ವಿಜಯ ಸಂಘರ್ಷ ನ್ಯೂಸ್
ವಿಜಯಪುರ: ಇನ್ವೆಸ್ಟ್ ಕರ್ನಾಟಕ ವಿಶ್ವಬಂಡ ವಾಳ ಹೂಡಿಕೆದಾರರ ಸಮಾವೇಶಕ್ಕೆ ಹಿಂದೆಗಿoತಲೂ ಈ ಬಾರಿ ಹೆಚ್ಚು ಪ್ರಮಾಣ ದಲ್ಲಿ ವಿಶ್ವದ ಹಲವು ರಾಷ್ಟ್ರಗಳಿಂದ ಹಾಗೂ ದೇಶದಾದ್ಯಂತ ಉದ್ದಿಮೆದಾರರು ಪಾಲ್ಗೊಂಡಿ ರುವುದು ಕರ್ನಾಟಕ ರಾಜ್ಯ ಹೊಸ ಇತಿಹಾಸ ನಿರ್ಮಿಸಿದ್ದಾರೆ ಎಂದು ವಿಜಯಪುರ ಕಾಂಗ್ರೆಸ್ ಜಿಲ್ಲಾ ಉಪಾಧ್ಯಕ್ಷ ಚಾಂದಸಾಬ ಗಡಗವಾಲ್ ತಿಳಿಸಿದರು.
ನೀರಾವರಿ ಸಚಿವರಾಗಿದ್ದಾಗ ರಾಜ್ಯಾದ್ಯಂತ ಜಲಕ್ರಾಂತಿ ಮಾಡಿದ್ದರು. ಈಗ ವಿಶ್ವಬಂಡ ವಾಳ ಹೂಡಿಕೆದಾರರ ಸಮಾವೇಶ ಮಾಡಿ ಕೈಗಾರಿಕಾ ಕ್ರಾಂತಿ ಪುರುಷ ಎನಿಸಿ ಕೊಂಡಿ ದ್ದಾರೆ.ಹೊಸ ಹೊಸ ಅವಕಾಶಗಳು ಮೂಲಕ ಆವಿಷ್ಕಾರಗಳಿಗೆ ಇಲ್ಲಿ ಸಾಕಷ್ಟು ದಾರಿಗಳು ಇವೆ. ಎಂ.ಬಿ.ಪಾಟೀಲರು ನಮ್ಮವರು ಎಂಬ ಹೆಮ್ಮೆಯಿದೆ ಎಂದರು.
ನೀರಾವರಿ ಮಂತ್ರಿಗಳಾಗಿದ್ದಾಗಲೂ ನಮ್ಮ ಭಾಗಕ್ಕೆ ಅದ್ಭುತವಾದ ಕೆಲಸ ಮಾಡಿ, ನಮಗೆ ಅನ್ನದಾತರಾಗಿದ್ದಾರೆ. ಇದೀಗ ಇಡೀ ರಾಜ್ಯಕ್ಕೆ ವಿಶ್ವದ ಬಂಡವಾಳ ಹೂಡಿಕೆಯನ್ನು ಮಾಡಿ, ರಾಜ್ಯದ ಉದ್ಯೋಗದಾತ ರಾಗಲಿದ್ದಾರೆ. ವಿಜಯಪುರದಲ್ಲಿ ಮುಂದಿನ ದಿನಗಳಲ್ಲಿ ಆರಂಭವಾಗಲಿ ರುವ ಉದ್ದಿಮೆಗಳ ಹೊಸ ಇತಿಹಾಸ ನಿರ್ಮಾಣವಾಗಲೆಂದು ತಿಳಿಸಿದರು.
Tags
ವಿಜಯಪುರ ವರದಿ