ವಾಹನ ಚಾಲಕರಿಗೆ ಸಂಚಾರಿ ನಿಯಮದ ಜಾಗೃತಿ

ವಿಜಯ ಸಂಘರ್ಷ ನ್ಯೂಸ್ 
ಕೆ.ಆರ್.ಪೇಟೆ: ವಾಹನ ಮಾಲೀಕರು, ಚಾಲಕರು ತಮ್ಮ ವಾಹನಗಳನ್ನು ರಸ್ತೆಗೆ ಇಳಿಸುವ ಮುನ್ನ ವಾಹನ ಪರವಾಗಿ, ಸುಸ್ಥಿತಿ ದೃಡೀಕರಣ ತೆರೆಗೆ ಸೇರಿದಂತೆ ಎಲ್ಲಾ ದಾಖಲಾತಿಗಳನ್ನು ಸರಿಪಡಿಸಿ ಕೊಂಡಿರಬೇಕು ಎಂದು ನಾಗಮಂಗಲ  ಆರ್.ಟಿ.ಓ ಕಿರಿಯ ನಿರೀಕ್ಷಕಿ ಶಬಾಜಾ ಭಾನು ತಿಳಿಸಿದರು.

ಪಟ್ಟಣದ ಬಸ್ ನಿಲ್ದಾಣ ಮುಂಭಾಗ ದಲ್ಲಿ 6 ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸಾ ಚರಣೆಯ ಅಂಗವಾಗಿ ಸಭೆ ನಡೆಸಿ ಚಾಲಕರಿಗೆ ಮತ್ತು ಸಾರ್ವಜನಿಕ ರಿಗೆ ಸಂಚಾರಿ ನಿಯಮದ ಬಗ್ಗೆ ಜಾಗೃತಿ ಮೂಡಿಸಿ ಮಾತನಾಡಿದರು.

ರಸ್ತೆಯ ಎಲ್ಲರೂ ನಿಯಮ ಪಾಲನೆ ಮಾಡಿದರೆ ಅಪಘಾತಗಳ ಸಂಖ್ಯೆ ಯಲ್ಲಿ ಗಣನೀಯ ಕಡಿಮೆ ಆಗುವುದರಲ್ಲಿ ಅನುಮಾನವಿಲ್ಲ. ಬಹುತೇಕ ಅಪಘಾತಗಳು ಸಂಭವಿಸು ತ್ತಿರುವುದು ಅತೀವೇಘ ಅಜಾಗೃತಿ ಚಾಲನೆ ಮತ್ತು ಮದ್ಯಪಾನ ಮಾಡಿ ಚಾಲನೆ ಮಾಡುತ್ತಿರುವುದರಿಂದ, ಅನಾಹುತ ನಡೆಯುತ್ತಿದ್ದು, ಪ್ರತಿ ಯೊಬ್ಬರೂ ಸಂಚಾರಿ ನಿಯಮಗಳನ್ನು ಪಾಲನೆಯ ಮಾಡುವ ಜೊತೆಗೆ ಜಾಗೃತಿಯಿಂದ ಚಾಲನೆ ಮಾಡಬೇಕು, ರಸ್ತೆ ವಿಶಾಲಾವಿದ್ದಾಗ ಮಾತ್ರ ಬೇರೊಂದು ವಾಹನವನ್ನು ಓವರ್ಟೇಕ್ ಮಾಡಬೇಕು. ಎಷ್ಟು ತುರ್ತು ಕೆಲಸ ಇದ್ದರೂ ಆತುರದಿಂದ ವಾಹನ ಚಾಲನೆ ಮಾಡಬಾರದು. ಒಂದು ವೇಳೆ ನಿಯಮ ಪಾಲನೆ ಮಾಡಿರುವುದು ಕಂಡುಬಂದರೆ ದಂಡ ವಿಧಿಸುವ ಜೊತೆಗೆ ವಾಹನವನ್ನು ಮುಟ್ಟುಗೊಲು ಹಾಕಿಕೊಳ್ಳುವ ಅವಕಾಶ ಇದ್ದು ವಾಹನ ಮಾಲೀಕರು ಎಚ್ಚರಿಕೆಯಿಂದ ಇರಬೇಕು ಎಂದು ಶಹಜಾಭಾನು ಮನವಿ ಮಾಡಿದರು.

ಈ ಸಮಯದಲ್ಲಿ ಅಗ್ರಹಾರ ರಾಜೇಶ್, ಆಟೋಚಾಲಕ ಮತ್ತು ಮಾಲೀಕರ ಸಂಘದ ತಾಲೂಕು ಗೌರವ ಅಧ್ಯಕ್ಷ ಎಚ್.ಬಿ. ಮಂಜುನಾಥ,ಚಾಲಕರಾದ ನಟರಾಜ್, ಮಂಜು, ಕಮಾರ್ ,ಅನಿಲ್ ,ವಿಜಿ ಮತ್ತಿತರರು ಹಾಜರಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು