ವಿಜಯ ಸಂಘರ್ಷ ನ್ಯೂಸ್
ಭದ್ರಾವತಿ: ಭೂ ವಿಜ್ಞಾನ ಇಲಾಖೆಯ ದಕ್ಷ ಮಹಿಳಾ ಅಧಿಕಾರಿ ವಿರುದ್ಧವಾಗಿ ಶಾಸಕರ ಸುಪುತ್ರ ನಿಂದಿಸಿರುವುದು ಎಲ್ಲರೂ ಗೊತ್ತಿದೆ. ಈ ಘಟನೆಯಿಂದ ನಾಗರಿಕ ಸಮಾಜ ತಲೆ ತಗ್ಗಿಸುವಂತಾ ಗಿದೆ ಎಂದು ಜೆಡಿಎಸ್ ನ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರ ಸ್ವಾಮಿ ಅಬ್ಬರಿಸಿದರು.
ಶುಕ್ರವಾರ ಜೆಡಿಎಸ್ ವತಿಯಿಂದ ಹಮ್ಮಿ ಕೊಳ್ಳಲಾಗಿದ್ದ ಶಾಸಕರ ರಾಜೀನಾಮೆಗೆ ಹಾಗೂ ಶಾಸಕರ ಪುತ್ರನನ್ನ ಬಂಧಿಸುವಂತೆ ಆಗ್ರಹಿಸಿ ನಡೆದ ಪ್ರತಿಭಟನೆಯಲ್ಲಿ ಮಾತನಾಡಿ, ಶಾಸಕರಿಗೆ ಮತ ಹಾಕಿ ಅವರ ಕುಟುಂಬಕ್ಕೆ ತಲೆತಗ್ಗಿಸುವ ಪರಿಸ್ಥಿತಿ ಭದ್ರಾವತಿ ನಾಗರೀಕರಿಗೆ ಇದೆ. ಅವರ ಸುಪತ್ರರ ಬಗ್ಗೆ ಕೇಳಿದ್ದೆ. ಆದರೆ ಈಚೆಗೆ ಭೂ ವಿಜ್ಞಾನ ಇಲಾಖಾಧಿಕಾರಿಗಳ ಘಟನೆಯಿಂದಾಗಿ ಮಾಧ್ಯಮಗಳ ಮೂಲಕ ಅವರ ಪದ ಬಳಕೆ ಕೇಳಿದ್ದೇನೆ ಎಂದರು.
ಹಲವಾರು ಘಟನೆ ನಡೆದಿದೆ. ಅವರ ನಿರಂಕುಶಕ್ಕೆ ಲಗಾಮು ಹಾಕಬೇಕು ಎಂದಾಗ ಅಧಿಕಾರವನ್ನ ಬಳಸಿ ಮುಚ್ಚಿಹಾಕಲು ಯತ್ನ ನಡೆದಿದೆ. ವಿಧಾನ ಪರಿಷತ್ ನಲ್ಲಿ ಪ್ರಭಾವಿ ಸಚಿವೆಯೊಬ್ಬರಿಗೆ ಅವಾಚ್ಯ ಶಬ್ದ ಬಳಕೆ ಮಾಡಲಾಗಿದೆ ಎಂದು ಎಂಎಲ್‌ಸಿ ಸಿ.ಟಿ. ರವಿಯವರನ್ನು ಬಂಧಿಸಿ ಠಾಣೆಯಿಂದ ಠಾಣೆಯಿಂದ ಶಿಫ್ಟ್ ಮಾಡಲಾಗುತ್ತಿತ್ತು. ಅವರ ಆಡಿಯೋ ವಿಡಿಯೋವನ್ನ ಎಫ್‌ಎಸ್‌ಎಲ್‌ಗೆ ಕಳುಹಿಸಲಾಗಿತ್ತು. ಅಲ್ಲಿದ್ದ ಧಮ್ಮು ತಾಕತ್ತು ಭದ್ರಾವತಿ ಶಾಸಕರ ಪುತ್ರರ ವಿರುದ್ಧ ಯಾಕಿಲ್ಲ. ಅವರ ಆಡಿಯೋ ಮತ್ತು ವಿಡಿಯೋ ವನ್ನ ಎಫ್ಎಸ್ ಎಲ್ ಗೆ ಕೊಟ್ಟಿಲ್ಲ. ರಾಮನಗರದಲ್ಲಿ ನಿಂತು ಅಬ್ಬರಿಸುವ ಡಿಸಿಎಂ ಇಲ್ಲಿನ ಶಾಸಕನ ಪುತ್ರನ ವಿರುದ್ಧ ಯಾಕೆ ಮಾಡುತ್ತಿಲ್ಲ ಎಂದು ಸವಾಲು ಹಾಕಿದ ನಿಖಿಲ್, ಭದ್ರಾವತಿ ಯನ್ನ ಹರಾಜು ಹಾಕಲಾಗುತ್ತಿದೆ. ಮುಂದಿನ ಚುನಾವಣೆಯಲ್ಲಿ ಜನ ನಿಮಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಆಗ್ರಹಿಸಿದರು.
ವಿಐಎಸ್ ಎಲ್ ಕಾರ್ಖಾನೆಗೆ ಕುಮಾರ ಸ್ವಾಮಿ ಶ್ರಮ: ವೈಜಾಕ್ ನ ಸ್ಟೀಲ್ ಪ್ಲಾಂಟ್‌ನ್ನು
ಆರು ತಿಂಗಳಲ್ಲಿ ಕೇಂದ್ರ ಸಚಿವ ಕುಮಾರ ಸ್ವಾಮಿ 11ಸಾವಿರ ಕೋಟಿ ಬಿಡುಗಡೆ ಮಾಡಿಸಿ ಪುನಶ್ಚತನಗೊಳಿಸಿ ದ್ದಾರೆ. ಇದರಿಂದ 26 ಕುಟುಂಬ ಬದುಕುವಂತೆ ಮಾಡಲಾಗಿದೆ. ಇದನ್ನ ನಿರೀಕ್ಷಿಸಿರಲಿಲ್ಲ. ಅದರಂತೆ ವಿಐಎಸ್ ಎಲ್ ಕಾರ್ಖಾನೆ ಪುನಶ್ಚತನಕ್ಕೆ 15 ಸಾವಿರ ಕೋಟಿ ಹಣ ಬೇಕಿದೆ. ಸೇಲಂ ಮತ್ತು ವೈಜಾಕ್ ನ ಪ್ಲಾಂಟ್ ಪುನಶ್ಚತನಗೊಳಿಸಿದಂತೆ
ಎಚ್.ಡಿ.ಕುಮಾರಸ್ವಾಮಿ ವಿಐಎಸ್ ಎಲ್ ಕಾರ್ಖಾನೆಗಾಗಿ ಶ್ರಮಿಸುತ್ತಿದ್ದಾರೆ ಎಂದು ಭರವಸೆ ನೀಡಿದರು. ಪ್ರತಿಭಟನೆ ಇಲ್ಲಿಗೆ ಮುಕ್ತಾಯ
ವಾಗೊಲ್ಲ ಇಲ್ಲಿಂದ ಆರಂಭ ವಾಗಲಿದೆ. ನಾಗರಿಕರು ಜಾಗೃತಿ ಯಾಗಬೇಕು ಎಂದರು.
ರಾಜ್ಯ ಪ್ರಧಾನಕಾರ್ಯದರ್ಶಿ ಶಾರದಾ ಅಪ್ಪಾಜಿ ಗೌಡ ಮಾತನಾಡಿ, ಕ್ಷೇತ್ರದ ಅಭಿವೃದ್ಧಿ ಇಲ್ಲ. ಭದ್ರಾವತಿಯಲ್ಲಿ ಪ್ರತಿ ಎರಡು ಅಂಗಡಿಗೆ ಒಂದು ಅಂಗಡಿ ಯಂತೆ ಓಸಿ ಬರೆಯುತ್ತಾರೆ. ಅದಕ್ಕೆ ಶಾಸಕರ ಬೆಂಬಲಿಗರಿದ್ದಾರೆ. ಅಧಿಕಾರಿ ಗಳು ಕಣ್ಣುಮುಚ್ಚಿ ಕುಳಿತ್ತಿದ್ದಾರೆ ಎಂದು ಕಿಡಿ ಕಾರಿದರು.
ಶಿವಮೊಗ್ಗ ಗ್ರಾಮಾಂತರ ಶಾಸಕಿ ಶಾರದಾ ಪೂರ್ಯಾನಾಯ್ಕ, ಶಿವಮೊಗ್ಗ ಮಾಜಿ ಶಾಸಕ ಪ್ರಸನ್ನ ಕುಮಾರ್, ಬಿಜೆಪಿ ಮಂಡಲ ಅಧ್ಯಕ್ಷ ಧರ್ಮಪ್ರಸಾದ್, ಜೆಡಿಎಸ್ ಪಕ್ಷದ ಜಿಲ್ಲಾಧ್ಯಕ್ಷರು, ಮಹಿಳಾ ಘಟಕ, ಯುವ ಘಟಕದ ಜಿಲ್ಲಾಧ್ಯಕ್ಷ ಸೇರಿದಂತೆ ಜಿಲ್ಲಾ ಹಾಗೂ ತಾಲೂಕು ಮುಖಂಡರು, ನೂರಾರು ಸಂಖ್ಯೆಯಲ್ಲಿ ಕಾರ್ಯಕರ್ತರು ಭಾಗವಹಿಸಿ ತಹಸೀಲ್ದಾರ್ ರವರ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ರವರಿಗೆ ಮನವಿ ಸಲ್ಲಿಸಿದರು.
ಪ್ರತಿಭಟನೆಗೂ ಮುನ್ನ ಮಾಧವಾಚಾರ್ ವೃತ್ತದಿಂದ ತಾಲೂಕು ಕಚೇರಿ ವರೆಗೂ ಮೆರವಣಿಗೆ ಹಮ್ಮಿಕೊಳ್ಳಲಾಗಿತ್ತು.