್ 
ಭದ್ರಾವತಿ: ನಗರದ ರಂಗಭೂಮಿ ಹಾಗೂ ಚಲನಚಿತ್ರ ಕಿರುತೆರೆ ನಟ ವೈ.ಕೆ.ಹನು ಮಂತಯ್ಯರವರ ಕಲಾ ಸೇವೆಯನ್ನು ಪರಿಗಣಿಸಿ ಹೊಸೂರಿನ ಏಷ್ಯಾ ಇಂಟರ್ ನ್ಯಾಷನಲ್ ಕಲ್ಬರ್‌ರಿಸರ್ಚ್ ಯೂನಿವರ್ಸಿಟಿ ಗೌರವ ಡಾಕ್ಟರೇಟ್ ಪದವಿನೀಡಿ ಗೌರವಿಸಿದೆ.

ಎಂಪಿಎಂ ಸಕ್ಕರೆ ಘಟಕದಲ್ಲಿ ಸುಮಾರು 29 ವರ್ಷ ಕರ್ತವ್ಯ ನಿರ್ವಹಿಸಿ ನಿವೃತ್ತಿ ಹೊಂದಿರುವ ವೈ.ಕೆ.ಹನುಮಂತಯ್ಯ ಅವರು ಸುಮಾರು 5 ದಶಕಗಳಿಂದ ರಂಗ ಭೂಮಿ ಕಲಾವಿದರಾಗಿ ಗುರುತಿಸಿ ಕೊಂಡಿದ್ದು, ಪೌರಾಣಿಕ, ಐತಿಹಾಸಿಕ, ಸಾಮಾಜಿಕ ಹಾಗೂ ಜಾನಪದ ಸೇರಿದಂತೆ ಒಟ್ಟು 60ಕ್ಕೂ ಹೆಚ್ಚು ನಾಟಕಗಳಲ್ಲಿ ಅಭಿನಯಿಸಿದ್ದಾರೆ. 

ಇವರ ಅಭಿನಯದ ನಾಟಕಗಳು ಸುಮಾರು 180 ಬಾರಿ ಪ್ರದರ್ಶನ ಗೊಂಡಿವೆ. ಚಲನಚಿತ್ರ, ಕಿರುತೆರೆ ನಟರಾಗಿದ್ದಾರೆ. ಇವರ ಸೇವೆಯನ್ನು ಗುರುತಿಸಿ ಗೌರವ ಡಾಕ್ಟರೇಟ್ ಪದವಿ ನೀಡಲಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು