ಎನ್ ಎಸ್ ಎಸ್ ಅನುಭವದ ಜತೆಗೆ ದೈಹಿಕ, ಬೌದ್ಧಿಕ, ಆರೋಗ್ಯ ಶಿಕ್ಷಣವನ್ನು ನೀಡುತ್ತದೆ: ಮಲ್ಲಿಕಾರ್ಜುನ್

ವಿಜಯ ಸಂಘರ್ಷ ನ್ಯೂಸ್ 

ಕೆ.ಆರ್.ಪೇಟೆ: ರಾಷ್ಟ್ರೀಯ ಸೇವಾ ಶಿಬಿರ ಪ್ರಾಮಾಣಿಕತೆಯ ಜತೆ ಅನುಕಂಪ ಮತ್ತು ಪರಸ್ಪರ ಸಹಾಯ ಮಾಡುವ ಸಾಮಾಜಿಕ ಚಿಂತನೆಯನ್ನು ಒದಗಿಸಿ.ಉತ್ತಮ ಅನುಭವದ ಜತೆಗೆ ದೈಹಿಕ, ಬೌದ್ಧಿಕ, ಆರೋಗ್ಯ ಶಿಕ್ಷಣ ವನ್ನು ನೀಡುತ್ತದೆ ಎಂದು ಸಮಾಜ ಸೇವಕ ಆರ್.ಟಿ.ಓ ಮಲ್ಲಿಕಾರ್ಜುನ್ ತಿಳಿಸಿದರು.


ತಾಲ್ಲೂಕಿನ ಹಿರೀಕಳಲೆ ಗ್ರಾಮದಲ್ಲಿ ಕೆ.ಆರ್.ಪೇಟೆ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ವತಿಯಿಂದ ನಡೆದ ರಾಷ್ಟ್ರೀಯ ಸೇವಾ ಯೋಜನೆ ವಾರ್ಷಿಕ ವಿಶೇಷ ಶ್ರಮದಾನ ಶಿಬಿರ (ಎನ್.ಎಸ್.ಎಸ್ ) ಶಿಬಿರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.


ಹಿರಿಕಳಲೆ ಗ್ರಾಮದಲ್ಲಿ ಶಿಬಿರಾರ್ಥಿಗಳು ಮಾಡಿರುವ ಕಾರ್ಯ ಶ್ಲಾಘನಾರ್ಹ. ಕಲ್ಯಾಣಿ ಸ್ವಚ್ಛ ಮಾಡಿರುವುದು, ದೇವಸ್ಥಾನದ ಆವರಣದಲ್ಲಿ ಗಿಡ ನೆಟ್ಟಿರುವುದು ಹಾಗೂ ಕೆರೆ ಕಟ್ಟೆ ಸ್ವಚ್ಛಗೊಳಿಸಿರುವುದು,ರಸ್ತೆ ಬದಿಗಳಲ್ಲಿ ಗಿಡಗಳನ್ನು ನೆಟ್ಟಿರುವುದು ಉತ್ತಮ ಕೆಲಸ ಎಂದರು.


ಗ್ರಾಮಸ್ಥರು ವಿದ್ಯಾರ್ಥಿಗಳಿಗೆ ಎಲ್ಲ ರೀತಿಯ ಸಹಕಾರ ನೀಡಿರುವುದು ಸಂತೋಷದ ವಿಷಯ.ಎಲ್ಲಾ ಗ್ರಾಮಗಳಲ್ಲಿಯೂ ಈ ರೀತಿಯ ಪ್ರಜ್ಞೆ ಮೂಡಬೇಕು ಎಂದು ತಿಳಿಸಿದ ಅವರು, ವಿದ್ಯಾರ್ಥಿಗಳು ಕನಿಷ್ಟ ಸೌಲಭ್ಯದಲ್ಲಿ ಹೇಗೆ ಜೀವನವನ್ನು ರೂಡಿಸಿಕೊಳ್ಳ ಬೇಕು. ಮತ್ತು ಸಮಾಜಕ್ಕೆ ಹೇಗೆ ಒಳಿತನ್ನು ಮಾಡಬೇಕು ಎಂಬುದರ ಬಗ್ಗೆ ಸಲಹೆ ನೀಡಿದರು.


ಕಾರ್ಯಕ್ರಮ ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಂಗ್ರೆಸ್ ಮುಖಂಡ ಬೂಕನಕೆರೆ ವಿಜಯ ರಾಮೇಗೌಡ ಸ್ವಾತಂತ್ರ್ಯದ ನಂತರದ ದಿನಗಳಲ್ಲಿ ವಿದ್ಯಾರ್ಥಿಗಳಲ್ಲಿ ಸಾಮಾಜಿಕ ಸೇವಾ ಬದ್ಧತೆಯನ್ನು ಮೂಡಿಸಲು ಮತ್ತು ಪರಿಪೂರ್ಣ ವ್ಯಕ್ತಿತ್ವ ವಿಕಸನದ ಮೂಲ ಉದ್ದೇಶದೊಂದಿಗೆ, ರಾಷ್ಟ್ರೀಯ ಸೇವಾ ಯೋಜನೆಯನ್ನು ಪ್ರಾರಂಭ ಗೊಂಡಿತ್ತು ಕಲಿಕೆ ಎನ್ನುವುದು ಕೇವಲ ವಿದ್ಯಾರ್ಥಿ ಮತ್ತು ಶಿಕ್ಷಕರ ನಡುವಿನ ಕೊಂಡಿಯಾಗಿರದೆ, ವಿದ್ಯಾರ್ಥಿ ಮತ್ತು ಸಮುದಾಯದ ನಡುವೆ ಸುಖಕರ ವಾದ ಮತ್ತು ರಚನಾತ್ಮಕವಾದ ಸಂಬಂಧ ಬೆಳೆಯಬೇಕು ಎಂಬ ಆಶಯದೊಂದಿಗೆ, ಸ್ವಯಂ ಪ್ರೇರಿತ ರಾಗಿ ಸಮುದಾಯ ಸೇವಾಭಾವನೆ ಮೂಡಿಸಲು ರಾಷ್ಟ್ರೀಯ ಸೇವಾ ಯೋಜನೆಯನ್ನು ಜಾರಿಗೆ ತರಲಾಯಿತು ಎಂದು ನುಡಿದರು.


ಬಳಿಕ ಮೌಡ್ಯದ ಬಗ್ಗೆ ವಿದ್ಯಾರ್ಥಿಗಳಿಗೆ ವಿಶೇಷ ಉಪನ್ಯಾಸನವನ್ನು ಉಪನ್ಯಾಸಕ ಕತ್ತರಘಟ್ಟ ವಾಸು ಅರ್ಥಪೂರ್ಣವಾಗಿ ಉಪನ್ಯಾಸ ನೀಡಿದರು.


ಕಾರ್ಯಕ್ರಮದಲ್ಲಿ ಹಿರಿಕಳಲೆ ಗ್ರಾ. ಪಂ ಅಧ್ಯಕ್ಷೆ ರತ್ನಮ್ಮ ರಾಮಕೃಷ್ಣೇಗೌಡ,ಜಿ.ಪಂ ಮಾಜಿ ಸದಸ್ಯ ಕೋಡಿಮಾರನಹಳ್ಳಿ ದೇವರಾಜು,ಉಪನ್ಯಾಸಕ ವಾಸು, ಪಿ.ಎಲ್.ಡಿ ಬ್ಯಾಂಕ್ ಗೋವಿಂದರಾಜು, ಕಾಲೇಜಿನ ಪ್ರಾಂಶುಪಾಲ ಡಾ:ಪ್ರತಿಮಾ , ಎನ್. ಎಸ್.ಎಸ್ ಅಧಿಕಾರಿ ಚೂಡಾನಿಂಗಯ್ಯ , ಸಹ ಶಿಬಿರ ಅಧಿಕಾರಿಗಳಾದ ಚೇತನ, ಮಧು, ಕೆ.ಟಿ ಚಂದ್ರು, ವಿಶ್ವ,ಆರಾಧ್ಯ,ಗ್ರಾಮ ಮುಖಂಡರಾದ ರಾಮೇಗೌಡ, ನಾಗರಾಜೇಗೌಡ, ದೇವರಾಜೇಗೌಡ, ದಿಲೀಪ್ ಗೌಡ,ಕೃಷ್ಣಗೌಡ,ರಾಜೇಶ್, ಧರ್ಮೇಶ್, ಪ್ರತಾಪ್,ಗಣೇಶ್, ರಮೇಶ್, ವಿನಯ್, ಮಧುಕರಣ್,ಅಭಿಷೇಕ್,ಚಿಕ್ಕಯ್ಯ, ಗುಂಡ, ಚಿರಂಜೀವಿ,ಜಯಕೃಷ್ಣ, ಶಿವರಾಜ್, ಮಂಜೇಗೌಡ, ವಿಕಾಸ್, ಹರೀಶ್, ಸೇರಿದಂತೆ ಕಾಲೇಜು ವಿದ್ಯಾರ್ಥಿಗಳು ಇದ್ದರು.


*✍️ಸುದ್ದಿಯೊಂದಿಗೆ ಮನು ಮಾಕವಳ್ಳಿ ಕೆ ಆರ್ ಪೇಟೆ*

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು