ಭದ್ರಾವತಿ-ನಗರಸಭೆ: ಅಧ್ಯಕ್ಷರಾಗಿ ಗೀತಾ ರಾಜ್ ಕುಮಾರ್ ಅವಿರೋಧ ಆಯ್ಕೆ

ವಿಜಯ ಸಂಘರ್ಷ ನ್ಯೂಸ್ 
ಭದ್ರಾವತಿ : ನಗರಸಭೆ ಅಧ್ಯಕ್ಷೆಯಾಗಿ ಗೀತಾ ರಾಜಕುಮಾರ್‌ ಶನಿವಾರ ನಗರಸಭೆ ಸಭಾಂಗಣದಲ್ಲಿ ನಿಗದಿ ಯಾಗಿದ್ದ ಚುನಾವಣೆ ಯಲ್ಲಿ ಎರಡನೇ ಬಾರಿಗೆ ಅವಿರೋಧವಾಗಿ ಆಯ್ಕೆ ಯಾಗಿದ್ದಾರೆ.

ಭದ್ರಾವತಿಯ ಅಭಿವೃದ್ಧಿಗೆ ಪೂರಕ ವಾದ ಕೆಲಸ ಮಾಡಲಿದ್ದೇವೆ. ಶಾಸಕರ ಸಲಹೆ ಮತ್ತು ಅವರೊಂದಿಗೆ ಚರ್ಚೆ ನಡೆಸಿ ಭದ್ರಾವತಿಯನ್ನು ಸುಂದರ ನಗರವಾಗಿ ರೂಪಿಸುವ ಕನಸು ಇದೆ. ಅಧಿಕಾರಿಗಳು, ಜನರ ಸಹಕಾರದಲ್ಲಿ ಕೆಲಸ ಮಾಡಲಿದ್ದೇನೆ.

ಅವಿರೋಧವಾಗಿ ಆಯ್ಕೆ:-

ನೂತನ ಅಧ್ಯಕ್ಷರ ಆಯ್ಕೆಗೆ ಶನಿವಾರ ಚುನಾವಣೆ ನಿಗದಿಯಾಗಿತ್ತು. ನಾಮಪತ್ರ ಸಲ್ಲಿಸಲು ಮಧ್ಯಾಹ್ನ 1 ಗಂಟೆಯಿಂದ 1.15ರವರೆಗೆ ಕಾಲವ ಕಾಶವಿತ್ತು. ನಾಮಪತ್ರ ಹಿಂಪಡೆಯಲು 1.15ರಿಂದ 1.30ರವರೆಗೆ ಸಮಯ ನಿಗದಿಯಾಗಿತ್ತು. ಗೀತಾ ರಾಜ ಕುಮಾರ್‌ ಅವರ ಹೊರತು ಮತ್ಯಾವ ಸದಸ್ಯರೂ ನಾಮಪತ್ರ ಸಲ್ಲಿಸಲಿಲ್ಲ. ಹಾಗಾಗಿ ಗೀತಾ ರಾಜಕುಮಾರ್‌ ಅವರನ್ನು ನಗರಸಭೆಯ ನೂತನ ಅಧ್ಯಕ್ಷರಾಗಿ ಘೋಷಿಸಲಾಯಿತು. ಉಪ ವಿಭಾಗಾಧಿಕಾರಿ ಸತ್ಯ ನಾರಾಯಣ ಚುನಾವಣಾ ಅಧಿಕಾರಿ ಯಾಗಿ ಕಾರ್ಯನಿರ್ವಹಿಸಿದರು.

ನಗರಸಭೆಯಲ್ಲಿ ಒಟ್ಟು 35 ಸದಸ್ಯ ರಿದ್ದಾರೆ. ಆದರೆ ಚುನಾವಣೆ ಸಂದರ್ಭ ಕಾಂಗ್ರೆಸ್‌ನ 19 ಸದಸ್ಯರು, ಜೆಡಿಎಸ್‌ನ ಐವರು ಸದಸ್ಯರು, ಬಿಜೆಪಿಯ ಮೂವರು ಸದಸ್ಯರು ಸೇರಿ ಒಟ್ಟು 27 ಸದಸ್ಯರು ಮತ್ತು ವಿಧಾನ ಪರಿಷತ್‌ ಸದಸ್ಯೆ ಬಲ್ಕಿಷ್‌ ಬಾನು ಉಪಸ್ಥಿತರಿದ್ದರು.

ವಿಡಿಯೋ ಕರೆ ಮಾಡಿದ್ದ ಎಂಎಲ್‌ಎ ಬಿ.ಕೆ.ಸಂಗಮೇಶ್ವರ್ 

ನಗರಸಭೆ ಅಧ್ಯಕ್ಷರ ಆಯ್ಕೆ ಚುನಾವಣೆ ಗೆ ಶಾಸಕ ಬಿ.ಕೆ.ಸಂಗಮೇಶ್ವರ್‌ ಗೈರಾಗಿದ್ದರು. ಚುನಾವಣೆ ಮುಗಿದ ನಂತರ ನೂತನ ಅಧ್ಯಕ್ಷೆ ಗೀತಾ ರಾಜಕುಮಾರ್‌ ಅವರಿಗೆ ವಿಡಿಯೋ ಕರೆ ಮಾಡಿ ಶಾಸಕ ಬಿ.ಕೆ. ಸಂಗಮೇಶ್ವರ್‌ ಶುಭ ಕೋರಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು