ಭದ್ರಾವತಿ-ಡಾ.ಬಿ.ಆ‌ರ್. ಅಂಬೇಡ್ಕರ್‌ ರವರ ಪುತ್ಥಳಿಗೆ ನಾಳೆ ಹಾಲಿನ ಅಭಿಷೇಕ

ವಿಜಯ ಸಂಘರ್ಷ ನ್ಯೂಸ್ 
ಭದ್ರಾವತಿ: ನಗರದ ಅಂಡರ್‌ ಬ್ರಿಡ್ಜ್ ಬಳಿ, ಅಂಬೇಡ್ಕರ್ ವೃತ್ತದಲ್ಲಿ ನೂತನವಾಗಿ ಉದ್ಘಾಟನೆಗೊಂಡಿ ರುವ ಭಾರತ ರತ್ನ, ಸಂವಿಧಾನ ಶಿಲ್ಪಿ ಡಾ.ಬಿ.ಆ‌ರ್. ಅಂಬೇಡ್ಕರ್‌ ರವರ ಪುತ್ಥಳಿಗೆ ರಾಜ್ಯ ಚಾಣುಕ್ಯ ಸೇನೆ ವತಿಯಿಂದ ಫೆ.19 ರ ನಾಳೆ ಹಾಲಿನ ಅಭಿಷೇಕ ಮತ್ತು ಬೃಹತ್ ಮಾಲಾರ್ಪಣೆ ನಡೆಯಲಿದೆ.

 ಬೆಳಿಗ್ಗೆ 11 ಗಂಟೆಗೆ ನಡೆಯಲಿರುವ ಹಾಲಿನ ಅಭಿಷೇಕ ಮತ್ತು ಬೃಹತ್ ಮಾಲಾರ್ಪಣೆ ಕಾರ್ಯಕ್ರಮಕ್ಕೆ ಕ್ಷೇತ್ರದ ಸಮಸ್ತ ನಾಗರೀಕರು ಪಾಲ್ಗೊಳ್ಳುವ ಮೂಲಕ ಯಶಸ್ವಿಗೊಳಿಸು ವಂತೆ ಕರ್ನಾಟಕ ರಾಜ್ಯ ಚಾಣುಕ್ಯ ಸೇನೆ ರಾಜ್ಯಾಧ್ಯಕ್ಷ ನಾರಾಯಣ ಐಹೊಳೆ ಕೋರಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು