ಭೂಮಾಪನಾ ಪರಿವೀಕ್ಷಕ ಟಿ.ಮಲ್ಲಿಕಾರ್ಜುನಯ್ಯಗೆ ಕಾರಾಗೃಹ ಶಿಕ್ಷೆ

ವಿಜಯ ಸಂಘರ್ಷ ನ್ಯೂಸ್ 
ಭದ್ರಾವತಿ:ಬಸವರಾಜಪ್ಪ.ಎಂ.ಹೆಚ್ ಬಿನ್ ಲೇಟ್ ಹನುಮಂತಪ್ಪ, ಮತ್ತಿಘಟ್ಟ ಗ್ರಾಮ. ಸ.ನಂ.56/10 ರಲ್ಲಿನ 1 ಎಕರೆ 20 ಗುಂಟೆ ಜಮೀನಿನ ಪಕ್ಕ ಪೋಡಿ ದುರಸ್ಥಿ ಮಾಡಿಕೊಡುವ ಬಗ್ಗೆ ಎಡಿಎಲ್ಆರ್ ಕಛೇರಿಯ ಭೂಮಾಪನಾ ಪರಿವೀಕ್ಷಕ ಟಿ.ಮಲ್ಲಿಕಾರ್ಜುನಯ್ಯ ಎಂಬುವವರು ಲಂಚದ ಹಣಕ್ಕೆ ಬೇಡಿಕೆ ಇಟ್ಟ ಬಗ್ಗೆ ಲೋಕಾಯುಕ್ತ ಪೊಲೀಸ್ ಠಾಣೆಗೆ ದೂರು ನೀಡಿರುತ್ತಾರೆ.

ದಿನಾಂಕ:23/07/2013 ರಂದು ಸದರಿ ಅಪಾದಿತ ಅಧಿಕಾರಿ ಪಿರ್ಯಾದುದಾರರಿಂದ 15 ಸಾವಿರ ರೂ ಲಂಚದ ಹಣವನ್ನು ಶಿವಮೊಗ್ಗ ವಿನೋಬನಗರ ಬಡಾವಣೆಯ ಕೆಂಚಪ್ಪ ಲೇಔಟ್ ನ ಆಪಾದಿತರ ವಾಸದ ಮನೆಯಲ್ಲಿ ಕೇಳಿ ಪಡೆದುಕೊಳ್ಳುವಾಗ ಟ್ರ‍್ಯಾಪ್ ಮಾಡಲಾಗಿರುತ್ತದೆ.

ಲೋಕಾಯುಕ್ತ ಪೊಲೀಸ್ ಇನ್ಸ್ಪೆಕ್ಟರ್ ಕೆ.ಸಿ.ಪುರುಷೋತ್ತಮ ಪ್ರಕರಣವನ್ನು ತನಿಖೆ ಕೈಗೊಂಡು ಆಪಾದಿತರ ವಿರುದ್ದ ನ್ಯಾಯಾ ಲಯಕ್ಕೆ ದೋಷಾರೋಪಣಾ ಪತ್ರವನ್ನು ಸಲ್ಲಿಸಿರುತ್ತಾರೆ.

ಈ ಪ್ರಕರಣವು ನ್ಯಾಯಾಲಯದಲ್ಲಿ ವಿಚಾರಣೆ ನಡೆದು ದಿನಾಂಕ:28/02/2025 ರಂದು ಶಿವಮೊಗ್ಗದ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ಹಾಗೂ ವಿಶೇಷ ನ್ಯಾಯಾಲಯದ ನ್ಯಾಯಾಧೀಶರಾದ ಮರುಳಸಿದ್ದಾರಾದ್ಯ ಹೆಚ್.ಜೆ. ರವರು ಆರೋಪಿ ಟಿ.ಮಲ್ಲಿಕಾರ್ಜುನಯ್ಯ ಇವರಿಗೆ ಒಂದು ವರ್ಷ ಆರು ತಿಂಗಳು ಕಾರಾಗೃಹ ಶಿಕ್ಷೆ ಮತ್ತು 30,000/- ರೂ ದಂಡ ವಿಧಿಸಿ ಆದೇಶಿಸಿರುತ್ತಾರೆ.

ಸರ್ಕಾರದ ಪರವಾಗಿ ವಿಶೇಷ ಸಾರ್ವಜನಿಕ ಅಭಿಯೋಜಕ ಎಂ.ಡಿ.​ ಸುಂದರ್ ರಾಜ್ ರವರು ವಾದ ಮಂಡಿಸಿರುತ್ತಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು