ವಿಜಯ ಸಂಘರ್ಷ ನ್ಯೂಸ್
ಭದ್ರಾವತಿ: ಸಂಬಂಧಿಕರ ಮದುವೆ ಕಾರ್ಯಕ್ಕೆ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಪ್ರಯಾಣಿಸಿ ನಗರಕ್ಕೆ ಆಗಮಿಸಿದ್ದ ಮಹಿಳೆಯೊಬ್ಬರ ವ್ಯಾನಿಟಿ ಬ್ಯಾಗ್ ನಲ್ಲಿದ್ದ ಲಕ್ಷಾಂತರ ರೂ . ಮೌಲ್ಯದ ಚಿನ್ನಾಭರಣ ಕಳುವಾಗಿರುವ ಘಟನೆ ನಡೆದಿದೆ.
ಹುಣಸೂರು ನಿವಾಸಿ ಜಯಾಬಾಯಿ (50) ಎಂಬುವರು ಫೆ.9ರಂದು ಹುಣಸೂರು ಗ್ರಾಮದಿಂದ ಪ್ರಯಾಣ ಬೆಳೆಸಿ, ಸಂಜೆ 7 ಗಂಟೆಗೆ ಭದ್ರಾವತಿ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಇಳಿದಿದ್ದಾರೆ.
ನಿಲ್ದಾಣದಲ್ಲಿ ವ್ಯಾನಿಟಿ ಬ್ಯಾಗ್ ನೋಡಿದಾಗ ಬ್ಯಾಗ್ ಜಿಪ್ ತೆರೆದಿದ್ದು, ಒಂದು ಜೊತೆ ಜುಮುಕಿ ಮತ್ತು ಸಾದಾ ಡಿಸೈನ್‌ನ ಮೆರೂನ್ ಬಣ್ಣದ ಚಿಕ್ಕ ಹರಳಿರುವ ನೆಕ್ಸಸ್ ಹಾಗು ಒಂದು ಕಪ್ಪು ಬಣ್ಣದ ನೆಕ್ಸಸ್ ಒಟ್ಟು 30 ಗ್ರಾಂ ತೂಕದ 1.85 ಲಕ್ಷ ರು. ಮೌಲ್ಯದ ಬಂಗಾರದ ಆಭರಣಗಳು ಕಳುವಾಗಿರುವುದು ಕಂಡು ಬಂದಿದೆ.
ಈ ಹಿನ್ನಲೆಯಲ್ಲಿ ನ್ಯೂಟೌನ್ ಪೊಲೀಸ್ ಠಾಣೆಯಲ್ಲಿ ಫೆ.10ರಂದು ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.