ಭದ್ರಾವತಿ-ರೌಡಿ ಶೀಟರ್ ಕಾಲಿಗೆ ಫೈರ್

ವಿಜಯ ಸಂಘರ್ಷ ನ್ಯೂಸ್ 
ಭದ್ರಾವತಿ: ಪ್ರಕರಣವೊಂದರಲ್ಲಿ ಬೇಕಾಗಿದ್ದ ಆರೋಪಿಯನ್ನು ಬಂಧಿಸಲು ತೆರಳಿದ ಪೊಲೀಸರ ಮೇಲೆಯೇ ಹಲ್ಲೆ ನಡೆಸಿ ಪರಾರಿ ಯಾಗಲೆತ್ನಿಸಿದ ರೌಡಿ ಶೀಟರ್ ಓರ್ವನ ಕಾಲಿಗೆ ಹೊಸಮನೆ ಠಾಣೆ ಪೊಲೀಸರು ಗುಂಡು ಹಾರಿಸಿ ಬಂಧಿಸಿದ ಘಟನೆ ಶುಕ್ರವಾರ ನಡೆದಿದೆ. 

ರೌಡಿ ಶೀಟರ್ ಗುಂಡ ಅಲಿಯಾಸ್ ರವಿ, ಪೊಲೀಸ್ ಸಿಬ್ಬಂದಿ ಆದರ್ಶ್ ಮೇಲೆ ದಾಳಿ ಮಾಡಿ ಪರಾರಿಯಾಗಲು ಯತ್ನಿಸಿದ್ದ.ಈ ವೇಳೆ ಪಿಎಸ್‌ಐ ಕೃಷ್ಣ, ಶರಣಾಗುವಂತೆ ಸೂಚಿಸಿದರು. 

ಕೇಳದೇ ಇದ್ದಾಗ ಪಿಎಸ್‌ಐ ಕೃಷ್ಣ, ರೌಡಿ ಶೀಟರ್ ಗುಂಡನ ಕಾಲಿಗೆ ಗುಂಡು ಹಾರಿಸಿದ್ದಾರೆ. ಹೊಸಮನೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.ಗುಂಡ ಅಲಿಯಾಸ್ ರವಿ ಮೇಲೆ 307 ಪ್ರಕರಣ ಸೇರಿ ಒಟ್ಟು ನಾಲ್ಕು ಪ್ರಕರಣಗಳು ಇವೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು