ನಂಬಿದವರು ಕೈಕೊಟ್ಟರು ಮತದಾರರು ಕೈ ಹಿಡಿದಿದ್ದಾರೆ: ಡಾಲು ರವಿ

ವಿಜಯ ಸಂಘರ್ಷ ನ್ಯೂಸ್ 
ಕೆ.ಆರ್.ಪೇಟೆ: ನಂಬಿದವರು ಕೈಕೊಟ್ಟರು ಮತದಾರರು ಕೈ ಹಿಡಿದಿ ದ್ದಾರೆ. ನಮ್ಮ ಅಧಿಕಾರದ ಅವಧಿಯಲ್ಲಿ ನಾನು ಹಾಗೂ ಮನ್ಮುಲ್ ನೂತನ ನಿರ್ದೇಶಕ ಎಂ.ಬಿ.ಹರೀಶ್ ಪ್ರಾಮಾಣಿ ಕವಾಗಿ ಸದಾ ಸಮನ್ವಯತೆಯಿಂದ ಹಾಲು ಉತ್ಪಾದಕರ ಅಭಿವೃದ್ಧಿಗೆ ಶ್ರಮವಿಸುತ್ತೇವೆ ಎಂದು ಮನ್ಮುಲ್ ನೂತನ ನಿರ್ದೇಶಕ ಡಾಲು ರವಿ ಭರವಸೆ ನೀಡಿದ್ದರು.

ಮಂಡ್ಯ ಜಿಲ್ಲಾ ಹಾಲು ಒಕ್ಕೂಟ ಚುನಾವಣೆಯಲ್ಲಿ ಅಭೂತಪೂರ್ವ ಗೆಲುವು ಸಾಧಿಸಿದ ಮನ್ಮುಲ್ ನೂತನ ನಿರ್ದೇಶಕ ಡಾಲು ರವಿ, ಎಂ.ಬಿ ಹರೀಶ್ ಅವರನ್ನು ಅಕ್ಕಿಹೆಬ್ಬಾಳು ಹಾಗೂ ಕಸಬಾ ಹೋಬಳಿಯ ಹಾಲು ಉತ್ಪಾದಕರ ಸಹಕಾರ ಸಂಘಗಳ ಕಾರ್ಯದರ್ಶಿಗಳು,ಉತ್ಪಾದಕರು ಅಭಿಮಾನಿ ಗಳು,ಹಿತೈಷಿ ಬಳಗ ಅಕ್ಕಿಹೆಬ್ಬಾಳು ಗ್ರಾಮದ ಶ್ರೀ ಲಕ್ಷ್ಮೀ ನಾರಾಯಣ ಸ್ವಾಮಿ ಸಮುದಾಯ ಭವನದಲ್ಲಿ ಅಭಿನಂದನಾ ಸಮಾರಂಭ ಉದ್ಘಾಟಿಸಿ ಅಭಿನಂದನೆ ಸ್ವೀಕರಿಸಿ ಮಾತನಾಡಿದರು.

ಮಂಡ್ಯ ಜಿಲ್ಲಾ ಹಾಲು ಒಕ್ಕೂಟದಲ್ಲಿ ನಾನು ಮೂರು ಬಾರಿ ನಿರ್ದೇಶಕರಾಗಿ ಕಾಯ ವಾಚಾ ಮನಸ್ಸಿನಿಂದ ಪ್ರಾಮಾಣಿಕ ಸೇವೆ ಸಲ್ಲಿಸಿದ್ದೇನೆ. ಸಹಕಾರ ಸಂಘಗಳು ಗ್ರಾಮೀಣ ಭಾಗದ ರೈತರು ಮತ್ತು ಹಾಲು ಉತ್ಪಾದಕರ ಆದಾಯದ ಮೂಲ ಬೇರುಗಳಾಗಿವೆ ಹಾಗಾಗಿ ಹಾಲು ಉತ್ಪಾದಕರ ಸಹಕಾರ ಸಂಘಗಳಿಗೆ ಗುಣಮಟ್ಟದ ಹಾಲು ಪೂರೈಕೆ ಮಾಡುವ ಮೂಲಕ ಮಂಡ್ಯ ಜಿಲ್ಲಾ ಹಾಲು ಒಕ್ಕೂಟದ ಅಭಿವೃದ್ಧಿಗೆ ಸಹಕಾರ ನೀಡ ಬೇಕು.ಕಳೆದ 10ವರ್ಷ ಗಳಿಂದ ಒಕ್ಕೂಟದ ನಿರ್ದೇಶಕನಾಗಿ ತಾಲ್ಲೂಕಿನ ಎಲ್ಲಾ 253 ಸಹಕಾರ ಸಂಘಗಳ ಅಭಿವೃದ್ಧಿಗೆ ಪ್ರಾಮಾಣಿಕ ವಾಗಿ ಕೆಲಸ ಮಾಡಿದ್ದೇನೆ. ಈಗ ನನ್ನೊಂದಿಗೆ ಎರಡು ಭಾರಿ ನಿರ್ದೇಶಕ ರಾಗಿ 7ವರ್ಷಗಳ ಕಾಲ ಅಧ್ಯಕ್ಷರಾಗಿ ಮನ್ಮುಲ್ ಅಭಿವೃದ್ಧಿಗೆ ಪ್ರಾಮಾಣಿಕ ವಾಗಿ ಕೆಲಸ ಮಾಡಿರುವ ಎಂ.ಬಿ. ಹರೀಶ್ ಅವರನ್ನು ನಮ್ಮ ಜೊತೆಗೆ ಸುಮಾರು 127ಮತಗಳನ್ನು ನೀಡಿ ಗೆಲ್ಲಿಸಿರುವ ತಾಲ್ಲೂಕಿನ ಎಲ್ಲಾ ಡೇರಿ ಪ್ರತಿನಿಧಿ ಗಳಿಗೆ ಹಾಗೂ ಎಲ್ಲಾ ನಿರ್ದೇಶಕರುಗಳಿಗೆ, ಗ್ರಾಮಗಳ ಎಲ್ಲಾ ಮುಖಂಡರುಗಳಿಗೆ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ. 

ಕಳೆದ ವಿಧಾನಸಭಾ ಚುನಾವಣೆಯಲ್ಲಿ ನಾನು ಮತ್ತು ಎಂ.ಬಿ.ಹರೀಶ್ ಜೆಡಿಎಸ್ ಪಕ್ಷದ ಅಭ್ಯರ್ಥಿಯಾದ ಹೆಚ್.ಟಿ.ಮಂಜು ಅವರ ಗೆಲುವಿಗಾಗಿ ಮುಂಬೈ, ಬೆಂಗಳೂರು ಕಡೆಗಳಲ್ಲಿ ನಮ್ಮ ಬೆಂಬಲಿಗರ ಸಭೆ ಮಾಡಿ ಮತದಾರರನ್ನು ಕಾಲು ಹಿಡಿದು ಮತ ಹಾಕಿಸಿದ್ದೇವೆ. ಜೊತೆಗೆ ತಾಲ್ಲೂಕಿನಾ ಧ್ಯಂತ ಪ್ರಚಾರ ನಡೆಸಿ ಪಕ್ಷದ ಅಭ್ಯರ್ಥಿ ಯನ್ನು ಗೆಲ್ಲಿಸಲು ಪ್ರಾಮಾಣಿಕವಾದ ಪ್ರಯತ್ನ ಮಾಡಿದ್ದೇವೆ. ಇದಕ್ಕೆ ಕಾರಣ ವಾಗಿದ್ದ ನಮ್ಮನ್ನು ಮನ್ಮುಲ್ ಚುನಾವಣೆಯಲ್ಲಿ ಗೆಲ್ಲಿಸುತ್ತೇನೆ ಎಂಬ ಮಾತು ನೀಡಿ ಮಾತಿಗೆ ತಪ್ಪಿ ಶಾಸಕರು ವಚನ ಭ್ರಷ್ಠರಾಗಿದ್ದಾರೆ. ನಮ್ಮಿಬ್ಬರನ್ನು ಮನ್‌ಮುಲ್ ಚುನಾವಣೆಯ ಜೆಡಿಎಸ್ ಅಭ್ಯರ್ಥಿಗಳೆಂದು ಸುಮಾರು 25ಸಾವಿರ ಮಂದಿ ಕಾರ್ಯ ಕರ್ತರ ಮುಂದೆ ಮಾಜಿ ಸಿ.ಎಂ. ಕುಮಾರಣ್ಣ ಘೋಷಣೆ ಮಾಡಿದ್ದರು. ಆದರೆ ಶಾಸಕ ಮಂಜು ನಮ್ಮನ್ನು ಕಡೆಗಣಿಸಿದರು. ಅಭ್ಯರ್ಥಿಗಳನ್ನು ಘೋಷಣೆ ಮಾಡಿಕೊಂಡು ಚುನಾವಣೆ ನಡೆಸಿದರು. ನಮ್ಮನ್ನು ಜೆಡಿಎಸ್ ಪಕ್ಷದವರೇ ಅಲ್ಲ, ಪ್ರಾಥಮಿಕ ಸದಸ್ಯತ್ವವನ್ನೇ ಪಡೆದಿಲ್ಲ ಎಂದು ಘೋಷಣೆ ಮಾಡಿದರು. ಇದರಿಂದಾಗಿ ನಾವು ಜೆಡಿಎಸ್, ಕಾಂಗ್ರೆಸ್, ಬಿಜೆಪಿ ಪಕ್ಷದ ಮುಖಂಡರ ಸಹಕಾರ ಪಡೆದುಕೊಳ್ಳಬೇಕಾ ಯಿತು. ಸುಮಾರು 4ತಿಂಗಳ ಕಾಲ ತಾಲ್ಲೂಕಿ ನಾದ್ಯಂತ ಪ್ರಚಾರ ನಡೆಸಿ, ಎಲ್ಲರ ಸಹಕಾರ ಪಡೆದು ಗೆಲುವು ಸಾಧಿಸಿದ್ದೇವೆ. 

ಗೆದ್ದ ನಂತರ ವಿಜಯೋತ್ಸವ ಆಚರಣೆ ವೇಳೆ ಚುನಾವಣೆ ಸಂದರ್ಭದಲ್ಲಿ ನಮಗಾದ ನೋವನ್ನು ಕಾರ್ಯಕರ್ತರ ಮುಂದೆ ತೋಡಿಕೊಳ್ಳುತ್ತಿದ್ದೇವೆ ಆದರೆ ಇದನ್ನೇ ಟೀಕೆ ಮಾಡುತ್ತಿದ್ದಾರೆ ಎಂದು ಶಾಸಕರು ತಮ್ಮ ಬೆಂಬಲಿಗರ ಮೂಲಕ ಪ್ರತಿ ಟೀಕೆ ಮಾಡಿಸುತ್ತಿದ್ದಾರೆ. ಬಹಿರಂಗ ಚರ್ಚೆಗೆ ಬರಲಿ ನಮಗೆ ಅವರು ಮೋಸ ಮಾಡಿದ್ದಾರೋ ಅಥವಾ ನಾವು ಅವರಿಗೆ ಮೋಸ ಮಾಡಿದೇವೋ ಎಂಬುದನ್ನು ಮಾಧ್ಯಮಗಳ ಸಮ್ಮುಖದಲ್ಲಿ ಚರ್ಚಿಸೋಣ ಎಂದು ಡಾಲು ರವಿ ಸವಾಲು ಹಾಕಿದರು. 

ಬಳಿಕ ಮನ್ಮುಲ್ ಮಾಜಿ ಅಧ್ಯಕ್ಷ ಹಾಗೂ ಹಾಲಿ ನಿರ್ದೇಶಕ ಎಂ.ಬಿ. ಹರೀಶ್ ಮಾತನಾಡಿ ವಿಧಾನಸಭಾ ಚುನಾವಣೆಯಲ್ಲಿ ಹರಳಹಳ್ಳಿ ತಿಮ್ಮೇಗೌಡರ ಸಾಮಾನ್ಯ ರೈತನ ಮಗ ಮಂಜು ಅವರನ್ನು ಶಾಸಕನ್ನಾಗಿ ಮಾಡಿ ತಾಲ್ಲೂಕಿನ ಅಭಿವೃದ್ಧಿಗೆ ಸಹಕಾರ ನೀಡಿ ಎಂದು ಪಂಚರತ್ನ ರಥ ಯಾತ್ರೆ ಯಲ್ಲಿ ಹಗಲು ಇರುಳು ಶ್ರಮವಹಿಸಿ ದ್ದೇನೆ. ಆಗ ನನ್ನ ಮಾತು ಚನ್ನಾಗಿದ್ದವು ಈಗ ಅದೇ ತಿಮ್ಮೇಗೌಡರ ಮಗ ಶಾಸಕ ಮಂಜು ನಮ್ಮನ್ನು ಕಡೆಗಣಿಸಿ ದರು. ನಮಗೆ ಮನ್‌ಮುಲ್ ಚುನಾವಣೆಯಲ್ಲಿ ಗೆಲ್ಲಿಸುತ್ತೇನೆ ಎಂದು ಭರವಸೆ ನೀಡಿ ಮಾತುಗೆ ತಪ್ಪಿದ್ದಾರೆ ಎಂದು ಶಾಸಕ ಎಚ್.ಟಿ ಮಂಜು ಅವರ ವಿರುದ್ಧ ಗುಡುಗಿದರು.

ಅಕ್ಕಿಹೆಬ್ಬಾಳು ಗ್ರಾಮದಿಂದ ಶ್ರೀ ಲಕ್ಷ್ಮಿನಾರಾಯಣ ದೇವಾಲಯದ ಹೊರಗೆ ಅದ್ದೂರಿಯಾಗಿ ಡೊಳ್ಳು ಕುಣಿತ ನೂರಾರು ಬೈಕ್ ರ್ಯಾಲಿ, ಎತ್ತಿನ ಗಾಡಿ ಮೂಲಕ ಸಂಭ್ರಮದಿಂದ ಕರೆತರಲಾಯಿತು 

ಈ ಕಾರ್ಯಕ್ರಮದಲ್ಲಿ ಮನ್ಮುಲ್ ಮಾಜಿ ನಿರ್ದೇಶಕ ಅಂಬರೀಶ್, ಕೆ.ಆರ್ ಪೇಟೆ ಉಪಕಚೇರಿ ವ್ಯವಸ್ಥಾಪಕ ಪ್ರಸಾದ್, ಮುಖಂಡ ಹಾದನೂರು ಪರಮೇಶ್,ಡಾ. ಉದಯ್,ಡಾ.ಪ್ರಜ್ವಲ್,ಡಾ.ಇಜಾಜ್ ಪಟೇಲ್,ಸಂದ್ಯಾ,ಭಾವನ,ಅಕ್ಕಿಹೆಬ್ಬಾಳು ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಯತೀರಾಜು,ಕೃಷಿ ಪತ್ತಿನ ಸಹಕಾರ ಸಂಘದ ಜಯರಾಮ್ ನಾಯ್ಕ,ಎ. ಆರ್ ಶ್ರೀನಿವಾಸ್,ಜೈನಹಳ್ಳಿ ಗೌಡಪ್ಪ, ಪಟೇಲ್ ರಾಜಪ್ಪ, ಕುಪ್ಪಹಳ್ಳಿ ಲವಾಕುಮಾರ್, ಕೈಗೊನಹಳ್ಳಿ ಜಯರಾಮ್,ಸಾರಂಗಿ ಅಂಬರೀಷ್, ಹರಿಹರಪುರ ಶ್ರೀಧರ್,ಮಾರ್ಗ ವಿಸ್ತರಣಾಧಿಕಾರಿಗಳಾದ ನಾಗಪ್ಪ ಅಲ್ಲಿಬಾದಿ, ಗುರುರಾಜ್ ಸುರ್ಗಿಹಳ್ಳಿ, ಮಧು ರಾಘವೇಂದ್ರ,ಶೀಳನೆರೆ ಅಜಯ್, ನಾಟನ ಹಳ್ಳಿ ಪವನ್ ಸೇರಿದಂತೆ ಉಪಸ್ಥಿತರಿದ್ದರು.

*✍️ಸುದ್ದಿಯೊಂದಿಗೆ ಮನು ಮಾಕವಳ್ಳಿ ಕೆ ಆರ್ ಪೇಟೆ*

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು