ಪ್ರತಿಭಾವಂತ ಮಕ್ಕಳಿಗೆ ಟ್ಯಾಲೆಂಟೆಡ್ ಪರೀಕ್ಷೆ ಶ್ರೀರಕ್ಷೆ: ಅಶೋಕ್

ವಿಜಯ ಸಂಘರ್ಷ ನ್ಯೂಸ್ 
ಕೆ.ಆರ್.ಪೇಟೆ:ಗ್ರಾಮೀಣ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಶ್ರೀ ಚಾಮುಂಡೇಶ್ವರಿ ಶಾಲೆಯಲ್ಲಿ ಉಚಿತವಾಗಿ ವ್ಯಾಸಂಗ ಮಾಡಲು ಒಂದು ಅದ್ಭುತ ಅವಕಾಶ ಕಲ್ಪಿಸಲಾಗುತ್ತಿದೆ ಎಂದು ಶಾಲಾ ಮುಖ್ಯೋಪಾಧ್ಯಾಯ ಅಶೋಕ್ ತಿಳಿಸಿದರು.

ತಾಲೂಕಿನ ದೊಡ್ಡನಕಟ್ಟೆ ಸಮೀಪದ ಶ್ರೀ ಚಾಮುಂಡೇಶ್ವರಿ ಪಬ್ಲಿಕ್ ಸ್ಕೂಲ್ ಸಹಯೋಗದೊಂದಿಗೆ ಟ್ಯಾಲೆಂಟ್ ಪರೀಕ್ಷೆ ಮಾಹಿತಿ ನೀಡಿ ಮಾತನಾಡಿದರು.

ಪ್ರತಿ ವರ್ಷವೂ ಯು.ಕೆ.ಜಿ. 2ನೇ, 4ನೇ ಮತ್ತು 6ನೇ ತರಗತಿಯಲ್ಲಿ ವ್ಯಾಸಂಗ ಮಾಡುವ ವಿದ್ಯಾರ್ಥಿಗಳಿಗೆ ಶ್ರೀ ಚಾಮುಂಡೇಶ್ವರಿ ಶಾಲಾ ಪ್ರತಿಭಾನ್ವೇಷಣಾ (ಟ್ಯಾಲೆಂಟೆಡ್) ಪರೀಕ್ಷೆ ಯನ್ನು ಏರ್ಪಡಿಸಲಾಗುವುದು. ಯು.ಕೆ.ಜಿ. 2ನೇ 4ನೇ & 6ನೇ ತರಗತಿಯಲ್ಲಿ ವ್ಯಾಸಂಗ ಮಾಡುವ ಯಾವುದೇ ಶಾಲೆಯ ವಿದ್ಯಾರ್ಥಿ ಗಳು ಇದಕ್ಕೆ ಅರ್ಹರಾಗಿರುತ್ತಾರೆ. ಈ ಯೋಜನೆಯ ಮೂಲಕ ಪ್ರತಿ ವರ್ಷ 1ನೇ ತರಗತಿಗೆ 10 ವಿದ್ಯಾರ್ಥಿಗಳು ಮತ್ತು 3ನೇ ತರಗತಿಗೆ 10 ವಿದ್ಯಾರ್ಥಿ ಗಳು ಹಾಗೂ 5ನೇ & 7ನೇ ತರಗತಿಗೆ 10 ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿಕೊಂಡು ರಾಜ್ಯ ಪಠ್ಯಕ್ರಮದಲ್ಲಿ (State Board) ಉಚಿತ ಗುಣಮಟ್ಟದ ಶಿಕ್ಷಣ ನೀಡಲಾಗುವುದು. ಇದಕ್ಕೆ ಆಗುವ ಖರ್ಚು, ವೆಚ್ಚಗಳನ್ನು ಶಾಲಾ ವತಿಯಿಂದ ಭರಿಸಲಾಗುವುದು.

 ಈಗಾಗಲೇ 20 ವಿದ್ಯಾರ್ಥಿಗಳು 2024-25ನೇ ಸಾಲಿನಲ್ಲಿ ಆಯ್ಕೆಯಾಗಿ ವಿದ್ಯಾರ್ಜನೆಯನ್ನು ಪಡೆಯುತ್ತಿದ್ದಾರೆ ಹಾಗಾಗಿ ಅರ್ಹ ಮತ್ತು ಆಸಕ್ತಿವುಳ್ಳ ಪ್ರತಿಭಾವಂತ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಭಾಗವಹಿಸಿ ತಮ್ಮ ಉಜ್ವಲ ಭವಿಷ್ಯ ರೂಪಿಸಿಕೊಳ್ಳಿ ಎಂದು ತಿಳಿಸಿದರು.

✍️ಸುದ್ದಿಯೊಂದಿಗೆ ಮನು ಮಾಕವಳ್ಳಿ ಕೆ ಆರ್ ಪೇಟೆ

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು