ವಿಜಯ ಸಂಘರ್ಷ ನ್ಯೂಸ್
ಕೆ ಆರ್ ಪೇಟೆ: ತಾಲ್ಲೂಕು ಕಿಕ್ಕೇರಿ ಹೋಬಳಿ ಬೋಳಮಾರನಹಳ್ಳಿ ಗ್ರಾಮದಲ್ಲಿ ನಿರ್ಮಿಸಿರುವ ಶ್ರೀ ಲಕ್ಷ್ಮೀದೇವಮ್ಮನವರ ನೂತನ ದೇವಾಲಯ ಲೋಕಾರ್ಪಣೆ ಇಂದಿನಿಂದ ಫೆ: 8 ರ ಶನಿವಾರದವರೆಗೆ ಅದ್ದೂರಿಯಾಗಿ ನೆರವೇರಲಿದೆ.
ಕಾರ್ಯಕ್ರಮದಲ್ಲಿ ಪರಮಪೂಜ್ಯ ಶ್ರೀ ಡಾ.ನಿರ್ಮಲಾನಂದನಾಥ ಸ್ವಾಮೀಜಿ, ಕೇಂದ್ರ ಸಚಿವ ಹೆಚ್ ಡಿ ಕುಮಾರ ಸ್ವಾಮಿ, ಕೃಷಿ ಸಚಿವ ಚಲುವರಾಯ ಸ್ವಾಮಿ, ಲೋಕಸಭಾ ಸದಸ್ಯ ಡಾ.ಸಿ ಎನ್ ಮಂಜುನಾಥ್, ಮಾಜಿ ಸಚಿವ ಸಿ ಎಸ್ ಪುಟ್ಟರಾಜು,ಹೆಚ್ ಡಿ ರೇವಣ್ಣ, ವಿಧಾನಸಭಾ ಸದಸ್ಯ ಹೆಚ್ ಟಿ ಮಂಜು, ವಿಧಾನ ಪರಿಷತ್ ಸದಸ್ಯ ಸೂರಜ್ ರೇವಣ್ಣ ,ನಿಖಿಲ್ ಕುಮಾರ ಸ್ವಾಮಿ,ಮನ್ಮುಲ್ ನಿರ್ದೇಶಕ ಡಾಲು ರವಿ, ಆರ್ ಟಿ ಒ ಅಧಿಕಾರಿ ಮಲ್ಲಿಕಾರ್ಜುನ್,ಕಿಕ್ಕೇರಿ ಟೈಗರ್ ಪ್ರಭಾಕರ್, ಬಿ ಎಂ ಕಿರಣ್, ಕೆಪಿಸಿಸಿ ಸದಸ್ಯ ಕಿಕ್ಕೇರಿ ಸುರೇಶ್ ಸೇರಿದಂತೆ ಗಣ್ಯರು ಆಗಮಿಸುತ್ತಿರುವ ಸಂದರ್ಭ ದಲ್ಲಿ ತಾಲ್ಲೂಕಿನ ಭಕ್ತಾದಿಗಳು ಕಾರ್ಯಕ್ರಮಕ್ಕೆ ಆಗಮಿಸಿ ಕಾರ್ಯ ಕ್ರಮವನ್ನು ಯಶಸ್ವಿಗೊಳಿಸ ಬೇಕೆಂದು ಬೋಳಮಾರನಹಳ್ಳಿ ಗ್ರಾಮಸ್ಥರಾದ ಶ್ರೀನಿವಾಸ್,ಸಮಾಜ ಸೇವಕ ಬಿ ಎಸ್ ಶಿವಲಿಂಗೇಗೌಡ, ಸರ್ವೆ ಮಂಜುನಾಥ್ ಮನವಿ ಮಾಡಿದರು.
Tags
ಕೆ ಆರ್ ಪೇಟೆ ವರದಿ