ವಿಜಯ ಸಂಘರ್ಷ ನ್ಯೂಸ್
ಶಿವಮೊಗ್ಗ: ವಿವಿಧ ಸಂಘ ಸಂಸ್ಥೆಗಳಿಗೆ ಆಯ್ಕೆಯಾಗಿರುವ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಪದಾಧಿಕಾ ರಿಗಳನ್ನು ಸಂಘದ ವತಿಯಿಂದ ಸನ್ಮಾನಿಸಲಾಯಿತು.
ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ನಿರ್ದೇಶಕ , ಸ್ಕಿಲ್ ಡೆವಲಪ್‌ಮೆಂಟ್ ಸಮಿತಿ ಚೇರ್ಮನ್ ವಸಂತ್ ಹೋಬಳಿದಾರ್ ಅವರು ರೋಟರಿ ಜಿಲ್ಲಾ ಗವರ್ನರ್ ಆಗಿ ನಿಯೋಜಿತ ರಾಗಿದ್ದಾರೆ. ಸಂಘದ ಉಪಾಧ್ಯಕ್ಷ ಜಿ.ವಿಜಯಕುಮಾರ್ ಅವರು ಅಖಿಲ ಕರ್ನಾಟಕ ಫೈನಾನ್ಸಿಯರ್ ಅಸೋಸಿ ಯೇಷನ್,ಸಂಘಟನಾ ಕಾರ್ಯದರ್ಶಿ ಯಾಗಿ ಆಯ್ಕೆಯಾಗಿದ್ದಾರೆ.
ಸಂಘದ ನಿರ್ದೇಶಕ, ಪ್ರವಾಸೋದ್ಯಮ ಚೇರ್ಮನ್ ಪಿ.ರುದ್ರೇಶ್ ಅವರು ಪದವೀಧರ ಸಹಕಾರ ಸಂಘದ ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ. ಸಂಘದ ವಿಶೇಷ ಆಹ್ವಾನಿತೆ ಸಹನಾ ಸುಭಾಷ್ ಅವರು ಮ್ಯಾಮ್ಕೋಸ್ ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ. ಸಂಘದ ಎಲ್ಲ ಪದಾಧಿಕಾರಿಗಳಿಗೂ ಗೌರವಿಸಲಾಯಿತು.
ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಅಧ್ಯಕ್ಷ ಬಿ.ಗೋಪಿನಾಥ್, ಮಾಜಿ ಅಧ್ಯಕ್ಷ ಅಶ್ವತ್ಥ ನಾರಾಯಣ ಶೆಟ್ಟಿ, ಕಾರ್ಯದರ್ಶಿ ಎ.ಎಂ.ಸುರೇಶ್, ಖಜಾಂಚಿ ಆರ್. ಮನೋಹರ, ಜಂಟಿ ಕಾರ್ಯದರ್ಶಿ ಕೆ.ಎಸ್.ಸುಕುಮಾರ್, ನಿರ್ದೇಶಕರಾದ ಎಸ್.ಎಸ್.ಉದಯ ಕುಮಾರ್, ಪ್ರದೀಪ್ ವಿ ಯಲಿ, ಬಿ.ಮಂಜೇಗೌಡ, ಗಣೇಶ್ ಎಂ.ಅಂಗಡಿ, ವಿನೋದ್ ಕುಮಾರ್ , ಶರತ್, ಕೆ.ಎನ್.ರಾಜಶೇಖರ, ಕೆ.ಬಿ.ಶಿವಕುಮಾರ್, ಎಸ್.ಪಿ.ಶಂಕರ್, ವಿಶೇಷ ಆಹ್ವಾನಿತರಾದ ವಿನೋದ ಕುಮಾರ್ ಕೆ.ಜಿ. ರವಿಪ್ರಕಾಶ್ ಜನ್ನಿ, ಕಮಲಾಕ್ಷಪ್ಪ ಎಚ್.ಎಚ್., ಚನ್ನವೀರಪ್ಪ ವಿ ಉಪಸ್ಥಿತರಿದ್ದರು.
Tags
ಶಿವಮೊಗ್ಗ ವರದಿ