ಮಾ: 19ಕ್ಕೆ ಉಚಿತ ಆರೋಗ್ಯ ತಪಾಸಣಾ ಶಿಬಿರ

ವಿಜಯ ಸಂಘರ್ಷ 
ಶಿವಮೊಗ್ಗ: ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಫ್ರೆಂಡ್ಸ್ ಸೆಂಟರ್ ಮಹಿಳಾ ವಿಭಾಗದಿಂದ ನಗರದ ಶುಭಂ ಹೋಟೆಲ್ ಮುಂಭಾಗ  ಶಾಂತಾ ನರ್ಸಿಂಗ್ ಹೋಂ ಪಕ್ಕದ ಸತ್ಯಶ್ರೀ ಆರ್ಕೇಡ್‌ನಲ್ಲಿ ಮಾ: 19ರಂದು ಬೆಳಗ್ಗೆ 10ಕ್ಕೆ ಉಚಿತ ಆರೋಗ್ಯ ತಪಾಸಣಾ ಶಿಬಿರ ಹಮ್ಮಿಕೊಳ್ಳಲಾಗಿದೆ.

ಶಿಬಿರ ಉದ್ಘಾಟನಾ ಕಾರ್ಯಕ್ರಮದಲ್ಲಿ ವೈದ್ಯ ಡಾ. ಚಂದುಶ್ರೀ, ಐಎಂಎ ಶಿವಮೊಗ್ಗ ಕಾರ್ಯದರ್ಶಿ ಡಾ. ವಿನಯಾ ಶ್ರೀನಿವಾಸ್, ಡಾ. ಎಚ್.ಸಿ.ಶಿವಕುಮಾರ್, ಫ್ರೆಂಡ್ಸ್ ಸೆಂಟರ್ ಅಧ್ಯಕ್ಷ ಧನರಾಜ.ಬಿ.ಜಿ. ಪಾಲ್ಗೊಳ್ಳುವರು. 

ಮಹಿಳಾ ವಿಭಾಗದ ಅಧ್ಯಕ್ಷೆ ಸಪ್ನಾ ಬದರೀನಾಥ್ ಅಧ್ಯಕ್ಷತೆ ವಹಿಸುವರು. ಕಣ್ಣು ತಪಾಸಣೆ ಪರೀಕ್ಷೆಗೆ ವಾಸನ್ ಐ ಕೇರ್ ಶಿವಮೊಗ್ಗ ಸಹಕಾರ ನೀಡುವರು. 

ಹೆಚ್ಚಿನ ಮಾಹಿತಿಗೆ ಮೊ.ಸಂ. 9481500004, 8088882425 ಸಂಪರ್ಕಿಸಬಹುದಾಗಿದೆ ಎಂದು ಫ್ರೆಂಡ್ಸ್ ಸೆಂಟರ್ ಮಹಿಳಾ ವಿಭಾಗದ ಅಧ್ಯಕ್ಷೆ ಸಪ್ನಾ ಬದರೀನಾಥ್, ಕಾರ್ಯದರ್ಶಿ ಸ್ಮಿತಾ ನವೀನ್ ತಿಳಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು