ವಿಜಯ ಸಂಘರ್ಷ ನ್ಯೂಸ್
ಕೆ.ಆರ್.ಪೇಟೆ: ತಾಲೂಕಿನ ಕಿಕ್ಕೇರಿ ಹೋಬಳಿಯ ಆನೆಗೋಳ ಗ್ರಾಮ ದೇವತೆ ಶ್ರೀ ಆನೆಗೋಳದಮ್ಮ ಹಾಗೂ ಶ್ರೀ ಆಂಜನೇಯ ಸ್ವಾಮಿ ಕೃಪಾ ಪೋಷಿತ ನಾಟಕ ಮಂಡಳಿ ವತಿಯಿಂದ ಸಂಪೂರ್ಣ ರಾಮಾಯಣ ಅಥವಾ ಶ್ರೀ ರಾಮ ರಾವಣನ ಯುದ್ಧ ಎಂಬ ಪೌರಾಣಿಕ ನಾಟಕ ಶ್ರೀ ರಾಮನ ಜನ್ಮಸ್ಥಳ ಅಯೋಧ್ಯೆಯಲ್ಲಿ ಮಾ: 4 ರ ಬೆಳಗ್ಗೆ 10 ಗಂಟೆಯಲ್ಲಿ ಅಯೋಧ್ಯ ರಾಮಕಥಾ ಪಾರ್ಕ್ ನಲ್ಲಿ ನಡೆಯಲಿ ರುವ ನಾಟಕ ಪ್ರದರ್ಶನಕ್ಕೆ ಸುಮಾರು 170ಕ್ಕೂ ಹೆಚ್ಚು ಕಲಾವಿದರು, ಕಲಾ ಪೋಷಕರು ಸರ್ಕಾರಿ ಬಸ್,ರೈಲು, ವಿಮಾನದ ಮೂಲಕ ತೆರಳಿದರು.
ಅಯೋಧ್ಯೆಯಲ್ಲಿ ಪೌರಾಣಿಕ ನಾಟಕ ನೇತೃತ್ವ ವಹಿಸಿರುವ ಕಲಾವಿದ ಜಯಲಿಂಗೇಗೌಡ ಮಾತನಾಡಿ ಸಾಂಸ್ಕೃತಿಕ, ಆಧ್ಯಾತಿಕತೆಯ ರಾಜಧಾನಿಯಂತಿರುವ ಉತ್ತರ ಪ್ರದೇಶದಲ್ಲಿ ಇದೀಗ ಅಯೋಧ್ಯೆಯೇ ದೇಶದ ಗಮನ ಸೆಳೆದು ಹಿಂದೂಗಳ ಆರಾಧ್ಯ ದೈವ, ಮಾರ್ಯದಾ ಪುರುಷೋತ್ತಮ ಶ್ರೀರಾಮನ ಜನಸ್ಥಳ ವಾದ ಆಯೋಧ್ಯೆಯಲ್ಲಿ ರಾಮಲಲ್ಲಾನ ಭವ್ಯ ಮಂದಿರ ಲೋಕಾರ್ಪಣೆ ಗೊಂಡು ಒಂದು ವರ್ಷ ಪೂರ್ಣ ಗೊಂಡಿದೆ. ಇಂತಹ ಪವಿತ್ರ ಕ್ಷೇತ್ರಕ್ಕೆ ಹೋಗುವುದೇ ಸೌಭಾಗ್ಯ ಇಂತಹ ಸಂದರ್ಭದಲ್ಲಿ ನಮ್ಮ ಶ್ರೀ ಆನೆಗೋಳ ದಮ್ಮ ಹಾಗೂ ಶ್ರೀ ಆಂಜನೇಯ ಸ್ವಾಮಿ ಕೃಪಾ ಪೋಷಿತ ನಾಟಕ ಮಂಡಳಿ ವತಿಯಿಂದ ಸಂಪೂರ್ಣ ರಾಮಾಯಣ ಅಥವಾ ಶ್ರೀ ರಾಮ ರಾವಣನ ಯುದ್ಧ ಎಂಬ ಸುಂದರ ಪೌರಾಣಿಕ ನಾಟಕವನ್ನು ರಾಮನ ಜನ್ಮಸ್ಥಳದಲ್ಲೆ ನಾಟಕ ಪ್ರದರ್ಶಿಸಲು ನಮಗೆ ಅವಕಾಶ ಸಿಕ್ಕಿರುವುದು ನಮ್ಮ ಪೂರ್ವ ಜನ್ಮದ ಪುಣ್ಯ ಹಾಗೂ ಪೌರಾಣಿಕ ನಾಟಕ ಕಲಾವಿದರಿಗೆ ತಂದ ಗೌರವ ಎಂದು ಹರ್ಷ ವ್ಯಕ್ತಪಡಿಸಿದರು.
ರಾಮಾಯಣ ನಾಟಕದಲ್ಲಿ ಜಯಲಿಂಗೇಗೌಡ ರಾಮನ ಪಾತ್ರ ಮಾಡಿದರೆ, ಬಿ.ಎಸ್ ಮಂಜುನಾಥ್ (ರಾವಣ),ಚೈತ್ರ (ಸೀತೆ), ಸಂತೋಷ್ (ಲಕ್ಷ್ಮಣ), ಪ್ರಕಾಶ (ದಶರಥ), ನಿಂಗರಾಜು(ಭರತ), ಶಿವಲಿಂಗು (ಆಂಜನೇಯ), ಕೃಷ್ಣಮೂರ್ತಿ ರಾವ್ (ವಾಲಿ ), ರಮೇಶ್ (ವಸಿಷ್ಠ), ಶೇಖರ್ (ಶತ್ರುಜ್ಞ), ಶಂಕ್ರೇಗೌಡ (ಶೂತ್ರಧಾರಿ), ಶ್ರೀನಿವಾಸ ಮೂರ್ತಿ(ಸುಗ್ರೀವ), ಪುಟ್ಟರಾಜು (ಜಾಂಬವಂಥ), ಸೋಮಾಚಾರ (ಸುಮಂತ), ಹರೀಶ್ (ಪ್ರಹಸ್ತ ) ಇತರ ಪಾತ್ರ ನಿರ್ವಹಿಸಲಿದ್ದಾರೆ.
ಈ ಸಂದರ್ಭದಲ್ಲಿ ಡ್ರಾಮಾ ಮಾಸ್ಟರ್ ಪ್ರಜ್ವಲ್ ಜಗದೀಶ್,ದಶರಥ, ಸಂತೋಷ, ನಿಂಗರಾಜು,ಕೃಷ್ಣಮೂರ್ತಿ, ರಮೇಶ್, ಶ್ರೀನಿವಾಸ್,ಮೂರ್ತಿ, ಪುಟ್ಟರಾಜು,ಸೋಮಾಚಾರ, ಹರೀಶ್, ಚೈತ್ರ,ಶೋಭಾ, ಸೇರಿದಂತೆ ಕಲಾವಿದರಿದ್ದರು.
(✍️ಸುದ್ದಿಯೊಂದಿಗೆ ಮನು ಮಾಕವಳ್ಳಿ ಕೆ ಆರ್ ಪೇಟೆ)
Tags
ಕೆ ಆರ್ ಪೇಟೆ ವರದಿ