ವಿಜಯ ಸಂಘರ್ಷ ನ್ಯೂಸ್
ಭದ್ರಾವತಿ: ನಗರದ ಭೂತನಗುಡಿ ಯಲ್ಲಿ ಶ್ರೀ ನೇತಾಜಿ ಸೇವಾ ಸಮಿತಿ ಹಾಗು ಶ್ರೀ ನೇತಾಜಿ ಯುವಕರ ಸಂಘದ ವತಿಯಿಂದ 88 ನೇ ವರ್ಷದ ಹೋಳಿ ಹಬ್ಬದ ಆಚರಣೆ ಶನಿವಾರ ಸಂಪನ್ನಗೊಳ್ಳಲಿದೆ.
ಶ್ರೀ ಕೃಷ್ಣ ರುಕ್ಕಿಣಿ ದೇವಸ್ಥಾನದ ಬಳಿ ವಿದ್ಯುತ್ ದೀಪಗಳಿಂದ ಅಲಂಕೃತ ಗೊಂಡ ಭವ್ಯ ಮಂಟಪದಲ್ಲಿ ಕಳೆದ 4 ದಿನಗಳಿಂದ ಮನ್ಮಥ ದೇವರನ್ನು ಪ್ರತಿಷ್ಠಾಪಿಸಲಾಗಿದ್ದು, ಪ್ರತಿದಿನ ವಿಶೇಷ ಪೂಜೆ ಹಾಗು ಮನಂಜನಾ ಕಾರ್ಯಕ್ರಮಗಳು ಜರುಗುತ್ತಿವೆ. ಶುಕ್ರವಾರ ಸಂಜೆ ಕೊಬ್ಬರಿ ತುಪ್ಪ ಗುಗ್ಗಳದ ಪೂಜೆ ನೆರವೇರಿತು. ನಾಳೆ ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 3 ಗಂಟೆವರೆಗೆ ಓಕುಳಿ ಆಟ(ಬಣ್ಣ ಹಚ್ಚುವ ಆಟ) ನಡೆಯಲಿದೆ.
ನಂತರ ಪ್ರಮುಖ ರಸ್ತೆಗಳಲ್ಲಿ ಮನ್ಮಥ ದೇವರ ಭವ್ಯ ಮೆರವಣಿಗೆ ನಡೆಯ ಲಿದ್ದು, ಅಂತಿಮವಾಗಿ ಮನ್ಮಥ ದೇವರ ದಹನದೊಂದಿಗೆ ಸಂಪನ್ನ ಗೊಳ್ಳಲಿದೆ. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮ ಯಶಸ್ವಿ ಗೊಳಿಸುವಂತೆ ಕೋರಲಾಗಿದೆ.
Tags
ಭದ್ರಾವತಿ ಹೋಳಿ