ವಿಜಯ ಸಂಘರ್ಷ
ಭದ್ರಾವತಿ: ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಹುಟ್ಟು ಹಬ್ಬದ ಅಂಗವಾಗಿ ಸೋಮವಾರ ಹಳೇನಗರದ ಕೋರ್ಟ್ ರಸ್ತೆಯ ಶ್ರೀ ಕನಕ ಆಟೋ ನಿಲ್ದಾಣದಲ್ಲಿ ಅದ್ದೂರಿಯಾಗಿ ಆಚರಿಸ ಲಾಯಿತು.
ಅಪ್ಪುಪ್ರತಿಮೆಗೆ ಮಾಲಾರ್ಪಣೆ ನೆರವೇರಿಸಿ ಸಿಹಿ ಹಂಚಿ, ನಂತರ ಸಾರ್ವಜನಿಕ ಆಸ್ಪತ್ರೆಯ ಒಳ ರೋಗಿಗಳಿಗೆ ಹಾಲು-ಹಣ್ಣು- ಬ್ರೆಡ್ ವಿತರಿಸಿದರು.
ಕಾರ್ಯಕ್ರಮಕ್ಕೆ ಪಿಎಲ್ ಡಿ ಬ್ಯಾಂಕ್ ಅಧ್ಯಕ್ಷ ಬಿ.ಕೆ.ಶಿವಕುಮಾರ್, ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಬಿ.ಸಿದ್ಧಬಸಪ್ಪ, ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರ ಸದಸ್ಯ ರವಿಕುಮಾರ್, ಮುಖಂಡರಾದ ಬಿ.ಎಸ್.ಗಣೇಶ್, ಕೇಸರಿ ಪಡೆ ಗಿರೀಶ್, ಕುಮಾರ್ ಮಾಸ್ಟರ್, ಗಿರೀಶ್, ನದೀಮ್ ಬಾಷಾ, ಲವೇಶ್ ಕುಮಾರ್, ಫೋಟೋ ಗ್ರಾಫರ್ ಶ್ರೀನಿವಾಸ್,ಸುರೇಶ್, ಗುರುಮೂರ್ತಿ ಮತ್ತಿತರರು ಭಾಗವಹಿಸಿದ್ದರು.